1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಮಹಾಕಾಳಿ ಮಾತು

IndiaGlitz [Friday, May 09, 2014]
Comments

ಮಹಾಕಾಳಿಗೆ ನಡೆಯುವುದು ಪೂಜೆ. ಆದರೆ ಇಲ್ಲಿ ಮಾತಿನ ಪೂಜೆ ನಡೆದಿದೆ. ಇದು 'ಮಹಾಕಾಳಿ' ಮಾಲಾಶ್ರೀ ಅವರ ಸಿನೆಮಾದ ಬಗ್ಗೆ.

ಈ ಮಹಾಕಾಳಿ ಸಿನೆಮಾ ಒಳಗೆ ಮಾಲಾಶ್ರೀ ಅವರು ತಪ್ಪು ಮಾಡಿದವರಿಗೆ ಸರಿಯಾಗೇ ಪೂಜೆ ಮಾಡಿರ್ತಾರೆ ಬಿಡಿ. ಎಷ್ಟಾದರೂ ಅವರು ಸಾಹಸ ಸರದಾರಿಣಿ.

ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ಕಶ್ಯಪ್ ಅವರು ನಿರ್ಮಿಸುತ್ತಿರುವ 'ಮಹಾಕಾಳಿ' ಚಿತ್ರಕ್ಕೆ ಇದೇ ಹತ್ತರಿಂದ ಮಾತಿನ ಜೋಡಣೆ ಆರಂಭವಾಗಲಿದೆ. ನಾಲ್ಕು ಹಾಡುಗಳ ಹಾಗೂ ಒಂದು ಸಾಹಸ ಸನ್ನಿವೇಶದ ಚಿತ್ರೀಕರಣ ಬಾಕಿಯಿದ್ದು ಮೇ ಹನ್ನೆರಡರಿಂದ ಪ್ರಾರಂಭವಾಗಲಿದೆ.

ಅಜಯ್ ಕುಮಾರ್ ಅವರು ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ಎಸ್.ಮಹೇಂದರ್ ನಿರ್ದೇಶಿಸುತ್ತಿದ್ದಾರೆ. ಸೆಲ್ವಂ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅನಿಲ್ಕುಮಾರ್ ಸಂಭಾಷಣೆ ಬರೆದಿದ್ದಾರೆ.

ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಮಾಲಾಶ್ರೀ ಅಭಿನಯಿಸುತ್ತಿದ್ದಾರೆ. ಶ್ರೀನಿವಾಸಮೂರ್ತಿ, ಎಂ.ಎನ್.ಲಕ್ಷ್ಮೀದೇವಿ, ಪದ್ಮಿನಿಪ್ರಕಾಶ್, ಜೈಜಗದೀಶ್, ಮೈಕೋ ನಾಗರಾಜ್, ಭಜರಂಗಿ ಲೋಕಿ, ಪ್ರೆಮಲತಾ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.



Other News


ನಟೋರಿಯಸ್ ಸಿದ್ಧ

Not Give Up Basavanna Raju

Sanjotha Another Lady Director

Kaviraj to Wed!

ನಟೋರಿಯಸ್ ಸಿದ್ಧ





Copyright 2017 IndiaGlitz. All rights reserved. This material may not be published, broadcast, rewritten, or redistributed.



Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.