1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಸಿಗರೇಟ್ ಆರೋಗ್ಯದತ್ತ ಗಮನ

IndiaGlitz [Friday, August 22, 2014]
Comments

ಕಳೆದ ಎರಡು ಸಿನೆಮಗಳಿಂದ ಜನಪ್ರಿಯತೆ ಪಡೆದ ನಿರ್ದೇಶಕ ಲಕ್ಕಿ ಶಂಕರ್ ಅವರು ಸಿಗರೇಟ್ ಸಿನೆಮಕ್ಕೆ ಅನೇಕ ವಿಶೇಷ ಬಗೆಯ ಪ್ರಯತ್ನ ಮಾಡಿರುವುದು ತಿಳಿದೇ ಇದೆ.

ಈಗ ಧ್ವನಿ ಸುರುಳಿ ಬಿಡುಗಡೆಗೂ ಅವರು ಒಂದು ಸಂಕಲ್ಪ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಆರೋಗ್ಯ ಮಂತ್ರಿಗಳಿಂದ ಧ್ವನಿ ಸುರುಳಿ ಬಿಡುಗಡೆ ಮಾಡುವುದು. ಅದೇ ಅಲ್ಲದೆ ಈ ಚಿತ್ರದಲ್ಲಿ ಬರುವ ಒಂದು ಹಾಡಿನಲ್ಲಿ 16 ಭಾಷೆಗಳ ವಿವಿಧ ಪದ ತುಂಬಿರುವುದರಿಂದ ಅನೇಕ ಭಾಷಾ ತಜ್ಞರನ್ನು ಕರೆಸುವ ಯೋಚನೆಯೂ ನಿರ್ದೇಶಕರಿಗಿದೆ.

ಸಿಗರೇಟ್ ಸಿನೆಮಾ ತಂಡದಿಂದ ನ ಮೋ ಅರ್ಥಾತ್ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಒಂದು ಅಭಿನಂದನಾ ಗೀತೆಯನ್ನು ಸಿದ್ದಾಮಾಡಲಾಗಿದೆ.ಈ ಹಿಂದೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕುರಿತಾಗಿ ಟೀ ಬಗ್ಗೆ ಹಾಡು ರಚಿಸಲಾಗಿತ್ತು.

ಕನ್ನಡ ಸಿನೆಮಾ ರಂಗ ಶೀಘ್ರವಾಗಿ ದೇಶದ ನೂತನ ಪ್ರಧಾನ ಮಂತ್ರಿಗೆ ಅಭಿನಂದನೆ ಹೇಳುತ್ತಿರುವುದು ಮೊದಲು. ನಿರ್ದೇಶಕ ಲಕ್ಕಿ ಶಂಕರ್ ಅವರೇ ರಚಿಸಿರುವ ಸ್ವಾರ್ಥ ವೇಸ,ಸರ್ವ ನಾಶ,ರಾಹು ದೋಷ ಎಲ್ಲ ಮೋಸ,ಕ್ರೇಜ್ ಇಂದ ಯಾಕೆ ಗೂಸಾ,ಮೋದಿ ಒಬ್ರೆ ಇಲ್ಲಿ ಭಾಷಾ,ಮೋದಿ ಸೂಪರ್ ಹೊಡೆದ್ರು ಬಂಪರ್,ಮೋದಿ ಸೂಪರ್ ಆದ್ರೂ ಲೀಡರ್.... ಎಂಬ ಗೀತೆಯನ್ನು ಸಂಗೀತ ನಿರ್ದೇಶಕ ಕೆ ಎಂ ಇಂದ್ರ ಹಾಗೂ ಲಕ್ಕಿ ಶಂಕರ್ ಅವರೇ ಹಾಡಿದ್ದಾರೆ.

ಸಿಗರೇಟ್ ಚಿತ್ರದಲ್ಲಿ ಎಲ್ಲ ಕಲಾವಿದರು ಸೇರಿ ಈ ನರೇಂದ್ರ ಮೋದಿ ಅಭಿನಂದನಾ ಗೀತೆಯಲ್ಲಿ ಪಾಲ್ಗೊಳ್ಳುವವರು ಎಂದು ನಿರ್ದೇಶಕ ಲಕ್ಕಿ ಶಂಕರ್ ತಿಳಿಸಿದ್ದಾರೆ.

ಶಿವ ಶಂಕರ್ ಫಿಲ್ಮ್ ಫ್ಯಾಕ್ಟರಿ ಅಲ್ಲಿ ತಾಯರುಗುತ್ತಿರುವ ಸಿಗರೇಟ್ ಕನ್ನಡ ಚಿತ್ರದಲ್ಲಿ ಹಾಸ್ಯ,ರೊಮಾನ್ಸ್,ಮನ ತಟ್ಟುವ ಸನ್ನಿವೇಶಗಳನ್ನು ನಿರ್ದೇಶಕರು ಪೇರಿಸಿದ್ದಾರೆ. ಬೆಂಗಳೂರಿನ ಮಾನ್ಯತ ಟೆಕ್ ಪಾರ್ಕ್,ಶಿರ್ಕಿ ಅಪಾರ್ಟ್ಮೆಂಟ್ ಕೆಂಗೇರಿ,ಸದಾಶಿವನಗರ,ವಿಮಾನ ನಿಲ್ಧಾನ ಸುತ್ತ ಮುತ್ತ,ನಾಗರಾಭಾವಿ,ಒರಿಒನ್ ಮಾಲ್ ಹಾಗೂ ಇನ್ನಿತರ ಕಡೆ 60 %ಚಿತ್ರೀಕರಣ ಮಾಡಲಾಗಿದೆ.

ನಿರ್ದೇಶಕ ಹಾಗೂ ನಟ ನಾಗಶೇಖರ್ ಅವರು ಪ್ರಮುಖ ಪಾತ್ರದಾರಿ.ನಾಗೇಂದ್ರ,ರೂಪಶ್ರೀ,ರಕ್ಷಿತಾ ಪೊನ್ನಮ್ಮ,ಸಾಧು ಕೋಕಿಲ,ಗಿರಿಜ ಲೋಕೇಶ್,ಸುಧಾಕರ್,ಸುಧ ಬೆಳವಾಡಿ,ಲಕ್ಕಿ,ಕುರಿ ಪ್ರತಾಪ್,ಮಿತ್ರ,ವಿಜಯ್ ಚೆಂಡೂರ್ ಸಹ ಇದ್ದಾರೆ.

ಶಿವು ಕಬ್ಬಿಣ ಅವರು ಈ ಸಿನೆಮಾದ ನಿರ್ಮಾಪಕರು. ರಮೇಶ್ ರಾಜ್ ಅವರ ಛಾಯಾಗ್ರಹಣ,ಇಂದ್ರಸೇನ ಅವರ ಸಂಗೀತ.ಸುಪ್ರೀತ್ ಅವರ ಸಂಕಲನ,ಮಾಲೂರ್ ಶ್ರೀ ನಿವಾಸ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕೆ ಒದಗಿಸಿದ್ದಾರೆ.




U/A for Power ***





Copyright 2017 IndiaGlitz. All rights reserved. This material may not be published, broadcast, rewritten, or redistributed.



Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.