1. தமிழ்
  2. తెలుగు
  3. ??????
  4. Hindi
  5. Tamil
  6. Telugu
  7. Malayalam
  8. Kannada

ಟ್ಯೂಬ್ಲೈಟ್ ಹುಡುಗರು!

IndiaGlitz [Saturday, October 19, 2013]
Comments

ಟ್ಯೂಬ್ಲೈಟ್ ಎಂಬ ಪದವನ್ನು ಸ್ವಲ್ಪ ಲೇಟ್ ಆಗಿ ಅರ್ಥ ಮಾಡಿಕೊಳ್ಳುವವರಿಗೆ ಅನ್ವಯ ಅದನ್ನು ಕಿಚಾಯಿಸುವುದಕ್ಕೂ ಬಳಸಲಾಗುತ್ತದೆ. ಈಗ ಅದೇ ಶೀರ್ಷಿಕೆ ಕನ್ನಡ ಸಿನೆಮಕ್ಕಾಗಿ ಆಯ್ಕೆ ಆಗಿದೆ. ಅಂದಹಾಗೆ ಚಿತ್ರದ ಶೀರ್ಷಿಕೆಗು ಹಾಗೂ ಸಿನೆಮಕ್ಕೂ ಏನು ಸಂಬಂದ ಅಂತ ಕೇಳುವಂತಿಲ್ಲ. ಸಧ್ಯಕ್ಕೆ ನಾವು ನಂ ಇಷ್ಟ. ಬಹುಶಃ ಚಿತ್ರದ ನಾಲ್ಕು ನಾಯಕರು ಸೋಂಬೇರಿಗಳು ಅದಕ್ಕೆ ಅವರನ್ನು ಹೀಗೆ ಟ್ಯೂಬ್ಲೈಟ್ ಅಂತ ಹೇಳಲಾಗುತಿದೆ ಎಂಬ ಊಹೆ. ಸೋಂಬೇರಿಗಳು ಅಂತ ಅನ್ನಿಸಿ ಕೊಂಡ ಮೇಲೆ ಅವರೆಲ್ಲ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದರಾ ಎಂಬುದು ಸಹ ನಿಮ್ಮ ಊಹೆಗೆ ಬಿಟ್ಟದ್ದು.

ಇಂತಹ ಶೀರ್ಷಿಕೆ ಇಟ್ಟುಕೊಂಡು ಹೊಸಬರ ತಂಡ ಲಡಾಕ್ ಬಳಿ ಇರುವ ಕರ್ದೂಂಗ್ಲ ಪಾಸ್ ವಿಶ್ವದ ಅತೀ ಎತ್ತರದ ಮೋಟಾರ್ ರೈಡಿಂಗ್ ರಸ್ತೆ 18380 ಅಡಿಗಳು ತಲುಪಿ ಅಲ್ಲಿ ಚಿತ್ರೀಕರಣ ಮಾಡುತ್ತಿದೆ. ಅಂದಹಾಗೆ ಕನ್ನಡದ ಸೈನಿಕ ಚಿತ್ರವೂ ಈ ಸ್ಥಳದಲ್ಲಿ ಚಿತ್ರೀಕರಣ ಮಾಡಿತ್ತು.

ನಾಲ್ಕು ಬೈಕು ಸವಾರರ ಧೈರ್ಯ ಹಾಗೂ ಸಾಹಸಗಳ ಸುತ್ತ ಕೆ ಆರ್ ಮೂವಿ ಮಕೇರ್ಸ್ ಅಡಿಯಲ್ಲಿ ಚಿತ್ರ ಪ್ರಾರಂಭವಾಗಿದೆ. ಟ್ಯೂಬ್ಲೈಟ್ ಜಿಂಗ್ ಚಾಕ್...ಬಿಗಿ ಬಿಗಿ ಚಾಕ್...! ಉಪ ಶೀರ್ಷಿಕೆ ಹೊಂದಿರುವ ಚಿತ್ರ ಎ ವೇಣುಗೋಪಾಲ್ ಅವರ ನಿರ್ದೇಶನದ ಚಿತ್ರ. ಮನೋಹರ್ ಜೋಷಿ ಅವರ ಛಾಯಾಗ್ರಹಣ ಅಕ್ಷಯ್ ಪಿ ರಾವು ಅವರ ಸಂಕಲನ ಕಿರಣ್ ರವೀಂದ್ರನಾಥ್ ಅವರ ಸಂಗೀತ ಹೃದಯಶಿವ ಹಾಗೂ ವೇಣುಗೋಪಾಲ್ ಅವರ ಸಾಹಿತ್ಯಪ್ರಸನ್ನ ಕುಮಾರ್ ಜಿ ಅವರು ಕಾರ್ಯಕಾರಿ ನಿರ್ಮಾಪಕರು.
‘ನಗೆ ಬಾಂಬ್’ ಪ್ರಚಾರ ವೈಖರಿ!

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.