1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಟ್ರೈಲರ್ ಕಡಿವಾಣ

IndiaGlitz [Friday, October 04, 2013]
Comments

ಇದು ಅನಿವಾರ್ಯದ ಸಂಗತಿ. ಇಬ್ಬರು ಜನಪ್ರಿಯ ನಟರುಗಳ ನಡುವಿನ ಒಳಗಿನ ಗುದ್ದಾಟ ಎಂದು ಗಾಸಿಪ್ ವಾಣಿ ಹೇಳಬಹುದು. ಈ ಹಿಂದೆ ಈ ಇಬ್ಬರಲ್ಲಿ ಕೊಂಚ ವೈಮನಸ್ಯ ಕಂಡಿದ್ದು ಉಂಟು. ಇತ್ತೀಚಿಗೆ ಪೋಸ್ಟರ್ ವಿಚಾರದಲ್ಲಿ ಸ್ವಲ್ಪ ಅಸಮಾಧಾನ ಕಂಡುಬಂತು. ಅದನ್ನು ಸರಿಯಾದ ಸಮಯಕ್ಕೆ ಸರಿ ಪಡಿಸಲಾಯಿತು.

ಯಾರು ಈ ಇಬ್ಬರು ನಟರು ಎಂದು ಹೇಳುವುದು ಸಮಂಜಸವಲ್ಲ. ಆ ಇಬ್ಬರು ನಟರ ಅಪ್ಪಂದಿರು ಬಹಳ ಕ್ಲೋಸೆ ಆಗಿದ್ದರು.

ಈಗ ಸಧ್ಯದ ಪರಿಸ್ಥಿತಿ ಆ ಇಬ್ಬರು ನಟರ ಜೊತೆ ಇನ್ನೂ ಕೆಲವು ನಟರುಗಳ ಟ್ರೈಲರ್ ಗಳಿಗೆ ಬಿದ್ದ ಕಡಿವಾಣ ವಿಚಾರಕ್ಕೆ ಬಂದರೆ,ಚಿತ್ರದ ವೇಳೆ ಉದ್ದವಾಯಿತು ಎಂದು ಮೂಗು ಮುರಿದವರಿಗೆ ನಾಲ್ಕು ಟ್ರೈಲರ್ ಸಿನೆಮಾದ ಮಧ್ಯೆ ಹಾಕಿದರೆ ನಮ್ಮ ಸಿನೆಮಾ ಉದ್ದ ಎನಿಸದೆ ಇನ್ನೇನು. ಆದ್ದರಿಂದ ಯಾವುದು ಸಿನೆಮಾ ಟ್ರೈಲರ್ ಹಾಕುವುದು ಬೇಡ ಎಂಬ ಆಜ್ಞೆ ಸುದರ್ಶನ ಚಕ್ರದಂತೆ ಬಂದಿದೆ.

ಈಗ ವಿಷಯ ಗಂಭೀರ ಆಗುವ ಸಾಧ್ಯತೆ ಇದೆ. ಚಿತ್ರ ಮಂದಿರಗಳು ಬುಕ್ ಮಾಡುವ ಜಾಹಿರಾತುಗಳು ಹಣ ತಂದುಕೊಡುವುದು. ಅದೇ ಅಲ್ಲದೆ ಟ್ರೈಲರ್ ಸಿನೆಮಾ ಆರಂಭ ಅಥವಾ ಇಂಟರ್ವಲ್ ಅಲ್ಲಿ ಹಾಕಿದರೆ ಚಿತ್ರಮಂದಿರಗಳಿಗೆ ಅದು ದುಡ್ಡು ತಂದು ಕೊಡುವುದು. ಹಾಗಿದ್ದ ಮೇಲೆ ಚಿತ್ರಮಂದಿರಗಳು ತೆಗೆದುಕೊಳ್ಳುವ ನಿರ್ಧಾರ ಮುಖ್ಯ.

ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳೆ ಸೋತು ಸುಣ್ಣ ಆಗಿರುವು ಈ ಕ್ಷಣದಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಯಾರು ಮಾತನಾಡಿಸುವ ಹಾಗೆ ಇಲ್ಲ. ನಿಮಗೆ ಯಾರು ಸಿನೆಮವನ್ನು ಅಷ್ಟು ದೊಡ್ಡದು ಮಾಡಿ ಅಂತ ಹೇಳಿದ್ದು ಎಂದು ಅವರು ಕೇಳುವ ಸಾಧ್ಯತೆ ಹೆಚ್ಚು.
ಒಂದೇ ಕಥೆ ಎರಡು ಸಿನೆಮಾ

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.