1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಅರೆ ಬೆತ್ತಲೆ ಸೇವೆ!

IndiaGlitz [Saturday, October 12, 2013]
Comments

ಬೆತ್ತಲೆ ಸೇವೆ ಅಂತ ಕನ್ನಡ ಸಿನೆಮಾ ಬಂದದ್ದು ನೆನಪಿದೆ ತಾನೇ ಅದು ಪದ್ದತಿಯ ವಿರುದ್ದ ಮಾಡಿದ ಚಿತ್ರ ಹ್ಯಾಗೆ ದೇವದಾಸಿ ಪದ್ದತಿಯ ಬಗ್ಗೆ ಸಿನೆಮಗಳು ಬಂದವೋ ಹಾಗೆ!

ಈಗೀಗ ನಾಯಕಿಯರು ಬೆತ್ತಲೆ ಬೆನ್ನು ತೋರಿಸುವುದರಲ್ಲಿ ನಿಸ್ಸೀಮರಾಗಿದ್ದಾರೆ. ನಾಯಕಿಯರ ಬೆನ್ನಿಗೆ ಕ್ಯಾಮರಾ ಇಟ್ಟರೆ ಅವರೆಲ್ಲ ಬೆನ್ ಹರ್ ಅಂತ ಹೇಳುವುದುಂಟು. ಇತ್ತೀಚಿನ ಬೆನ್ನಿನ ಪ್ರದರ್ಶನದ ಸ್ಪರ್ಧೆಗೆ ಸೇರ್ಪಡೆಗೆ ಸುಕೃತ ವಾಗ್ಲೆ. ಜಟ್ಟ ಚಿತ್ರದಲ್ಲಿ ನಾಯಕ ಕಿಶೋರ್ ನಾಯಕಿ ಸುಕೃತ ಅವರ ನೀಲಿ ಬಣ್ಣದ ಮೈಗಂಟಿದ ಬಟ್ಟೆಯನ್ನು ಕುಡುಗೋಳಿಂದ ಕತ್ತರಿಸಿ ಬಿಸಾಡಿದಾಗ ಸುಕೃತ ನೆಲದ ಮೇಲೆ ಅಂಗಾತ ಮಲಗಿರುವ ದೃಶ್ಯಕ್ಕೆ ಟಾಪ್ ಇಂದ ಕ್ಯಾಮರಾ ಇಡಲಾಗಿದೆ. ಕೆಲವು ಸೆಕಂಡುಗಳ ಆ ದೃಶ್ಯ ಅಮೇಲೆ ಅದೃಶ್ಯ. ಬೆತ್ತಲೆ ಬಿದ್ದ ಸುಕೃತಳಿಗೆ ನಮ್ಮ ನಾಯಕ ಮಾರುದ್ದ ಸೀರೆ ಕುಪ್ಪಸ ಕೊಟ್ಟು ಇದನ್ನು ಉಟ್ಕೊಬೇಕು ಎಂದು ಆಜ್ಞೆ ಹೊರಡಿಸುತ್ತಾನೆ. ಬಿಂಕ ತುಂಬಿದ ಕೊಬ್ಬಿನ ಹೆಣ್ಣು ಸುಕೃತ ಪಾತ್ರ ಆ ಸೀರೆಯನ್ನು ಒಂದು ತಿಂಗಳಾದರು ಉಡುವುದಿಲ್ಲ. ಅವಳ ವಸ್ತ್ರ ಏನಿದ್ದರೂ ಕಂಬಳಿ. ಜಟ್ಟ ಸಿನೆಮಾದಲ್ಲಿ ಸುಕೃತ ಸೀರೆ ಉಡುತ್ತಾಳೆ ಆದರೆ ಆಗ ಆಗುವ ಪರಿಣಾಮವೇ ಬೇರೆ. ಮಧುವನ ಕರೆದರೆ...ಎಂದು ಪ್ರೇಕ್ಷಕ ಅಂದು ಕೊಳ್ಳುವ ಹೊತ್ತಿಗೆ ಎಲ್ಲ ಮಾಟಾಶ್!

ಕಳೆದ ವರ್ಷ ದಂಡುಪಾಳ್ಯ ಸಿನೆಮಾದಲ್ಲಿ ಪೂಜಾ ಗಾಂಧಿ ಸಹ ಟಾರ್ಚರ್ ಸನ್ನಿವೇಶದಲ್ಲಿ ತಮ್ಮ ಬೆನ್ನಿನ ಪ್ರದರ್ಶನ ಕೆಲವರ ಕೂಗಿಗು ಕಾರಣ ಆಗಿತ್ತು.

ಚಿತ್ರ ರಂಗದಲ್ಲಿ ಬೆಂಗವಾಲಾಗಿ ಇರುವುದಕ್ಕೆ ಈ ಬೆನ್ನು ನಾಯಕಿಯರಿಗೆ ಸಹಾಯ ಆಗುತ್ತಿದೆ ಅನ್ನಿಸುತ್ತೆ. ಈಜುಡೆಗೆ ಹೋಗಿ ಬೆತ್ತಲೆ ಬೆನ್ನು ಆ ಜಾಗವನ್ನು ಆಕ್ರಮಿಸಿದೆ ಅಂತ ಪಡ್ಡೆ ಹುಡುಗರು ಸಂತೋಷ ಪಟ್ಟು ಕೊಳ್ಳುತ್ತಿದ್ದಾರೆ.Other News


ಮೂರು ಆದೇಯ!

Uppi 2 Dasara Attraction

Boys in Stunts

Victory Half Century

ಮೂರು ಆದೇಯ!

Copyright 2016 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.