1. தமிழ்
  2. తెలుగు
  3. ??????
  4. Hindi
  5. Tamil
  6. Telugu
  7. Malayalam
  8. Kannada

ಶಿವಣ್ಣ ಉಪ್ಪಿ ಒಳ್ಳೆ ಭಾಂದವ್ಯ

IndiaGlitz [Friday, September 20, 2013]
Comments

ನಾನೇನು ಹೇಳಲಾರೆ ನಮ್ಮ ಯಜಮಾನರು ಶಿವರಾಜಕುಮಾರ್ ಹಾಗೂ ಉಪೇಂದ್ರ ಅವರ ನಡುವೆ ಒಳ್ಳೆಯ ಅಡ್ಜಸ್ಟ್ಮೆಂಟ್ ಇದೆ ಹೀಗೆಂದು ಪ್ರತಿಕ್ರಯಿಸಿದವರು ಮತ್ಯಾರು ಅಲ್ಲ ಶ್ರೀಮತಿ ಗೀತಾ ಶಿವರಾಜಕುಮಾರ್.

ಪದೇ ಪದೇ ಉಪೇಂದ್ರ ಅವರು ನಾನು ಹೆಣ್ಣಾಗಿದ್ದಾರೆ ಶಿವಣ್ಣ ಅವರ ಮಡದಿ ಗೀತಾ ಅವರಿಗೆ ಸವತೀ ಆಗಿರುತ್ತಿದ್ದೆ ಎಂಬ ವಿಚಾರಕ್ಕೆ ಗೀತಾ ಶಿವರಾಜಕುಮಾರ್ ಅವರ ಅಭಿಪ್ರಾಯವನ್ನು ಕೇಳಿದಾಗ ಬಂದ ಪ್ರತಿಕ್ರಿಯೆ ಉಪ್ಪಿ ಜನುಮದಿನ ಸಂತೋಷ ಕೂಟದಲ್ಲಿ ಮೇಲಿನದು.

ಉಪೇಂದ್ರ ಅವರು ಶಿವರಾಜಕುಮಾರ್ ಅವರ ಕೈಯಲ್ಲಿ ಮೊದಲು ಲಾಂಗ್ ಕೊಟ್ಟಿದ್ದು ಓಂ ಚಿತ್ರದಲ್ಲಿ. ಅದರ ಸಂಬಂದ ನನಗೆ ಹಾಗೂ ಶಿವಣ್ಣ ಅವರಿಗೆ ಗೊತ್ತು ಎಂದು ಪ್ರತಿಕ್ರಯಿಸಿದ ಉಪ್ಪಿ ಅವರು ಶಿವಣ್ಣ ಹುಡುಗಿಯರಿಗೆ ಪ್ರಪೋಸ್ ಮಾಡಿದರೆ ಹ್ಯಾಗೆ ಇರುತ್ತೆ ಎಂದು ಶಿವಣ್ಣ ಅವರನ್ನು ಹಿಡಿದು ತೋರಿಸಿಕೊಟ್ಟರು. ಇದಕ್ಕೆ ಶಿವಣ್ಣ ಅವರು ಉಪ್ಪಿ ಕೆನ್ನೆಯ ಮೇಲೆ ಮುತ್ತು ಕೊಟ್ಟರು. ಎಷ್ಟಾದರೂ ಅವರು ಮುತ್ತುರಾಜನ ಮಗನಲ್ಲವೇ!ಇದಕ್ಕೂ ಮುಂಚೆ ಕಾರ್ಯಕ್ರಮದ ಆರಂಭದಲ್ಲಿ ಗಿಮ್ಮಿಕ್ಕ್ ಆಗಿ ಉಪೇಂದ್ರ ಅವರನ್ನು ಹುಡುಕುವ ಪ್ರಯತ್ನ ಅನ್ನು ಮಾಡಲಾಯಿತು. ಶಿವಣ್ಣ ಅವರನ್ನು ನೀವೆಲ್ಲಾದರು ಉಪೇಂದ್ರ ಅವರನ್ನು ನೋಡಿದಿರ ಅವರು ನನ್ನ ಹೃದಯದಲ್ಲೇ ಇದ್ದಾರೆ ಎಂದು ಪ್ರತಿಕ್ರಯಿಸಿದರು.

ಆನಂತರ ಶಿವಣ್ಣ ಅವರು ಉಪ್ಪಿ ಸ್ಟೈಲ್ ಅಲ್ಲಿ ರೋಷದಿಂದ ಉಪೇಂದ್ರ ಅವರಿಗೆ ಸಂಭಾಷಣೆಯನ್ನು ಹೇಳಿ ಪ್ರಪೋಸ್ ಮಾಡಿ ಎಲ್ಲರನ್ನು ನಗೆಗಡಲಿನಲ್ಲಿ ತೇಲಿ ಬಿಟ್ಟರು.

ನೆನ್ನೆ ಅಂದರೆ ಉಪ್ಪಿ ಹುಟ್ಟಿದ ಹಬ್ಬಕ್ಕೆ ಸಿನೆಮಾ ತಾರೆಯರು ಸಾಕಷ್ಟು ಜಮಾಯಿಸಿದ್ದರುಬೆಂಗಳೂರಿನ ಗಾಯತ್ರಿ ವಿಹಾರ್ ಅರಮನೆ ಆವರಣದಲ್ಲಿ. ಈ ಸಭಾಂಗಣದ ಪಕ್ಕದಲ್ಲೇ ರೆಬೆಲ್ ಧ್ವನಿ ಸುರುಳಿ ಸಮಾರಂಭಕ್ಕೆ ಕರ್ನಾಟಕದ ಮುಖ್ಯಮಂತ್ರಿ ಎಸ್ ಸಿದ್ದರಾಮಯ್ಯಾ ಅವರು ಆಗಮಿಸಿ ಶುಭ ಕೋರಿದರು.
Two for Friday

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.