1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಗಂಡನ ಮಾತು

IndiaGlitz [Saturday, May 10, 2014]
Comments

ಗಂಡನಿಗೆ ಮಾತು ಆಡಕ್ಕೆ ಹೆಂಡ್ತಿ ಬಿಡಲ್ಲ. ಇದನ್ನು ಅನೇಕರು ಹೇಳಿಕೊಳ್ಳುತ್ತಾರೆ. ನಮ್ಮ ಸಮಾಜದಲ್ಲಿ ಹೆಂಡ್ತಿಗೆ ಅಷ್ಟೊಂದು ಮರ್ಯಾದೆ. ಹೆಂಡ್ತಿ ಹೇಳಿದರೆ ಕೇಳಬೇಕು ಬೇರೆ. ಅದಲ್ಲ ಮೂಲಾಜೆ ಇಲ್ಲ ಅಂತಾನೆ 'ಸಾಫ್ಟ್ ವೇರ್ ಗಂಡ'. ಈಗ ಗಂಡ ಮಾತನಾಡೋದಕ್ಕೆ ಶುರು ಆಗಿದೆ. ಅರ್ಥಾತ್ 'ಸಾಫ್ಟ್ ವೇರ್ ಗಂಡ' ಮಾತಿನಮನೆಯಲ್ಲಿ ನಿಂತಿದ್ದಾನೆ. ಜಗ್ಗೇಶ್ ಅವರ ಅಭಿನಯದ ಚಿತ್ರ ಅಂದರೆ ಅಲ್ಲಿ ಮತಿಗೇನು ಬರ ಸ್ವಾಮಿ!

ಶ್ರೀ ಮಾರಿಕಾಂಭ ಫಿಲಮ್ಸ್  ಲಾಂಛನದಲ್ಲಿ ಮಾಲೂರು ಎ ರಾಮಪ್ಪ, ಬಿ.ವಿ. ವೆಂಕಟೇಶ್, ಕೆ.ಸಂಪತ್ ಕುಮಾರ್, ನಿರ್ಮಾಣದ ಸಾಫ್ಟ್ವೇರ್ ಗಂಡ ಚಿತ್ರಕ್ಕೆ ಬಾಲಾಜಿ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಈ ಚಿತ್ರದ ನಿರ್ದೇಶನ - ೩, ಛಾಯಾಗ್ರಹಣ-ನಾಗೇಶ್ ಆಚಾರ್ಯ, ಸಂಗೀತ - ವೀರಸಮರ್ಥ್, ಸಂಕಲನ - ಮನೋಹರ್, ಕಲೆ-ಆನಂದ್, ಸಂಭಾಷಣೆ, -ಕೆ .ನಂಜುಂಡ, ಸಾಹಿತ್ಯ - ಹೃದಯಶಿವ, ಗಿ೩. ಸಹ ನಿರ್ದೇಶನ - ಆನಂದ್, ಲಕ್ಷ್ಮಣ್ ಬಾಬು. ಕಲೆ-ಆನಂದ್, ಸಾಹಸ-ಥ್ರಿಲ್ಲರ್ ಮಂಜು, ನೃತ್ಯ -ಮಾಲೂರು ಶ್ರೀನಿವಾಸ್, ನಿರ್ವಹಣೆ-ದಾಡಿ ರಮೇಶ್, ತಾರಾಗಣದಲ್ಲಿ - ಜಗ್ಗೇಶ್, ನಿಖಿತ, ಜಯಪ್ರಕಾಶ್ ಶೆಟ್ಟಿ, ಸಾಕ್ಷಿ ಅಗರ್ವಾಲ್, ಕುರಿ ಪ್ರತಾಪ್, ಶ್ರೀನಾಥ್, ಚಂದ್ರಕಲಾ, ಆರ್.ಟಿ.ರಮಾ, ಮಾ ಮಂಜುನಾಥ್ ಮುಂತಾದವರಿದ್ದಾರೆ.
Only Ajith This Week

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.