1. தமிழ்
  2. తెలుగు
  3. മലയാളം
  4. Hindi
  5. Tamil
  6. Telugu
  7. Malayalam
  8. Kannada

ಶ್ರೀಧರ್ ಅಸಮಾಧಾನ?

IndiaGlitz [Saturday, October 05, 2013]
Comments

ಕನ್ನಡ ಚಿತ್ರರಂಗದ ಪ್ರಭುದ್ದ ನಟ ಭರತ ನಾಟ್ಯ ಪ್ರವೀಣ ಸಧ್ಯದಲ್ಲೇ ಡಾಕ್ಟರೇಟ್ ಗಳಿಸಲಿರುವ ನಟ ಶ್ರೀಧರ್ ತಮ್ಮ ವೃತ್ತಿ ಜೀವನದಲ್ಲೇ ಎಂದು ಅಸಮಾಧಾನ ವ್ಯಕ್ತ ಮಾಡಿದವರೆ ಅಲ್ಲ. ಅವರ ತಿಳವಳಿಕೆ ಅಪಾರ. ಅವರಂತ ನಟರು ಚಿತ್ರಗಳನ್ನು ಒಪ್ಪುವುದೇ ವಿರಳ. ಭರತನಾಟ್ಯ ಪರಂಪರೆಯಲ್ಲೇ ಸಾಧನೆ ಮಾಡಿ ಉತ್ತುಂಗದಲ್ಲಿ ಇರುವಾಗ ಅವರಿಗೆ ಸಲ್ಲುವ ಮರ್ಯಾದೇ ಸಲ್ಲಲೇಬೇಕು. ಶ್ರೀಧರ್ ಅವರನ್ನು ರಜತ ಪರದೆಯ ಶಿವ ಎಂದು ಸಂಬೋದಿಸಲಾಗುತ್ತದೆ.

ಆದರೆ ನೋಡಿ ಇಂತಹ ಪ್ರಬುದ್ಧ ನಟನನನ್ನು ಬೇಕಂತಲೆ ದೂರವಿಟ್ಟು ನಿರ್ದೇಶಕ ಬಿ ಎನ್ ಪೂರುಷೋತ್ತಮ್ ಅವರು ಮಹಾಶರಣ ಹರಳಯ್ಯ ಚಿತ್ರದ ಪ್ರಾಚಾರಕ್ಕೆ ಹೆಜ್ಜೆ ಇಡುತ್ತಿದ್ದಾರೆ.

ಕಳೆದ ಪತ್ರಿಕಾ ಗೋಷ್ಟಿಗೆ ಶ್ರೀಧರ್ ಅವರನ್ನು ನೀವು ಡಬ್ಬಿಂಗ್ ಮಾಡಿ ಬಿಡಿ ಎಂದು ಅದೇ ಸಮಯಕ್ಕೆ ಮಾಧ್ಯಮವನ್ನು ಭೇಟಿ ಮಾಡಲು ನಿರ್ದೇಶಕರು ಸಮಯ ನಿಗಧಿ ಮಾಡಿದಿದರು. ಅದೇ ಅಲ್ಲದೆ ಹರಳಯ್ಯ ಪಾತ್ರವನ್ನು ಮಾಡಿರುವ ಶ್ರೀಧರ್ ಅವರನ್ನು ಮಹಾಶರಣ ಹರಳಯ್ಯ ಚಿತ್ರದ ಪ್ರಮುಖ ಘಟ್ಟ ಧ್ವನೀ ಸುರುಳಿ ಸಮಾರಂಭಕ್ಕು ದೂರ ಇಡಲಾಗಿದೆ.

ಹಾಸನದಲ್ಲಿ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಇರಬೇಕಾದವರು ಶ್ರೀಧರ್ ಅವರು. ಆದರೆ ಅವರಿಗೆ ಆಹ್ವಾನ ಇರಲಿಲ್ಲ.

ಕನ್ನಡ ಚಿತ್ರರಂಗ ಕಂಡ ಅಪರೂಪದ ನಟರಲ್ಲಿ ಶ್ರೀಧರ್ ಸಹ ಒಬ್ಬರು. ಅವರೇನು ಇಂತಹ ವಿಚಾರಗಳಿಗೆ ಮಾಧ್ಯಮದ ಮುಂದೆ ಬರುವವರಲ್ಲ. ಆದರೆ ಸಣ್ಣ ನೋವನ್ನಂತೂ ಅವರು ವ್ಯಕ್ತ ಮಾಡಿದ್ದಾರೆ.

ಹಾಲಿನಂತಹ ಮನಸ್ಸು ಜೇನಿನಂತೆ ಸವಿಯಾದ ವಿಚಾರಗಳನ್ನು ಹೇಳುತ್ತಾ ಅವರ ಚಿತ್ರಗಳ ಪ್ರಚಾರ ಮಾಡುವುದರಲ್ಲಿ ಶ್ರೀಧರ್ ಅವರು ನಿಸ್ಸೀಮರು. ಅವರನ್ನು ಕಡೆಗಣಿಸಿ ನಿರ್ದೇಶಕ ಪೂರುಷೋತ್ತಮ್ ಅವರ ಮಹಾಶರಣ ಹರಳಯ್ಯ ಚಿತ್ರದ ಪ್ರಾಚಾರಕ್ಕೆ; ಧಕ್ಕೆ ಮಾಡಿಕೊಳ್ಳುವುದು ಸರಿಯಾದ ಮಾರ್ಗವಲ್ಲ. ಶ್ರೀಧರ್ ಅವರು ಅಂತರ ರಾಷ್ಟ್ರೀಯ ಖ್ಯಾತಿ ಪಡೆದವರು. ಮಹಾಶರಣ ಹರಳಯ್ಯ ಚಿತ್ರದ ಪ್ರಚಾರ ಅವರು ಮನಸ್ಸು ಮಾಡಿದರೆ ಅಂತರ ರಾಷ್ಟ್ರ ಮಟ್ಟದಲ್ಲಿ ಕೊಂಡಯ್ಯ ಬಹುದು.
Tribute to Narasimharaju

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.