1. தமிழ்
  2. తెలుగు
  3. ??????
  4. Hindi
  5. Tamil
  6. Telugu
  7. Malayalam
  8. Kannada

ನಿತ್ಯೋತ್ಸವ ಪ್ರತಿ ನಿತ್ಯ

IndiaGlitz [Tuesday, October 01, 2013]
Comments

ಇದು ಪ್ರತಿ ನಿತ್ಯ ಸಾಮಾಜಿಕ ಜೀವನದಲ್ಲಿ ನಡೆಯುವ ಜೀವನದ ಉತ್ಸವ. ಬಹಳ ಉತ್ಸಾಹದಿಂದಲೇ ಖ್ಯಾತ ಹಿರಿತೆರೆ ಹಾಗೂ ಕಿರಿ ತೆರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಹೇಳ ಹೊರಟಿರುವವರು. ನಟನೆಯಲ್ಲಿ ನಿಸ್ಸೀಮರಾದ ಅನಂತ್ ನಾಗ್ ಹಾಗೂ ವಿನಯಾ ಪ್ರಕಾಷ್ ಜೋಡಿ ನಿಮ್ಮನ್ನು ಮೋಡಿ ಮಾಡಲು ಜೀ ಕನ್ನಡ ವಾಹಿನಿಯಲ್ಲಿ ಸೆಪ್ಟೆಂಬರ್ 30 ರಿಂದ ನಿತ್ಯೋತ್ಸವ ರಾತ್ರಿ 8 ಘಂಟೆಗೆ ಅರಬಿಸಿದೆ. ಇದು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಎರಡನೇ ಮೆಗಾ ದಾರವಾಹಿ.

ನಾಗತಿಹಳ್ಳಿ ಚಂದ್ರಶೇಖರ್ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಪ್ರದ್ಯಾಪಕ ಎಂ ಎಸ್ ಶ್ರೀರಾಮ್ ಅವರ ಲಾಟರಿ ಕಥೆಯನ್ನು ಆಧರಿಸಿ ತಮ್ಮದೇ ಆದ ಚೌಕಟ್ಟಿನಲ್ಲಿ ಹೇಳಲು ಹೊರಟಿದ್ದಾರೆ. ಮಾಧ್ಯಮ ವರ್ಗದ ಭಾಸ್ಕರ ರಾಯರು ಹಾಗೂ ಐವತ್ತೈದರ ಸುಂದರಿ ಪ್ರತಿಬಾ ಗುಂಟೂರ್ ಪಾತ್ರಗಳಲ್ಲಿ ಅನಂತ್ ನಾಗ್ ಹಾಗೂ ವಿನಯಾ ಪ್ರಕಾಷ್ ಅವರು ಇದ್ದಾರೆ.

ಅನಾರೋಗ್ಯದಿಂದ ಕೊಂಚ ಸುಸ್ತಾಗಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು ಪತ್ರಿಕಾ ಘೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ ಸೋಮವಾರದಿಂದ ಶುಕ್ರವಾರದ ವರೆಗೆ ಪ್ರಸಾರ ವಾಗುವ ಈ ದಾರವಾಹಿ 35 ಪುಟಗಳ ಶ್ರೀರಾಮ್ ಅವರ ಕಥೆಯನ್ನು ಆಧರಿಸಿ ಅವರು ಎಂಟು ವರ್ಷಗಳ ಬಳಿಕ ಕಿರು ತೆರೆಗೆ ವಾಪಸ್ಸಾಗುತಿರುವ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು. 80 ರ ದಶಕದಲ್ಲಿ ಸಣ್ಣ ಕಥೆಗಳ ಸುಗ್ಗಿ ಕಾಲ ಎಂದು ಬಣ್ಣಿಸಿದ ನಾಗತಿಹಳ್ಳಿ ಮಾನವ ಜನ್ಮ ಇರೋವರೆಗೂ ಹೊಸ ಕಥೆ ಸೃಷ್ಟಿ ಆಗುತ್ತಲೇ ಇರುವುದಾಗಿ ಹೇಳುತ್ತಾರೆ. ಈ ದಾರವಾಹಿಗಾಗಿ ಅವರು ನಿಜ ಘಟನೆಗಳನ್ನು ಕಲೆ ಹಾಕಲು ಹಿರಿಯರನ್ನು ವೃದ್ದಾಶ್ರಮದಲ್ಲಿ ಸಂಪರ್ಕಿಸಿರುವುದಾಗಿ ಹೇಳಿದ್ದಾರೆ. ಮೂಲ ಕಥೆಯ ಆಶಯಕ್ಕೆ ದಕ್ಕೆ ಬಾರದ ಹಾಗೆ ಉಪಕತೆಗಳನ್ನು ಹೇಳುವ ಪ್ರಯತ್ನ ಈ ದಾರವಾಹಿಯಲ್ಲಿ ಮಾಡಿರುವುದಾಗಿ ನಾಗತಿಹಳ್ಳಿ ತಿಳಿಸಿದ್ದಾರೆ.

ಕೇಶವ ಚಂದ್ರ ಅವರು ಸಂಭಾಷಣೆ ಬರೆಯುತ್ತಿದ್ದಾರೆ. ಪೂರ್ಣಿಮ ಸೇತುಮಾಧವ ಅವರ ನಿರ್ದೇಶನ ಸಹಾಯ ಜಲಾಲ್ ಅವರ ಸಂಕಲನ ಅಲ್ಲದೆ ಪಾತ್ರವರ್ಗದಲ್ಲಿ ಹಿರಿಯ ಹಾಗೂ ಕಿರಿಯರ ಸಂಗಮವನ್ನೇ ಮಾಡಿರುವವರು.

ನಟಿ ವಿನಯಾ ಪ್ರಕಾಶ್ ಅವರು ಮಾತನಾಡುತ್ತಾ ನಿಜ ಜೀವನದಲ್ಲಿ ತಾವು ವಿಧವೆ ಪಟ್ಟ ಹೊತ್ತ ಮೇಲೆ ಆದ ಸಮಯ ಅವರಿಗೆ ಈ ದಾರವಾಹಿಯಿಂದ ಜ್ನಾಪಕಕ್ಕೆ ಬರುತ್ತಿದೆ ಎನ್ನುತ್ತಾರೆ. ಮುತ್ತೈದೆಯರ ಪಕ್ಕದಲ್ಲಿ ತಾವೇ ವಿಧವೆ ಆಗಿ ಅನೇಕ ಸಮಾರಂಭಗಳಲ್ಲಿ ಕುಳಿತಾಗ ಆದಾಗ ನೋವನ್ನು ಹೇಳಿಕೊಂಡ ವಿನಯಾ ಪ್ರಕಾಶ್ ಈ ದಾರವಾಹಿಗೆ ಸೂಕ್ತ ಶೀರ್ಷಿಕೆ ಸಿಕ್ಕಿದೆ ಎಂದು ಬಣ್ಣಿಸುರು.ಜನಪ್ರಿಯ ನಟಿ ವಿನಯಾ ಪ್ರಕಾಶ್ 55ನೇ ವಯಸ್ಸಿನ ಪ್ರತಿಬಾ ಗುಂಟೂರ್ ಪಾತ್ರ ಮಾಡುತ್ತಿರುವುದು ನಿಜ ಜೀವನದಲ್ಲಿ ತಾವು 47ಎಂದು ಹೇಳಿಕೊಂಡು ಇದು ಮಾತಿನ ಮಲ್ಲಿ ಪಾತ್ರ ಎನ್ನುತ್ತಾರೆ. ಈ ದಾರವಾಹಿ ಜೀವನೋತ್ಸಹದ ನಿತ್ಯೋತ್ಸವ ಎಂದು ವಿನಯಾ ಪ್ರಕಾಶ್ ಅಭಿಪ್ರಾಯ ಮಂಡಿಸಿದ್ದಾರೆ.

ಅಂದು ನಟ ಅನಂತ್ ನಾಗ್ ಅವರು ಹಜಾರಿದ್ದು 23 ವರ್ಷಗಳ ನಂತರ ವಿನಯಾ ಪ್ರಕಾಶ್ ಜೊತೆ ಅಭಿನಯಿಸುದಾಗಿ ಹೇಳುತ್ತಾ ನಾಗತಿಹಳ್ಳಿ ಅವರ ಪರಿಶ್ರಮ ಹಾಗೂ ನಿತ್ಯೋತ್ಸವ ದಾರವಾಹಿಯೂ ಮನೆ ಮಂದಿಯನ್ನೆಲ್ಲ ತಲುಪುವುದರಲ್ಲಿ ಯಾವ ಸಂದೇಹ ಇಲ್ಲ ಎಂದರು.

ಹಿರಿಯ ಮುಖ್ಯಮಂತ್ರಿ ಚಂದ್ರು ನಾ ದಾಮೋಧರ್ ಶೆಟ್ಟಿ ಕಥೆಗಾರ ಎಂ ಎಸ್ ಶ್ರೀರಾಮ್ ಹಿರಿಯ ಅಧಿಕಾರಿ ಸೋಮಶೇಖರ್,ಝೀ ವಾಹಿನಿಯ ಕಿಶೋರ್ ಆಚಾರ್ಯ ಸಹ; ಹಾಜರಿದ್ದರು.
Kamini Ready!

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.