1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಟೆಕ್ನೀಷಿಯನ್ಸ್ ಸಿನೆಮಾ!

IndiaGlitz [Tuesday, October 08, 2013]
Comments

ಪಿತೃ ಪಕ್ಷ ಕಳೆದು ನವರಾತ್ರಿ ಸಂಭ್ರಮದಲ್ಲಿ ಇರುವ ಈ ಹೊತ್ತಿನಲ್ಲಿ ಅನೇಕ ಕನ್ನಡ ಸಿನೆಮಗಳು ಸೆಟ್ಟೇರಲು ಸಜ್ಜಾಗಿದೆ. ನಿನ್ನೆ ಅಂದರೆ ಸೋಮವಾರ ಒಂದೇ ದಿವಸದಲ್ಲಿ ಎರಡು ಕನ್ನಡ ಸಿನೆಮಗಳು ಜಾಲಿ ಬಾರು...ಪೋಲಿ ಹುಡುಗ್ರು ಹಾಗೂ ಡಾರ್ಲಿಂಗ್ ಸೆಟ್ಟೇರಿದೆ. ಒಂದು ಚಿತ್ರೀಕರಣ ಪ್ರಾರಂಭ ಮತ್ತೊಂದು ಹಾಡುಗಳ ಸಂಯೋಜನೆ ಕೆಲಸ ಶುರು ಇಟ್ಟುಕೊಂಡಿತು.

ಈ ಎರಡು ಸಿನೆಮಗಳು ಹತ್ತಿರ ಹತ್ತಿರದಲ್ಲೇ ಪ್ರಾರಂಭವಾಗಿದ್ದು ಒಂದು ವಿಶೇಷ ಅಲ್ಲದೆ ಈ ಎರಡು ಸಿನೆಮಗಳು ಟೆಕ್ನೀಷಿಯನ್ಸ್ ಸೇರಿ ನಿರ್ಮಿಸುತ್ತಿರುವ ಸಿನೆಮಾ ಎಂಬುದು ಮುಖ್ಯ ವಿಚಾರ.

ಹಾಗಾದರೆ ನಿರ್ಮಾಪಕನ ಮೇಲೆ ನಂಬಿಕೆ ಕಡಿಮೆ ಆಗುತ್ತಿದೆಯ ಹೌದು ಅಂತ ಸ್ವಲ್ಪ ಮಟ್ಟಿಗೆ ಅನ್ನಿಸಿದ್ದು ಎರಡು ಪತ್ರಿಕಾ ಗೋಷ್ಠಿ ನಡೆದಾಗ.

ಜಾಲಿ ಬಾರು...ಪೋಲಿ ಹುಡುಗರು ಸಿನೆಮಾದ ಮಾಧ್ಯಮ ಗೋಷ್ಠಿ ಅಲ್ಲಿ ನಾಯಕ ಹಾಗೂ ಮದರಂಗಿ ಎಂಬ ಸಿನೆಮಾದ ಫ್ಯಾಮಿಲಿ ಬ್ಯಾನರ್ ಮೂಲಕ ನಾಯಕನಾದ ಕೃಷ್ಣ ಟೆಕ್ನೀಷಿಯನ್ಸ್ ಸೇರಿ ಸಿನೆಮಾ ಮಾಡಿದಾಗ ಅದರ ಮಜವೆ ಬೇರೆ. ಎಲ್ಲರಿಗೂ ಸಿನೆಮಾ ಚನ್ನಾಗಿಯೇ ಬರಬೇಕು ಪರತಿಯೊಂದು ಸನ್ನಿವೇಶಗಳ ವಿಮರ್ಶೆ ಬೇಗ ಮುಗಿಬೇಕು ಎಂಬ ಕಾತುರತೆ ಇರುತ್ತೆ. ಇಲ್ಲಿ ಹಣ ಎಂಬುದು ಆಮೇಲೆ. ಮೊದಲು ಕೆಲಸ. ಆದರೆ ಒಬ್ಬರೇ ನಿರ್ಮಾಪಕರದಾಗ ಅವರ ಇಚ್ಛೆ ಅಂತೆಯೇ ಎಲ್ಲದು ನಡೆಯಬೇಕು. ಎಷ್ಟೇ ಆಗಲಿ ಅವರ ದುಡ್ಡು ಅಲ್ಲವೇ. ಹಾಗಾಗಿ ನಾನು ಈ ಸಿನೆಮಾ ಒಪ್ಪಿಕೊಂಡಿದ್ದು ಕೂಡ ಎಂದರು ನಟ ಕೃಷ್ಣ.

ಜಾಲಿ ಬಾರು.... ಮುಗಿಸಿ (ತಪ್ಪು ತಿಳೀಬೇಡಿ ಪತ್ರಕರ್ತರೇನು ಬಾರಿಗೆ ಹೋಗಿರ್ಲಿಲ್ಲ)ಡಾರ್ಲಿಂಗ್ ಸಿನೆಮಾದ ಹಾಡುಗಳ ಸಂಯೋಜನೆ ಮುಹೂರ್ತಕ್ಕೆ ಹೋದರೆ ಅಲ್ಲಿಯೂ ಟೆಕ್ನೀಷಿಯನ್ಸ್ ಸೇರಿ ಸಿನೆಮಾ ಮಾಡುತ್ತಿದ್ದೇವೆ ಎಂಬ ಮಾಹಿತಿ ದೊರೆಯಿತು.

ಡಾರ್ಲಿಂಗ್ ಸಿನೆಮಾಗೆ ನಾಯಕ ಯೋಗೀಶ್ ಅವರ ಅಪ್ಪ ನಿರ್ಮಾಣದ ಮೇಲ್ವಿಚಾರಿಕೆ ಮಾಡುತ್ತಿದ್ದಾರೆ ನಿರ್ದೇಶಕ ಸಂತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಛಾಯಾಗ್ರಾಹಕ ಮಂಜುನಾಥ್ ನಾಯಕ್ ಹಾಗೂ ನಟ ಯೋಗೀಶ್ ಹಣದ ಬದಲಾಗಿ ತಮ್ಮ ವೃತ್ತಿಯನ್ನು ತೊಡಗಿಸಿಕೊಳ್ಳುತ್ತಿದ್ದಾರೆ.

ಈ ಎರಡು ಸಿನೆಮಾಗಳ ತಂತ್ರಜ್ಞರುಗಳ ರಕ್ಷಣೆ ಪ್ರೇಕ್ಷಕ ಮಹಾಪ್ರಭು ಮಾಡಬೇಕು. ಸಿನೆಮಾ ಚೆನ್ನಾಗಿ ಯಶಸ್ಸಾದರೆ ಗಂಟು ಗ್ಯಾರಂಟಿ ಇಲ್ಲದಿದ್ದರೆ ಕಗ್ಗಂಟು!

ಇಂತಹ ಯೋಚನೆಗಳಿಗೆ ಚಾಲನೆ ನೀಡಿದವರು ಛಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ತಪ್ಪಾಗಲಾರದು. ಒಂದು ಬುಲ್ ಬುಲ್ ಐವರು ತಂತ್ರಜ್ಞರಿಗೆ ದರ್ಶನ್ ನೀಡಿದ ಕಾಲ್ ಶೀಟ್ ಅವರುಗಳ ಆರ್ಥಿಕ ಸ್ಥಿತಿ ಎಕ್ದಮ್ ಹೆಚ್ಚಿಸಿತು. ಬುಲ್ ಬುಲ್ ಚಿತ್ರದ ಛಾಯಾಗ್ರಹಕ ಕೃಷ್ಣ ಕುಮಾರ್ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಸಾಹಿತ್ಯ ಬರೆದ ಕವಿರಾಜ್ನಿರ್ದೇಶಕ ಎಂ ಡಿ ಶ್ರೀದರ್ ಅವರುಗಳು ಕೋಟಿಗಟ್ಟಲೆ ಹಣ ಗಳಿಸುವಂತಾಯಿತು ಅವರೆಲ್ಲ ಜೀವನ ಮಾರ್ಗಕ್ಕೆ ಒಂದು ನೆಲೆಯೂ ಸಿಕ್ಕಿತು.
ನಟರೆಲ್ಲ ನಟರಲ್ಲ – ಗೌಡ್ರು

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.