Follow us on
 
 
  1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಯುಗ ಪುರುಷ ಅಂದು ಇಂದು

IndiaGlitz [Monday, July 21, 2014]
Comments

Yuga Purusha

ಹಳೆಯ ಜನಪ್ರಿಯ ಚಿತ್ರಗಳ ಶೀರ್ಷಿಕೆಯನ್ನು ಮತ್ತೆ ಈಗಿನ ಕಾಲದ ಸಿನೆಮಾಕ್ಕೆ ಇಟ್ಟುಕೊಳ್ಳುವುದು ಹೆಚ್ಚಾಗುತ್ತಿದೆ. ಇತ್ತೀಚಿಗೆ ವಿ ರವಿಚಂದ್ರನ್ ಅವರ ಸೂಪರ್ ಹಿಟ್ ಸಿನೆಮಾ ಅಂಜದ ಗಂಡು ಶೀರ್ಷಿಕೆ ಬಳಕೆ ನಿನಸಮ್ ಸತೀಶ್ ಚಿತ್ರಕ್ಕೆ ಬಳಕೆ ಆಗಿ ಸಿನೆಮಾ ತೊಪೆದ್ದು ಹೋಯಿತು. ಈಗ ಮತ್ತೆ ವಿ ರವಿಚಂದ್ರನ್ ಅವರ ಸೂಪರ್ ಹಿಟ್ ರೀಮೇಕ್ ಸಿನೆಮಾ ಕರ್ಜ್ ಸಿನೆಮಾದ ಅವತರಿಣಿಕೆ ಯುಗ ಪುರುಷ 1989 ರಲ್ಲಿ ಡಿ ರಾಜೇಂದ್ರ ಬಾಬು ನಿರ್ದೇಶನ ಮಾಡಿದ ಸಿನೆಮಾದ ಶೀರ್ಷಿಕೆ ನಿರ್ದೇಶಕ ಮಂಜು ಮಸ್ಕಲ್ ಮತ್ತಿ ಅವರು ವಿ ರವಿಚಂದ್ರನ್ ಶಿಷ್ಯ ಎಂದು ಹೇಳಿಕೊಳ್ಳುತ್ತ ಇಟ್ಟು ಕೊಂಡಿದ್ದಾರೆ. ಅಂದಿನ ಯುಗ ಪುರುಷ ಚಿತ್ರದಲ್ಲಿ ವಿ ರವಿಚಂದ್ರನ್, ಕುಷ್ಬೂ, ಮೂನ್ ಮೂನ್ ಸೇನ್ ಅಭಿನಯಿಸಿದ್ದರು. ಚಿತ್ರ ಜಯಭೇರಿ ಸಹ ಆಗಿತ್ತು.

ಮಂಜು ಮಸ್ಕಲ್ ಮತ್ತಿ ಮಟ್ಟಿ ಈ ಹಿಂದೆ ಮನಸುಗಳ ಮಾತು ಮದುರ ನಿರ್ದೇಶನ ಮಾಡಿ ಡಂಗುರ ಪ್ರಾರಂಭಿಸಿದರು. ಅದು ಮಧ್ಯದಲ್ಲೇ ನಿಂತಿತು. ಅದಾದ ಮೇಲೆ ಗೌರಿ ಪುತ್ರ ಸಿನೆಮಾ ಸ್ವಂತ ಬ್ಯಾನ್ನೆರ್ಗೆ ಮಾಡಿ ಕೈ ಸುಟ್ಟುಕೊಂಡರು. ಅದಾದ ಮೇಲೆ ದ್ರಾವಿಡರು ಎಂದು ಪ್ರಾರಂಭ ಮಾಡಿದರು. ಈಗ ಯುಗ ಪುರುಷ....ಹೃದಯಗಳ ಲೋಕದಲ್ಲಿ ಎಂದು ನಿರ್ದೇಶನ ಎತ್ತಿಕೊಂಡಿದ್ದಾರೆ.

ಯುಗ ಪುರುಷ ಚಿತ್ರ ಮಂಜು ಮಸ್ಕಲ್ ಮಟ್ಟಿ ನಿರ್ದೇಶನದಲ್ಲಿ ಯುವಕ ಅರ್ಜುನ್ ದೇವ್ ನಾಯಕ, ಪೂಜಾ ಝವೇರಿ ಅವರು ನಾಯಕಿ. ಈಗಾಗಲೇ 50ರಷ್ಟು ಚಿತ್ರೀಕರಣ ಬೆಂಗಳೂರಿನಲ್ಲಿ ಮಾಡಲಾಗಿದೆ.

ಡಾಕ್ಟರ್ ಮಂಜುನಾಥ್ ಬಾಬು, ಚಳ್ಳಕೆರೆ ಅವರು ಬೆಟ್ಟ ಸ್ವಾಮಿ ಗೌಡ, ಶಿವರಾಜ್ ಟಿ ಸಿ ಅವರ ಜೊತೆ ಸೇರಿ ಯುಗ ಪುರುಷ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಪಕ್ಕ ಕಮರ್ಷಿಯಲ್ ಚಿತ್ರದ ಜೊತೆಗೆ ಒಂದು ಪ್ರೇಮಕಥೆ ಸಹ ಇದೆ ಎಂದು ಬಣ್ಣಿಸುತ್ತಾರೆ ಮಂಜು ಅವರು. ಚಿತ್ರಕ್ಕೆ ಅವರದೇ ಕಥೆ, ಚಿತ್ರಕಥೆ, ನಟ ಬರಹಗಾರ ನವೀನ್ ಕೃಷ್ಣ ಅವರ ಸಂಭಾಷಣೆ ಇದೆ. ದನಪಾಲ್ ಸಿಂಗ್ ರಜಪುಟ್ ಅವರ ಸಂಗೀತ ಇದೆ. 21ನೇ ವರ್ಷಕ್ಕೆ ಶರತ್ ಕುಮಾರ್ ಜಿ ಅವರು ಅವರು ಕಿರಿಯ ಛಾಯಗ್ರಾಹಕರಾಗಿ ಪರಿಚಯ ಆಗುತ್ತಿದ್ದಾರೆ.

ವಿನೋದ್ ಮನೋಹರ್ ಅವರು ಸಂಕಲನಕಾರರು, ಡೈನಮಿಕ್ ಸ್ಟಾರ್ ದೇವರಾಜ್ ಅವರಿಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರ. ಮೂರು ವರ್ಷಗಳ ಬಳಿಕ ಅವರು ಅಭಿನಯಕ್ಕೆ ಒಪ್ಪಿದ್ದಾರೆ. ಶೋಬರಾಜ್, ಪವನ್, ಮೋಹನ್ ಜುನೇಜ, ಪಲ್ಲಕ್ಕಿ ರಾಧಾಕೃಷ್ಣ ಹಾಗೂ ಇತರರು ಪಾತ್ರವರ್ಗದಲ್ಲಿ ಇದ್ದಾರೆ.Yuga Purusha
Aryan First Power*** LaterOther News

 ರಣತಂತ್ರ ಹಿನ್ನೆಲೆ ಸಂಗೀತ
 ಗೌಡ್ರ ಮಗ
 'S RS' Zee Kannada
 Sadhu Expecting Big 'Kick'
 K Manju Excited
 7.1 for 'Super Ranga'
 Uppi Title Finalized?
 Birthday of Dr Vishnu, Uppi and Shruthi
 Wage Crisis Temporary Solution
 Ganesh Visit KollurCopyright 2014 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.