1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಮತ್ತೆ ಕೇಸ್ ನಂ 18/9 ಬಿಡುಗಡೆ

IndiaGlitz [Tuesday, October 22, 2013]
Comments

ಎಸ್ ಎಸ್ ಎಲ್ ಸಿ ಏಪ್ರಿಲ್ ಅಲ್ಲಿ ಫೈಲ್ ಅದರ ಏನು ಮಾಡ್ತೀರಾ... ಅಕ್ಟೋಬರ್ ತಿಂಗಳ ಮರು ಪರೀಕ್ಷೆ ಕುಳಿತು ಮಾಡ್ತೀರಾ....ಅದೇ ರೀತಿ ಒಮ್ಮೆ ಬಿಡುಗಡೆ ಆಗಿದ ಚಿತ್ರ ಮತ್ತೊಮ್ಮೆ ಬಿಡುಗಡೆ ಭಾಗ್ಯ ಕಾಣುತ್ತಿದೆ. ಒಂದಲ್ಲ ಎರಡು ಸಿನೆಮಗಳು ಒಂದು ಅವರ ಬಿಟ್ಟು ಬರುತ್ತಿದೆ. ಒಂದು ಕೇಸ್ ನಂ 18/9 ಮಗದೊಂದು ಎಲಕ್ಷನ್

ಎಕ್ಸಾಮ್ ಅಲ್ಲಿ ನಾನು ಫೈಲ್ ಆಗಲು ಜ್ವರ ಬಂದ್ಬಿಟ್ಟಿತು ಅನ್ನುವ ಹಾಗೆ ಈ ಕೇಸ್ ನಂ 18/9 ಚಿತ್ರಕ್ಕೆ ಪೈಪೋಟಿ ಎಂಬ ಜ್ವರದಿಂದ ಸೊರಗಿತ್ತು. ಆದರೆ ಎಲಕ್ಷನ್ ರಾಜ್ಯ ಚುನಾವಣೆ ಇಂದೇ ಸೊರಗಿ ಹೋಗಿತ್ತು ಎಂದು ನೀಡುತ್ತಿರುವ ಕಾರಣ.

ಕೇಸ್ ನಂ 18/9 ಗಂತು ಮಾಧ್ಯಮದ ಪ್ರಾಚಾರವು ಸಹ ಚನ್ನಾಗಿಯೇ ಸಿಕ್ಕಿತ್ತು ಚಿತ್ರದ ಸತ್ವ ಸಹ ರೀಮೇಕ್ ಆದರೂ ಚನ್ನಾಗಿಯೇ ಇತ್ತು ಅಂತ ಕಿಚ್ಚ ಸುದೀಪ್ ಅವರಿಗೂ ಅನ್ನಿಸಿದ್ದು ಉಂಟು. ಅದಕ್ಕಾಗಿಯೇ ಮರುಬಿಡುಗಡೆಗೆ ಮರು ಪತ್ರಿಕಾ ಗೋಷ್ಠಿ ಸಹ ನಿರ್ಮಾಪಕರು ಕರೆದಿದ್ದಾರೆ. ಅವರು ಮರು ವಿಮರ್ಶೆಯನ್ನು ಕೆಳದಿದ್ದರೆ ಅಷ್ಟೇ ಸಾಕು!

ವ್ಯಾಪಾರಿ ಸಿನೆಮಾದಲ್ಲಿ ಮನಸ್ಸು ಹೃದಯ ತಟ್ಟುವ ಸಿನೆಮಾ ಕೇಸ್ ನ ಈ ವಾರ ಮತ್ತೆ ರಜತ ಪರದೆಯ ಮೇಲೆ ರಾರಾಜಿಸಲಿದೆ.ಈ ಚಿತ್ರ 2013ರ ಮೇ ಮೊದಲವಾರದಲ್ಲಿ ರಾಜ್ಯಂದಂತ ಬಿಡುಗಡೆ ಆಗಿತ್ತು.

ಉಧ್ಯಮದ ಹಲವಾರು ನುರಿತ ವ್ಯಕ್ತಿಗಳ ಸಲಹೆಯಂತೆ ಹಾಗೂ ಪ್ರೇಕ್ಷಕರಿಗೆ ಮತ್ತೆ ಒಂದು ಸಾಮಾಜಿಕ ಜವಾಬ್ದಾರಿ ಸಿನೆಮಾದ ವೀಕ್ಷಣೆಗೆ ಅವಕಾಶ ನೀಡಲು ನಿರ್ಮಾಪಕರುಗಳಾದ ವಿ ಕೆ. ಮೋಹನ್ ಪ್ರವೀಣ್ ಕುಮಾರ್ ಶೆಟ್ಟಿ ಶಿವಾನಂದ್ ಶೆಟ್ಟಿ ಕಾಂತಿ ಶೆಟ್ಟಿ ಅವರ ಮೊದಲ ಜಂಟಿ ಪ್ರಯತ್ನ ಈಗಾಗಲೇ ಉತ್ತಮ ಪ್ರತಿಕ್ರಿಯೆಯನ್ನು ಸಂಪಾದಿಸಿಕೊಂಡಿದೆ.  ಚಿತ್ರದ ಕಥಾವಸ್ತು ದೇಶದ ಎಲ್ಲ ಕಡೆ ಪಸರಿಸ ಬಹುದಾದ ವಿಚಾರ ಆದ್ದರಿಂದ ಈ ಚಿತ್ರವನ್ನೂ ಸಾಮಾಜಿಕ ಕಳಕಳಿಯಿಂದಲೂ ಮಾಡಲಾಗಿದೆ. ನಾಯಕ ನಿರಂಜನ್ ಈ ಚಿತ್ರಕ್ಕಗೆ ಒಂದು ವಾರ ಕಾಲ ಕೊಳಚೆ ಪ್ರದೇಶದಲ್ಲಿ ಇದ್ದು ಅಲ್ಲಿನ ವಾತಾವರಣವನ್ನು ಗಮನಿಸಿ ಈ ಸಿನೆಮಕ್ಕೆ ಬೇಕಾದ ರೀತಿಯಲ್ಲಿ ಹಾವ ಭಾವಗಳನ್ನು ಅಳವಡಿಸಿಕೊಂಡಿದ್ದಾರೆ. ಶ್ವೇತ ಪಂಡಿತ್ ಅಭಿ ಸಿಂಧು ಲೋಕ ನಾಥ್ ಹಾಗೂ ಕಾರ್ತಿಕ್ ಶರ್ಮ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ.  ನಿರ್ದೇಶಕರು ಮಹೇಶ್ ರಾವು. ಛಾಯಾಗ್ರಾಹಕ ಸಭಾ ಕುಮಾರ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ದೀಪು ಎಸ್ ಕುಮಾರ್ ಅವರ ಸಂಕಲನ ರಾಜು ಬೆಳೆಗೆರೆ ಅವರ ಸಂಭಾಷಣೆ ಈ ಚಿತ್ರಕ್ಕಿದೆ.
Basavaraj K No More

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.