1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಅಂಡರ್ ವರ್ಲ್ಡ್ ಅಂತಾಕ್ಷರಿ!

IndiaGlitz [Saturday, October 05, 2013]
Comments

ಅಂಡರ್ ವರ್ಲ್ಡ್ ಮಂದಿಗಳು ಅಂತಾಕ್ಷರೀ ಹಾಡುತ್ತಾ ಕುಳಿತರೆ ಹ್ಯಾಗೆ! ಅಂತಹುದೊಂದು ಪ್ರಯತ್ನ ನಿರ್ದೇಶಕ ಅನಿಲ್ ಕುಮಾರ್ ಅವರು ದಿಲ್ವಾಲ ಸಿನೆಮಾದಲ್ಲಿ ಹಾಸ್ಯ ಪ್ರಸಂಗ ಒದಗಿಸಲು ಮಾಡಿದ್ದಾರೆ.

ನಾಯಕನ ಆಜ್ಞೆ ಅಂತೆ ಖಳ ನಟ ಅಂಡರ್ ವರ್ಲ್ಡ್ ವ್ಯಕ್ತಿ ರವಿಶಂಕರ್ ತಂಡ ನಾಯಕಿಯ ಅಪ್ಪ ಅಮ್ಮನನ್ನು ಮನ ಒಲಿಸಬೇಕು. ಅದು ನಾಯಕ ಒಳ್ಳೆಯವನು ಎಂದು ಹೇಳಿ ನಾಯಕಿಯನ್ನು ಅವನಿಗೆ ತಂದು ಕೊಡುವಂತೆ ಮಾಡಬೇಕಾದ ಚಾಣಾಕ್ಷ ದೃಶ್ಯ ಅದು. ಈ ಪರಿಸ್ಥಿತಿ ಖಳನಿಗೆ ಬರಲು ಕಾರಣ ಅವನ ಹೆಬ್ಬೆಟ್ಟು ಸಂಸ್ಕೃತಿ. ಅವನಿಗೆ ಓದು ತಿಳಿಯದು. ಆದ್ದರಿಂದ ನಾಯಕ ಬರೆದಿರುವ ಪತ್ರ ಓದಲಾಗದು.

ಹ್ಯಾಗಾದರೂ ಮಾಡಿ ಖಳ ನಾಯಕಿಯ ಅಪ್ಪ ಅಮ್ಮಂದಿರ ಹತ್ತಿರ ಕಾಡಿ ಬೇಡಿ ಒಪ್ಪಿಸಬೇಕು. ನಮ್ಮ ಮಗಳು ಚನ್ನಾಗಿರುವಾದಕ್ಕೆ ಗ್ಯಾರಂಟಿ ಏನು ಎನ್ನುವ ಪ್ರಶ್ನೆ ಏಳುತ್ತದೆ.

ಅದಕ್ಕೆ ಖಳ ನಟ ರವಿಶಂಕರ್ ಅಂಡ್ ಗ್ಯಾಂಗ್ ಅಣ್ಣ ತಂಗಿ ಚಿತ್ರದ ಹಾಡಿನಿಂದ ಶುರು ಮಾಡಿ ಕನ್ನಡದ ಅನೇಕ ಸಿನೆಮಾಗಳ ಹಾಡುಗಳನ್ನು ಹೇಳಿ ಒಪ್ಪಿಸಲು ಪ್ರಯತ್ನ ಮಾಡುವುದು.

ವಿಷಯ ಅಷ್ಟೇ ಅಲ್ಲ. ನಿರ್ದೇಶಕ ಅನಿಲ್ ಕುಮಾರ್ ಇಂದಿನ ಸಂದರ್ಭದಲ್ಲಿ ಕನ್ನಡದ ಹಾಗೂ ಇತರ ಭಾಷೆಯ ಹಾಡುಗಳನ್ನು ಬಳಸುವಾಗ ಅನುಮತಿಯನ್ನು ಪಡೆದಿರಬೇಕು. ಆ ಕೆಲಸ ಆದ ಹಾಗೆ ಇಲ್ಲ. ಆಗ ಚಿತ್ರವೂ ಕಾಪಿ ರೈಟ್ ಆಕ್ಟ್ ಅಲ್ಲಿ ಸಿಕ್ಕಿ ಬೀಳುವುದು.

ಇತ್ತೀಚಿನ ಉದಾಹರಣೆ ಕಾಣದ ಕಡಲಿಗೆ ಹಂಬಲಿಸುತಿದೆ ಮನ.....ಎಂಬ ಸಿ ಅಶ್ವ್ಹತ್ ಹೇಳಿರುವ ಹಾಡು ಮೈನಾ ಚಿತ್ರದಲ್ಲಿ ನಿರ್ದೇಶಕ ನಾಗಶೇಕರ್ ಬಳಸಿ ಪೆಚ್ಚಿಗೆ ಸಿಕ್ಕಿ ಹಾಕಿಸಿದರು ನಿರ್ಮಾಪಕರನ್ನು. ಲಹರಿ ಕಂಪನಿಗೆ ಅನುಮತಿ ಪಡೆಯದೆ ಈ ಹಾಡನ್ನು ಬಳಸಿದ್ದಕ್ಕೆ5 ಲಕ್ಷ ರೂಪಾಯಿ ದಂಡವನ್ನು ತೆತ್ತಿದರು. ಇತ್ತೀಚಿಗೆ ನಡೆದ 100 ವರ್ಷದ ಭಾರತೀಯ ಸಿನೆಮಾ ಸಮಾರಂಭದಲ್ಲಿ ವಾಣಿಜ್ಯ ಮಂಡಳಿ ಎಲ್ಲ ಧ್ವನಿ ಸುರುಳಿ ಸಂಸ್ಥೆಗಳಿಗೆ ಪತ್ರ ಬರೆದು ಅನುಮತಿ ಪಡೆದು ಕೊಂಡಿತ್ತು.Other News


ಶ್ರೀಧರ್ ಅಸಮಾಧಾನ?

Tribute to Narasimharaju

Dilwala Loki for Friday

Haralaiah CD Comes

ಶ್ರೀಧರ್ ಅಸಮಾಧಾನ?

Copyright 2016 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.