1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಸ್ನೇಕ್ನಾಗ ಚಿತ್ರೀಕರಣ ಪೂರ್ಣ

IndiaGlitz [Wednesday, August 27, 2014]
Comments

ಮಾಧವ ಮೂವೀಸ್ ಲಾಂಛನದಲ್ಲಿ ಗೋಪಾಲ ಕುಷ್ಠಗಿ ಅವರು ನಿರ್ಮಿಸುತ್ತಿರುವ ‘ಸ್ನೇಕ್‌ನಾಗ’ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲಿ ಮುವತ್ತೈದು ದಿನಗಳ ಚಿತ್ರೀಕರಣ ನಡೆದಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.

ಯೋಗೇಶ್ ಈ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಹಿತಾಚಂದ್ರಶೇಖರ್, ಗಿರೀಶ್ ಕಾರ್ನಾಡ್, ಸಿಹಿಕಹಿ ಚಂದ್ರು, ಕರಿಸುಬ್ಬು, ಕ್ರಿಶ್, ಅಪೇಕ್ಷ, ಪಾಯಲ್ ಗುಪ್ತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಉಮಾರಾವ್ ಅವರು ಬರೆದಿರುವ ಕಥೆಗೆ ಪ್ರತಿಭಾನಂದಕುಮಾರ್ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಭಾಷಣೆಯನ್ನು ಪ್ರತಿಭಾ ಅವರೇ ಬರೆದಿದ್ದಾರೆ. ವೀರಸಮರ್ಥ್ ಸಂಗೀತ ನಿರ್ದೇಶನ, ಸುರೇಶ್ ಸಂಕಲನ, ಅದ್ವೈತ ಛಾಯಾಗ್ರಹಣ ವಸಂತ ಕುಲಕರ್ಣಿ ಕಲಾ ನಿರ್ದೇಶನ, ಎನ್.ಕೆ.ಲೀನ್ ಸಾಹಸ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್‌ಭಟ್, ಗೋಪಾಲ ವಾಜಪೇಯಿ ಹಾಗೂ ಪ್ರತಿಭಾನಂದಕುಮಾರ್ ಬರೆದಿದ್ದಾರೆ.
ಅರ್ಜುನ ಪ್ರಜ್ವಲ್ದೇವರಾಜ್

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.