1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಉಪ್ಪಿ ಹೊಡೆದ್ರು ಡೈಲಾಗ್

IndiaGlitz [Monday, October 07, 2013]
Comments

ಉಪ್ಪಿ ಡೈಲಾಗ್ ಹೊಡೆದ್ರು ಅಂದರೆ ಏನೋ ವಿಶೇಷ ಇರಲೇಬೇಕು. ಅದು ಅವರ ಸಿನೆಮಾ ಆಗಿರಲಿ ಅಥವಾ ಬೇರೆ ಅವರ ಸಿನೆಮಕ್ಕೆ ಅವರು ಡೈಲಾಗ್ ಜೋಡಿಸಿದರು ವಿಶೇಷ ಖಚಿತ. ಹಾಗೆಯೇ ಅವರು ಹಾಡು ಬರೆದರು ಹಾಡು ಹೇಳಿದರು ಸಹ. ಇತ್ತೀಚಿನ ಅವರ ಹಾಡು ಬೃಂದಾವನ ಚಿತ್ರಕ್ಕೆ ಒನ್ ಮಾತಾ ಇದ್ದೀಯಾ...ಲವ್ ಮಾತಾ ಇದ್ದೀನಿ....ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ. ಅದು ದರ್ಶನ್ ಹಾಗೂ ಇಬ್ಬರು ನಾಯಕಿಯರಿಗೆ ಬರುವ ಹಾಡು.

ಸಕ್ಕತ್ ಕಿಕ್ ನೀಡುವ ಹಾಡು. ಇದೀಗ ಕನ್ನಡ ಚಿತ್ರ ರಂಗದ ಉತ್ಕೃಷ್ಟ ನಿರ್ದೇಶಕ ಫೈರ್ ತುಂಬಿದ ನಟ ಹೊಸ ತನದ ಸರದಾರ ಉಪ್ಪಿ ರಾಗಿಣಿ ಐ ಪಿ ಎಸ್ ಚಿತ್ರಕ್ಕೆ ಆರಂಭದಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡ ಶೈಲಿಯ ಕನ್ನಡದಲ್ಲಿ ಮೂರು ನಿಮಿಷದ ಸಂಭಾಷಣೆ ರೆಕಾರ್ಡ್ ಮಾಡಿ ಕೊಟ್ಟಿದ್ದಾರೆ.

ಕೆ ಮಂಜು ಅವರ ಸಿನೆಮಾ ರಾಗಿಣಿ ಐ ಪಿ ಎಸ್ ಜನಪ್ರಿಯ ನಟಿ ರಾಗಿಣಿ ದ್ವಿವೇದಿ ಅವರ ಮೊದಲ ಸಾಹಸ ದೃಶ್ಯಗಳ ಚಿತ್ರವು ಉಪೇಂದ್ರ ಅವರ ಒಪೆನಿಂಗ್ ಸಿಕ್ಕಿರುವುದು ಹೈ ಪಾಯಿಂಟ್.

ಹುಬ್ಬಳ್ಳಿಯ- ಧಾರವಾಡ ಹಿನ್ನಲೆಯಲ್ಲಿ ಇಡೀ ಚಿತ್ರವೂ ಇರುವುದರಿಂದ ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಪ್ರಸಿದ್ದಿಯನ್ನು ಖ್ಯಾತ ನಾಮರನ್ನು ಪ್ರೇಕ್ಷಣೀಯ ಸ್ಥಳಗಳನ್ನು ವಿಧ್ಯಾ ಸಂಸ್ಥೆಗಳ ವಾಣಿಜ್ಯ ಕುರಿತಾಗಿ ಸಿದ್ದಪಡಿಸಿರುವ ಸಂಭಾಷಣೆ ಹೇಳುವ ಉಪೇಂದ್ರ ಅವರು ಇಂತಹ ಜಾಗದಲ್ಲಿ ವ್ಯಾಗ್ರ ನೊಬ್ಬನಿದ್ದಾನೆ ಎಂದು ಎರಡರಿಂದ ಮೂರು ನಿಮಿಷಗಳ ಮಾತುಗಳನ್ನು ಕರಿ ಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಗಿದೆ.

ಆನಂದ್ ಪಿ ರಾಜು ಅವರ ನಿರ್ದೇಶನದಲ್ಲಿ ಗ್ಲಾಮರ್ ನಟಿ ಒಂದು ಕಟುವಾದ ಪೋಲೀಸು ಅಧಿಕಾರಿಯಾಗಿ ರಾಗಿಣಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದು ಸಾಮಾಜಿಕ ಅಸಹ್ಯ ಪಿಡುಗು ಹಾಗೂ ಇನ್ನಿತರಗಳನ್ನು ವಿಚಾರಗಳನ್ನು ಕಥಾ ಹಂದರದಲ್ಲಿ ಪೆರಿಸಲಾಗಿದೆ. ಅಂತಹ ಸ್ಥಿತಿಯಲ್ಲಿ ಪೋಲೀಸು ಅಧಿಕಾರಿ ತೆಗೆದುಕೊಳ್ಳುವ ನಿರ್ಣಯ ಏನು ಎಂದು ಸಹ ಚಿತ್ರ ಹೇಳುತ್ತದೆ.

ಕೆ ವಿ ರಾಜು ಅವರ ಹರಿತವಾದ ಸಂಭಾಷಣೆ ಇದೆ ಯು ನಂದಕುಮಾರ್ ಅವರ ಛಾಯಾಗ್ರಹಣ ಫರ್ಹಾನ್ ರೋಶನ್ (ಈ ಹಿಂದೆ ಎಮಿಲ್) ಅವರ ಸಂಗೀತ ಕೌರವ ವೆಂಕಟೇಶ್ ಮಾಸ್ ಮಾಧ ಅವರ ಸಾಹಯ ದೃಶ್ಯಗಳಿವೆ ಇಮ್ರಾನ್ ಸರ್ದಾರಿಯ ಅವರ ನೃತ್ಯ ನಿರ್ದೇಶನವಿದೆ ರಾಜೇಶ್ ರಾಮನಾಥ್ ಅವರು ರೇ=ರೆಕಾರ್ಡಿಂಗ್ ಚಿತ್ರಕ್ಕಿದೆ.

ಹುಬ್ಬಳ್ಳಿ ಧಾರವಾಡ ಸುತ್ತ ಮುತ್ತ ಚಿತ್ರೀಕರಣ ಮಾಡಿರುವ ರಾಗಿಣಿ ಐ ಪಿ ಎಸ್ ಚಿತ್ರದಲ್ಲಿ ಅವಿನಾಶ್ ನಾರಾಯಣ ಸ್ವಾಮಿ ಪೆಟ್ರೋಲ್ ಪ್ರಸನ್ನ ವೀಣ ಸುಂದರ್ ವಿವೇಕ್ ಪಂಡಿತ್ ಅಚ್ಯುತ್ ಕುಮಾರ್ ಹಾಗೂ ಇನ್ನಿತರರು ಪೋಷಕ ವರ್ಗದಲ್ಲಿ ಇದ್ದಾರೆ.
ದರ್ಶನ್ ಬೈಕ್ ಒಲುವುOther News


'Biryani' Album Comes

'Jwalantham' Ready

'MM' Songs Arrive

'Octopus' Audio Comes

Friday Feast - MM Vs Aatagara

5th BISFF Starts Today

Shiv Prayer at Gajanur

Wage Hike - VR Upset

Boy For Ganesh

Shiv Daughter Wedding Coincidence

Shiv Invite Media

Raj Trios In Historical

Copyright 2015 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.