1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಮರಿ ಟೈಗರ್ ಬರ್ತಾವ್ನೆ

IndiaGlitz [Friday, May 09, 2014]
Comments

ಅಪ್ಪನನ್ನೇ ಹೋಲುವ ಮಗ. ಅದೇ ಟೈಗರ್ ಪ್ರಭಾಕರ್ ಇಂದು ಮಗನ ರೂಪದಲ್ಲಿ ಕಾಣಿಸುತ್ತಿದ್ದಾರೆ. ಈ ಸಿನೆಮಾ ಶೀರ್ಷಿಕೆ ಅಂತೂ ಟೈಗರ್ ಪ್ರಭಾಕರ್ ಅವರಿಗೆ ನೀಡಿದ ಬಿರುದೆ ಆಗಿದೆ. ಟೈಗರ್ ಘರ್ಜಿಸಲು ತಯಾರಿ ಜೋರಾಗಿ ನಡೆಯುತ್ತಿದೆ. ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ಕಶ್ಯಪ್ ನಿರ್ಮಿಸುತ್ತಿರುವ 'ಮರಿಟೈಗರ್ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಇದೇ ತಿಂಗಳ ಕೊನೆಗೆ ಆರಂಭವಾಗಲಿದೆ.

ವಿನೋದ್ಪ್ರಭಾಕರ್ ನಾಯಕರಾಗಿರುವ ಈ ಚಿತ್ರದ ನಾಯಕಿ ತೇಜು. ರಾಜು ತಾಳಿಕೋಟೆ, ಬುಲೆಟ್ ಪ್ರಕಾಶ್, ಭರತ್, ಮನೋಜ್ಸಿಂಗ್, ಶಂಖನಾದ ಅರವಿಂದ್, ನಾಗರಾಜು ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.

ಪಿ.ಎನ್.ಸತ್ಯ ನಿರ್ದೇಶನದ ಈ ಚಿತ್ರಕ್ಕೆ ಅಜಯಕುಮಾರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ರಾಕ್ರವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜೈಆನಂದ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಈಶ್ವರಿಕುಮಾರ್ ಕಲಾನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ನಾಗೇಂದ್ರಪ್ರಸಾದ್, ಕವಿರಾಜ್, ಕಮಲಸಾರಥಿ ತಂಗಾಳಿ ನಾಗರಾಜ್, ರಚಿಸಿದ್ದಾರೆ. ಕಮಲಸಾರಥಿ ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ.
ಮಹಾಕಾಳಿ ಮಾತು

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.