1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಅರ್ಜುನ ಪ್ರಜ್ವಲ್ದೇವರಾಜ್

IndiaGlitz [Wednesday, August 27, 2014]
Comments

ಅಪ್ಪ ಮಗ ಜೊತೆಯಾಗಿ ಮತ್ತೆ ಅರ್ಜುನ ಕನ್ನಡ ಸಿನೆಮಾದಲ್ಲಿ. ಅವರೇ ದೇವರಾಜ್ ಹಾಗೂ ಪ್ರಜ್ವಲ್. ಈ ಜೋಡಿ ಹಿಂದೆ ಮಿಸ್ಟರ್ ಡೂಪ್ಲಿಕೇಟ್ ಸಿನೆಮಾದಲ್ಲಿ ಜೊತೆಯಾಗಿದ್ದರು. ಈಗ ಅಪ್ಪ ನಿರ್ಮಾಪಕ ಆಗಿ ಮಗ ಹೀರೋ ಆಗಿ ನೀನಾದೆ ನಾ ಸಿನೆಮಾ ಸಿದ್ದಮಾಡಿದ್ದಾರೆ. ಈ ಅರ್ಜುನ ಸಿನೆಮಾದಲ್ಲಿ ಇವರಿಬ್ಬರು ಅಭಿಯಸಲಿದ್ದಾರೆ. ಅರ್ಜುನ ದೇವರಾಜ್ ಆದರೆ,ಪ್ರಜ್ವಲ್ ಅಭಿಮನ್ಯು ಅಥವಾ ಭಬ್ರುವಾಹನ ಪಾತ್ರವೆ ಎಂದು ಕಾಡು ನೋಡಬೇಕು.

ಆರ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ರಮೇಶ್ ಮಂಡ್ಯ ಹಾಗೂ ತಿಮ್ಮರಾಜು ನಿರ್ಮಿಸುತ್ತಿರುವ ಅರ್ಜುನ ಚಿತ್ರದಲ್ಲಿ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅಪ್ಪ-ಮಗನ ಪಾತ್ರ ನಿರ್ವಹಿಸಿಲ್ಲ. ದೇವರಾಜ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಇಬ್ಬರೂ ಈ ಸಿನಿಮಾದ ನಾಯಕರು ಎನ್ನುತ್ತಾರೆ ಚಿತ್ರದ ನಿರ್ದೇಶಕ ಪಿ.ಸಿ.ಶೇಖರ್.

ಕುತುಹಲಕಾರಿ ಕಥಾಹಂದವುಳ್ಳ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ. ಸದ್ಯ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆಯುತ್ತಿದೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕುಮರನ್ ಅವರ ಛಾಯಾಗ್ರಹಣವಿದೆ. ಸರವಣ್ ಸಂಕಲನ ಹಾಗೂ ರವಿವರ್ಮರ ಸಾಹಸ ನಿರ್ದೇಶನ ಅರ್ಜುನ ಚಿತ್ರಕ್ಕಿದೆ. ದೇವರಾಜ್,ಪ್ರಜ್ವಲ್ ದೇವರಾಜ್,ಭಾಮ,ಕಡ್ಡಿಪುಡಿ ಚಂದ್ರು,ಗಿರೀಶ್,ರಮೇಶ್ ಭಟ್,ರಾಜಶೇಖರ್ ನಾಯ್ಡು, ಪ್ರೀತಿ ಗೀತಿ ಇತ್ಯಾದಿ ಚಿತ್ರದ ನಿರ್ಮಾಪಕ ವಿಜಯ್ ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Kavya Shetty Aiming High

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.