1. தமிழ்
  2. తెలుగు
  3. ??????
  4. Hindi
  5. Tamil
  6. Telugu
  7. Malayalam
  8. Kannada

ಹಾಡಿನೊಂದಿಗೆ ಸೂಪರ್ ರಂಗ ಮುಕ್ತಾಯ

IndiaGlitz [Monday, May 05, 2014]
Comments

ತೆಲುಗು ಭಾಷೆಯಲ್ಲಿ 'ಕಿಕ್' ಇಲ್ಲಿ 'ಸೂಪರ್ ರಂಗ'. ಸೂಪರ್ ಸ್ಟಾರ್ ಉಪೇಂದ್ರ ಅವರ ವರ್ಚಸ್ಸಿಗೆ ತಕ್ಕ ಹಾಗೆ ಈ ಹಿಂದೆ ನಿರ್ಮಾಪಕ 'ಗಾಡ್ ಫಾಧರ್' ನಿರ್ಮಿಸಿದ್ದರು. ಅದೇಕೋ ಅವರಿಗೆ ಯಶಸ್ಸು ತಂದು ಕೊಡಲಿಲ್ಲ. ಈಗ 'ಸೂಪರ್ ರಂಗ' ಸೂಪರ್ ಸಕ್ಸಸ್ ಆಗುವ ಹಂಬಲದಲ್ಲಿ ಕೆ ಮಂಜು ಇದ್ದಾರೆ.

ಕೆ ಮಂಜು ಸಿನೆಮಾಸ್ ಬಹು ನಿರೀಕ್ಷಿತ ಚಿತ್ರ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ 'ಸೂಪರ್ ರಂಗ' ಚಿತ್ರದ ಹಾಡೊಂದು ಯುರೋಪ್ ದೇಶದ ಸ್ಲೊವೇನಿಯ, ಸೆಳ್ಳೈ, ಲುಜಾಣ, ಐಸ್ ಕವ್ವ, ಫುಟ್ ಸ್ಟ್ರೀಟ್, ಚರ್ಚ್ ಸರ್ಕಲ್, ಬ್ಲೆಡ್ ರಿವರ್, ರಸ್ತೆಗಳು ಹಾಗೂ ಫೋರ್ಟ್ ಗಳಲ್ಲಿ ಚಿತ್ರೀಕರಿಸಲಾಗಿದೆ. ನನಗೂ ನಿನಗೂ ಉಸಿರಾಟ ಎಂದು ಒಂದೇ..ಎರಡು ಹೃದಯದ ಎದೆ ಬಡಿತ ಒಂದೇ, ಹಾಡಿನಲ್ಲೂ ಒಂದೇ, ಹಸಿವಿನಲ್ಲೂ ಒಂದೇ, ಹಗಳಿರಳು ಒಂದೇ, ಹಣೆಬರಹದಲುಒಂದೇ.... ಎಂಬ ಗೀತೆಗೆ ಉಪೇಂದ್ರ ಹಾಗೂ ಕೃತಿ ಖರ್ಬಂದ ಅವರ ಅಭಿನಯಕ್ಕೆ ಹಾಡಿನ ನೃತ್ಯವನ್ನು ಇಮ್ರಾನ್ ಸರ್ದಾರಿಯ ಅವರು ನಿರ್ದೇಶನ ಮಾಡಿದರು.

ಸಾಧು ಕೋಕಿಲ ಅವರ ನಿರ್ದೇಶನದಲ್ಲಿ, ಕೆ ಮಂಜು ನಿರ್ಮಾಣದ 'ಸೂಪರ್ ರಂಗ' ಡಿ ಟಿ ಎಸ್ ರೇರೆಕಾರ್ಡಿಂಗ್ ಹಂತವನ್ನು ತಲುಪಿದೆ. ಅರ್ಜುನ್ ಜನ್ಯ ಅವರ ಸಂಗೀತ, ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇದೆ.

ಉಪೇಂದ್ರ, ಕೃತಿ ಖರಬಂದ, ರಘು ಮೂಕೆರ್ಜಿ, ಪ್ರಿಯಾಂಕ, ದೊಡ್ಡಣ್ಣ, ರಂಗಾಯಣ ರಘು, ಬುಲ್ಲೆಟ್ ಪ್ರಕಾಷ್,ದಯಾನಂದ, ಸಿದ್ಲಿಂಗು ಶ್ರೀಧರ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.
Shringara on Floors

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.