Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ಬಾರು ಕಾರುಬಾರು!

IndiaGlitz [Tuesday, October 08, 2013]
Comments

ಗುಂಡಿನ ಹಾಡಿಗೆ ಕೇವಲ ಮಾಲಾಶ್ರೀ ಅವರ ಅಭಿನಯದ ಮಂಜುಳ ಗುರುರಾಜ್ ಅವರ ಕಂಠದಿಂದ ಬಂದ ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು.... (ನಂಜುಂಡಿ ಕಲ್ಯಾಣ ಚಿತ್ರ) ಅದೊಂದೇ ಜನಪ್ರಿಯ ಅಲ್ಲ. ಬಿ ಆರ್ ಲಕ್ಷ್ಮಣ್ ರಾವು ಗುಂಡಿನ ಹಾಡಿಗೆ ಪೋಲಿ ಹುಡುಗರ ಚೇಷ್ಟೆಗೆ 1968 ರಲ್ಲೇ ಚಾಲನೆ ಕೊಟ್ಟವರು. ಗಾಂಧಿನಗರದ ನಪೊಲೆಯನ್ ಬಾರ್ ಅಲ್ಲಿ ಕುಳಿತು ಕ್ಯಾಬರೆ ನೋಡುತ್ತಾ ಬೀರ್ ಹೀರುತ್ತಾ ಅವರು ಬರೆದ ಹಾಡು ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳಯರು... ಗೋಪಿಯನ್ನು ಪಾಪ ಗೇಲಿ ಮಾಡುತ್ತಿದ್ದರು....ಸುಗಮ ಸಂಗೀತದ ಉಸ್ತಾದರಾದ ಮೈಸೂರು ಅನಂತಸ್ವಾಮಿ ಹಾಗೂ ಡಾಕ್ಟರ್ ಸಿ ಅಶ್ವಥ್ ಅವರ ಗಾಯನದಲ್ಲಿ ಜನಪ್ರಿಯ ಆಯಿತು. ಈಗಲೂ 45 ವರ್ಷವಾದರೂ ಈ ಜಾಲಿಬಾರಿನಲ್ಲಿ ಹಾಡು ಚಿಲ್ಡ್ ಬಿಯರ್ ಅಷ್ಟೇ ಕಿಕ್ ನಿಡುತ್ತೆ.

ಆದರೆ ಗುಂಡು ಹೋಡದಂಗೆ ಇತ್ತೀಚಿಗೆ ಯೋಗರಾಜ ಭಟ್ಟರು ಬರೆದ ಕಾಲಿ ಕ್ವಾರ್ಟರ್ ಬಾಟ್ಲು.... ಹಾಡು ಶರವೇಗದಲ್ಲಿ ಟಾಪ್ ಆಫ್ ದ ಚಾರ್ಟ್ ಆಗಿಬಿಟ್ಟಿದೆ.

ಆದರೆ ಈ ಬಿ ಆರ್ ಎಲ್ ಅವರ ಹಾಡಿದೆಯಲ್ಲ ಅದು ದಶಕಗಳಿಂದ ಬೆಂಬಿಡದೆ ಅಚ್ಛೋತ್ತಿದೆ. ಈಗ ಆ ಹಾಡಿನ ಪ್ರಸ್ತಾಪ ಯಾಕೆ ಅಂದರೆ ಯುವ ಟೀಮ್ ಆ ಹಾಡಿನ ಸ್ಪೂರ್ತಿ ಇಂದ ಕಥೆ ರಚಿಸಿ ಅದಕ್ಕೆ ಜಾಲಿ ಬಾರು....ಪೋಲಿ ಹುಡುಗರು ಎಂದು ನಾಮಕರಣ ಮಾಡಿದೆ. ಆ ಚಿತ್ರದ ಮುಹೂರ್ತಕ್ಕೆ ಬಿ ಆರ್ ಎಲ್ ಸಹ ಬಂದಿದ್ದರೂ ಅವರು ಆ ಹಾಡಿನ ಬದಲು ಸಾಲದ ಬಗ್ಗೆ ಒಂದು ಹಾಡನ್ನು ಬರೆದು ಕೊಟ್ಟು ಅದನ್ನು ಸಂಗೀತ ನಿರ್ದೇಶಕ ವೀರ್ ಸಮರ್ಥ ಅವರು ರಾಗ ಹಾಕಿ ಅವರ ಚೊ ಚ್ವೀಟ್ ಪುಟ್ಟ ಮಗ ಬಾಯಿ ಪಾಟ ಮಾಡಿಕೊಳ್ಳುವಷ್ಟು ಜನಪ್ರಿಯ ಆಗಿ ಹೋಗಿದೆ.

ಬಿ ಆರ್ ಎಲ್ ಅವರ ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು....ಅಮ್ಮ ಎಂಬ ಕನ್ನಡ ಸಿನೆಮಾದಲ್ಲಿ ಬಳಕೆ ಆಗಿರುವುದರಿಂದ ಚಿತ್ರದ ನಿರ್ದೇಶಕ ಶ್ರೀಧರ್ ಅವರು ಈ ಹಾಡಿನ ಸ್ಪೂರ್ತಿ ಮಾತ್ರ ಕಥೆ ರಚಿಸಲು ತೆಗೆದು ಕೊಂಡಿದ್ದಾರೆ.

ಬಿ ಆರ್ ಎಲ್ ಅವರ ಅನೇಕ ಹಾಡುಗಳು ಸಿನೆಮಾದಲ್ಲಿ ಬಳಕೆ ಆಗಿದೆ ಆದರೆ ಆಕ್ಸಿಡೆಂಟ್ ಚಿತ್ರದಲ್ಲಿ ರಮೇಶ್ ಅರವಿಂದ್ ಅವರು ಬಿ ಆರ್ ಎಲ್ ಅವರ ಹುಚ್ಚು ಹಿಡಿಸುವ ಹಾಡು ಬಾ ಮಳೆಯ ಬಾ....ಸೋನು ನಿಗಂ ಅವರ ಕಂಠದಲ್ಲಿ ಸಕ್ಕತಗಿಯೇ ಇತ್ತು.

ಬಾರಿರುವತನಕ ಬಿ ಆರ್ ಎಲ್ ಅವರ ಜಾಲಿ ಬಾರು ಹಾಡು.... ಅಂದರೆ ಸಾಲ ಸಾಲ...ಗರಂ ಮಸಾಲ ಎಂದು ಅವರು ಈಗ ರಚಿಸಿರುವ ಹಾಡು ಬ್ಯಾಂಕ್ ಅಲ್ಲಿ ಸಾಲ ಕೊಡುವುದು ನಿಲ್ಲಿಸುವ ತನಕ ಅಥವಾ ಸಾಲ ಎಂಬುದು ನಿರ್ಣಾಮ ಆಗುವು ತನಕ ಬದುಕಿರುವುದು ಎಂದೇ ಹೇಳಬೇಕು.
ಟೆಕ್ನೀಷಿಯನ್ಸ್ ಸಿನೆಮಾ!Other News

 'Kulavadhu' in ETv
 Kalpana 'Jo Jo Laali' at Tucson
 Haripriya, Rachita Ram with Sudeep
 Ganesh SK on Aug 8
 Jai Jagadish at BH
 'Banaadi' Audio Comes
 'Tumula' Puneeth and TSN
 TSN-Khoday - 'Allama'
 3 D Goes Renukamba of KB
 What a Growth in KittyCopyright 2014 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.