1. தமிழ்
  2. తెలుగు
  3. ??????
  4. Hindi
  5. Tamil
  6. Telugu
  7. Malayalam
  8. Kannada

ರಾವುಗೆ ಮಾಟ ಪ್ರಯತ್ನ

IndiaGlitz [Monday, October 14, 2013]
Comments

ನಾನು ಸೊಂಟ ಕಾಲು ಮುರಿದು ಮೂಲೆ ಸೇರಿದಾಗ ನಟ ಧರ್ಮ ತಂಪಾದ ಪಾನೀಯ ಕುಡಿದು ಚೇರ್ಸ್ ಮಾಡಿದ್ರಂತೆ ನನಗೆ ಮಾಟ ಮಂತ್ರ ಹಾಕಿಸಿದ ವ್ಯಕ್ತಿ ಸಹ ನನಗೆ ಸಿಕ್ಕಿ ಬಿದ್ದಿದಾನೆ. ಮಾಟ ಮಂತ್ರ ಹಾಕಿಸ್ಲಕ್ಕೆ ನನ್ನ ಫೋಟೋ ನೀಡಿದ್ದ ಪೂಜಾರಿಯೆ ನವಗ್ರಹ ದೇವಸ್ಥಾನದಲ್ಲಿ ಹೇಳಿಕೆ ಕೊಟ್ಟಿದ್ದಾರೆ = ಇದು ಓಂ ಪ್ರಕಾಷ್ ರಾವು ನೋವಿನಂದೇನು ಹೇಳಿಕೊಳ್ಳುತಿಲ್ಲ. ನಾವು ಎಂತಹ ವ್ಯಕ್ತಿಗಳ ಜೊತೆ ಬಾಳುತ್ತಿದ್ದೇವೆ ಎಂಬುದನ್ನೂ ಹೇಳುವುದು ಅವರ ಉದ್ದೇಶ. ಅಷ್ಟಕ್ಕೂ ಮಾಟ ಮಂತ್ರ ಹಾಕಿಸಿದ ವ್ಯಕ್ತಿ ನನ್ನ ಬಳಿ ಇನ್ನಿಲ್ಲದ ಸಹಾಯ ಪಡೆದಿದ್ದಾನೆ. ಆಹಾ..ಧರ್ಮ ಜ್ಯೂಸ್ ಕುಡಿದ್ದಾನೆ ಚಪ್ಪಾಳೆ ತಟ್ಟಿದ್ದಾನೆ ಅವನ ಹೊಟ್ಟೆ ತಣ್ಣಗಿರಲಿ ಎಂದರು ರಾವು.

ಓಂ ಪ್ರಕಾಷ್ ರಾವು ಎಷ್ಟು ಕಷ್ಟ ಪಡ್ತಾರೋ ಅಷ್ಟೇ ಕಷ್ಟ ಅನುಭವಿಸುತ್ತಾರೆ ಕೂಡ. ಇದು ಅವರ ಜಾಯಮಾನ. 30 ಸಿನೆಮಾ ನಿರ್ದೇಶನದಲ್ಲಿ ತಲೆ ಕೆರ್ಕೋಂಡ್ ಕೆರ್ಕೋಂಡು ಸಾಕಾಗಿ ಹೋಗಿದೆ ಅವರಿಗೆ.

ಆಗಾಗ್ಗೆ ಯೋಚನೆ ಬರುತ್ತೆ ತೆಲುಗು ಅಥವಾ ತಮಿಳು ಸಿನೆಮಕ್ಕೆ ಹೋಗಿಬಿಡೋಣ ಅಂತ. ನೋಡಿ ಸಾರಿ ಈ ತಿನ್ನೋ ಅನ್ನದ ಮೇಲೆ ಆಣೆ ನಾನು 750000 ರುಪಾಯಿಗಳನ್ನು ಬಡ್ಡಿ ಪ್ರತಿ ತಿಂಗಳು ಕಟ್ಟುತ್ತಿದ್ದೇನೆ. ಇದೆಲ್ಲ ನನಗೆ ಬೇಕಿತ್ತ. ಸಿನೆಮಾ ನಂಬಿ ಮಾಡಿಕೊಂಡ ಸಾಲವದು.

ಕಷ್ಟ ನಷ್ಟ ನಡುವೆ ಸಿನೆಮಾ ಮಾಡುತ್ತಾ ಹೋಗಬೇಕು. ಅದೇ ಈಗಿನ ಪರಿಸ್ಥಿತಿ. ಈ ಹಿಂದೆ ಹುಬ್ಬಳ್ಳಿ ಸಿನೆಮಾ ಮಾಡಿದ ನಂತರ ಒಂದು ವಾರೆ ವರ್ಷ ಖಾಲಿ ಕುಳಿತ್ತಿದ್ದೆ. ತಲೆ ಕೆಟ್ಟು ಹೋಗಿತ್ತು. ಈಗ ನನ್ನ ಯೋಚನ ಲಹರಿ ಬದಲಾಗಿದೆ. ಯಾರಿಗೂ ಜಾಸ್ತಿ ಬೈಯೋಲ್ಲ ಕಾಂ ಆಗಿ ಯೋಚಿಸ್ತಿನಿ ಕೆಲಸದ ವಿಚಾರ ಬಂದಾಗ ಅದೇ ರಾಕ್ಷಸ ತರಹ ಮಾಡುತ್ತೇನೆ. ಈಗ ನೋಡಿ ಅಯ್ಯ ಹಾಗೂ ಹುಚ್ಚ ಸಿನೆಮಾ ಶೀರ್ಷಿಕೆ ಹಳೆ ಕನ್ನಡ ಸಿನೆಮಗಳದ್ದು. ಆದರೆ ಎಲ್ಲವೂ ಹೊಸದು. ಉಮೇಶ್ ರೆಡ್ಡಿ ಎಂಬ ವ್ಯಕ್ತಿ ನನಗಾಗಿಯೇ ಈ ಎರಡು ಸಿನೆಮಾಗಳ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ.

ಅಯ್ಯದಲ್ಲಿ ಚಿರಂಜೀವಿ ಸರ್ಜಾ ಹುಚ್ಚದಲ್ಲಿ ಧನಂಜಯ್ಕುಮಾರ್ ನಟಿಸುತ್ತಿದ್ದಾರೆ. ಅಯ್ಯ ಚಿತ್ರಕ್ಕೆ ಅನುಪಮ್ ಖೇರ್ ಅವರನ್ನು ಕರೆತರುವ ಯೋಚನೆ ಇದೆ ಅಂತಾರೆ ರಾವು.

ಅಂದಹಾಗೆ ಅವರ ಮಗಳು ಶ್ರಾವ್ಯ ಅಭಿನಯದ ಒಂದು ಹಾಡನ್ನು ನೋಡಿ ರಾವು ಸಂತೋಷದಿಂದ ಇದ್ದರೆ. ಅವಳು ಒಳ್ಳೆ ಅಭಿನೇತ್ರಿ. ಅವಳಿಗೂ ಒಂದೇ ಒಳ್ಳೆ ಚಿತ್ರ ಮಾಡುವ ಆಸೆ ಇದೆ. ಅದು ಯಾವಾಗ ಬೇಕದ್ರು ಆಗಬಹುದು ಅಂತಾರೆ ರಾವು.
ಅರೆ ಬೆತ್ತಲೆ ಸೇವೆ!

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.