1. தமிழ்
  2. తెలుగు
  3. ??????
  4. Hindi
  5. Tamil
  6. Telugu
  7. Malayalam
  8. Kannada

ಒನ್ ಫಾರ್ ಅಮ್ಮ

IndiaGlitz [Wednesday, May 14, 2014]
Comments

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು....ಅಮ್ಮ ನಿನ್ನ ಎದೆಯಾಳದಲ್ಲಿ ಗಾಲಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು... ಅಮ್ಮ ಎಂದರೆ ಏನೋ ಹರುಷವು... ಕೈ ತುತ್ತು ಕೊಟ್ಟೋಳೋ ಮೈ ಮದರ್ ಇಂಡಿಯ.... ಹೀಗೆ ಅನೇಕ ಬಗೆಯಲ್ಲಿ ಅಮ್ಮನನ್ನು ವರ್ಣಿಸುತ್ತ ಬಂದಿದ್ದೇವೆ.

ಇದೀಗ ಹೊಸ ನಿರ್ಮಾಪಕರು ತಾಯಿ ಮಗನ ವಾತ್ಸಲ್ಯದ ಬಗ್ಗೆ 'ಅಮ್ಮನ ದಿನ' ಅಂದೆ ಹಾಡುಗಳ ಧ್ವನಿ ಮುದ್ರಣ ಆರಂಭಿಸಿದ್ದಾರೆ. ತಾಯಿ-ಮಗನ ಬಾಂಧವ್ಯದ ಮಹತ್ವವನ್ನು ಹೇಳುವಂಥ ಕಥೆ ಹೊಂದಿದ 'ತಾಯಿಲ್ಲದೆ ನಾನಿಲ್ಲ' ಎಂಬ ಚಿತ್ರದ ಹಾಡುಗಳ ಧ್ವನಿಮುದ್ರಣ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಕಳೆದ ಭಾನುವಾರ ತಾಯಂದಿರ ದಿನದಂದು ನೆರವೇರಿತು. ನೃತ್ಯ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರುವ ಕಪಿಲ್ ಪ್ರಥಮ ಬಾರಿಗೆ ನಿರ್ದೇಶಿಸುತ್ತಿರುವ ಈ ಚಿತ್ರ ಕನ್ನಡ, ತಮಿಳು ಹಾಗೂ ತೆಲುಗು ಸೇರಿ ೩ ಭಾಷೆಗಳನ್ನು ನಿರ್ಮಾಣವಾಗುತ್ತಿದೆ.

ತೆಲುಗಿನಲ್ಲಿ ಅಮ್ಮಲೇಖ ನೇನು ಲೇನು ಹಾಗು ತಮಿಳಿನಲ್ಲಿ ತಾಯಿಲ್ಲಾಳ್ ನಾನಿಲ್ಲೈ ಹೆಸರಿನೊಂದಿಗೆ ತಯಾರಾಗುತ್ತಿರುವ ಈ ಚಿತ್ರವನ್ನು ತಂತ್ರಜ್ಞರೆಲ್ಲ ಸೇರಿ ನಿರ್ಮಿಸುತ್ತಿರುವುದು ವಿಶೇಷ. ಜೋ ಜೋ ಲಾಲಿ ಓ ನನ್ನ ಕಂದ ಅಮ್ಮನ ನೋಡು ಈಗ ಅಳಬೇಡ ಎಂಬ ಹಾಡಿನೊಂದಿಗೆ ಒಟ್ಟು ೬ ಹಾಡುಗಳನ್ನು ಕಲಾಕಾರ್ ಗೋಪಿ ಸಂಗೀತ ನಿರ್ದೇಶನದಲ್ಲಿ ಧ್ವನಿ ಮುದ್ರಿಸಿಕೊಳ್ಳಲಾಯಿತು. ಚಿತ್ರಕ್ಕೆ ಕಲಾಕಾರ್ ಗೋಪಿ ಸಂಗೀತ, ಸಿ.ನಾರಾಯಣ್ ಛಾಯಾಗ್ರಹಣ, ವಿಜಯ್ ಚೆಂಡೂರ್ ಚಿತ್ರಕಥೆ ಸಂಭಾಷಣೆ, ಶ್ರೀಜೌಲಿ ಸಂಕಲನ, ಜಿ.ಮೂರ್ತಿ ಕಲೆ, ಸಂಗೀತ ಸಾಗರ್, ವೈ.ಆರ್.ಪಾಂಡು ಸಾಹಿತ್ಯ, ಸುಪ್ರೀಂ ಸುಬ್ಬು ಸಾಹಸ, ಎಂ.ಸಿ.ಹೇಮಂತ್ಗೌಡ ಕಾರ್ಯಕಾರಿ ನಿರ್ಮಾಪಕರಾಗಿದ್ದು ತನ್ಮಯಿ, ಪದ್ಮಿನಿ, ವೆಂಕಟೇಶ್ ತಾರಾಬಳಗದಲ್ಲಿದ್ದು ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.
ರೂಪೇಶ್ ರಾಜ್ ಹುಚ್ಚು ಕಾನ್ಫಿಡೆನ್ಸ್

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.