1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಶೃಂಗಾರ ಪ್ರಥಮ ಹಂತ ಚಿತ್ರೀಕರಣ

IndiaGlitz [Friday, May 30, 2014]
Comments

ಈ ಸಮಯ ಶೃಂಗಾರ ಮಯ. ಸಾಹಿತಿ, ನಿರ್ದೇಶಕ ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಅವರ ಬಾಳಿನಲ್ಲಿ ಶೃಂಗಾರ ಮಯವೇ ಸರಿ. 'ಶೃಂಗಾರ' ಚಿತ್ರದ ನಿರ್ದೇಶನದ ಮೊದಲ ಹಂತ ಚಿತ್ರೀಕರಣ ಅವರು ಘಟಾನುಘಟಿಗಳ ಜೊತೆ ಮುಗಿಸಿದ್ದಾರೆ.

ದಯಾನಂದ ಸೌಂಡ್ಸ್ ಲಾಂಛನದಲ್ಲಿ ಶಂಕರ್ನವೀನ್ ನಿರ್ಮಿಸುತ್ತಿರುವ 'ಶೃಂಗಾರ ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಪೂರ್ಣವಾಗಿದೆ. ಎರಡನೇ ಹಂತದ ಚಿತ್ರೀಕರಣ ಜೂನ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ವಿ.ನಾಗೇಂದ್ರಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ರಾಗಿಣಿ, ಲಕ್ಷ್ಮೀ ರೈ, ಶ್ರೀನಿವಾಸಮೂರ್ತಿ, ಎಂ.ಎಸ್.ರಮೇಶ್, ಹೊನ್ನವಳ್ಳಿ ಕೃಷ್ಣ, ಶೋಭ್ರಾಜ್, ವಿ.ಮನೋಹರ್, ಸಾಧುಕೋಕಿಲ, ರಂಗಾಯಣ ರಘು, ರವಿಚೇತನ್, ಗಜ, ಶೃತಿ ಗೌಡ, ಕಾವ್ಯಶಾ, ಸೌಮ್ಯಗೌಡ, ಜೈಶಂಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸ್ವಾಮಿ ಅವರು ಬರೆದಿರುವ ಕಥೆಗೆ ನಿರ್ದೇಶಕರೇ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದ ಗೀತೆಗಳನ್ನು ವಿ.ನಾಗೇಂದ್ರಪ್ರಸಾದ್  ಅವರೇ ರಚಿಸಿದ್ದಾರೆ. ಜಿ.ಎಸ್.ವಿ.ಸೀತಾರಾಂ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ರಾಮ್ ಶೆಟ್ಟಿ ಸಾಹಸ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಚಿನ್ನಿಪ್ರಕಾಶ್ ಹಾಗೂ ರಾಮು ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.Other News


AkulTilak in NH 4

MalasriSaiprakash Again

Pungidaasa on Friday

Ambi Ravi Happy Birthday

AkulTilak in NH 4

Copyright 2016 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.