1. தமிழ்
  2. తెలుగు
  3. മലയാളം
  4. Hindi
  5. Tamil
  6. Telugu
  7. Malayalam
  8. Kannada

ಮಾತೆ ಸಂಗೀತ ಭಟ್ಟ

IndiaGlitz [Tuesday, October 15, 2013]
Comments

ಕನ್ನಡ ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರಿರುವಾಗಲೇ ಇನ್ನೇನೋ ಹುಡುಕಾಟ ಮಾಡುವುದೇ ಸೃಜನಶೀಲ ವ್ಯಕ್ತಿಯ ಉಮೇದು. ಮುಂಗಾರು ಮಳೆ ಇಂದ ಹಿಂತುರುಗದೆ ಮುನ್ನಡೆಯುತ್ತಿರುವ ಯೋಗರಾಜ ಭಟ್ಟರು ಹಿಂದಿ ಸಿನೆಮಾ ತಯಾರಿಕೆಗೆ ಸಿದ್ದವಾಗುತ್ತಿದ್ದಾರೆ ಎಂಬುದು ತಿಳಿದ ವಿಷಯ.

ಆದರೆ ಅವರು ಸಿದ್ದ ಮಾಡುತ್ತಿರುವ ಕಥೆಯ ನಾಯಕ ಮಾತ್ರ ಯಾರೆ ವ್ಯಕ್ತಿಗಳು ಮಾತನಾಡಿದರೆ ಅವನಿಗೆ ಸಂಗೀತದ ರೂಪದಲ್ಲಿ ಕೇಳಿಸುವ ಶಕ್ತಿ ಹೊಂದಿರುವವನು. ಇಂತಹ ಕಥಾ ನಾಯಕ ಇರುವುದರಿಂದಲೇ ಬಹುಶಃ 30 ರಿಂದ 40 ಹಾಡುಗಳನ್ನು ಭಟ್ಟರ ಮೊದಲ ಹಿಂದಿ ಸಿನೆಮಾದಲ್ಲಿ ಕಾಣಬಹುದು ಎಂಬ ವಿಚಾರ ಬೆಳಕಿಗೆ ಬಂದಿದೆ.

ಭಟ್ಟರು ಹಾಗೂ ಬಿ ಸುರೇಶ ಅವರ ಹಿರಿಯ ಸಹೋದ್ಯೋಗಿ ಜೊತೆ ಸೇರಿ ಹಿಂದಿ ಸಿನೆಮಾ ನಿರ್ಮಾಣ ಸೆಟ್ಟೇರಲು ತುಂಬಾ ದಿವಸಗಳೇನು ಉಳಿದಿಲ್ಲ. ಭಟ್ಟರು ಚಿತ್ರಕತೆಗೆ ಅಂತಿಮ ರೂಪ ನೀಡುತ್ತಿದ್ದಾರೆ. ಇದಾದ ತಕ್ಷಣ ತಾರಗಣದ ಆಯ್ಕೆ ನಡೆಯಲಿದೆ.

ಹಿಂದಿ ಚಿತ್ರ ನಿರ್ಮಾಣದ ನಂತರ ಯೋಗರಾಜ ಭಟ್ಟರು ಮೀಡಿಯಾ ಹೌಸ್ ಸಂಸ್ಥೆಗೆ ಗಣೇಶ್ ನಾಯಕನಾಗಿ ಅಭಿನಯಿಸುವ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

ಮುಂಗಾರು ಮಳೆ ಹಾಗೂ ಗಾಳಿಪಟ ನಂತರ ಯೋಗರಾಜ್ ಭಟ್ ಹಾಗೂ ಗಣೇಶ್ ಒಟ್ಟಾಗಿ ಸಿನೆಮಾ ಮಾಡುತ್ತಿರುವುದು ಬಿ ಸುರೇಶ್ ಹಾಗೂಶೈಲಜಾ ನಾಗ್ ನಿರ್ಮಾಣದ ಚಿತ್ರ. ಬಿ ಸುರೇಶ್ ಗರಡಿಯಲ್ಲಿ ಇಬ್ಬರು ಇದ್ದವರು ಎಂಬುವುದು ವಿಶೇಷ.
Banakar Late Bloomer!

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.