1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಪುಂಗಿ ದಾಸ ಮಾತೊ ಮಾತು!

IndiaGlitz [Friday, October 25, 2013]
Comments

ಕೋಮಲ್ ಕುಮಾರ್ ಚಿತ್ರಗಳೆಂದರೆ ಬಾಯಿ ತುಂಬಾ ಮಾತು ಹೊಟ್ಟೆ ತುಂಬಾ ನಗು. ನಗುವುದಕ್ಕೆ ಮಾತು ಜೋಡಿಸಬೇಕಲ್ಲ ಸ್ವಾಮಿ. ಅದೇ ಈಗ ಆಗುತ್ತಿರುವ ಕೆಲಸ ಪುಂಗಿ ದಾಸ ಚಿತ್ರಕ್ಕೆ.

ಪುಂಗಿ ದಾಸ ದಿವಸಗಳ ಚಿತ್ರೀಕರಣ ಮುಗಿಸಿ ಇದೀಗ ಕರಿ ಸುಬ್ಬು ಅವರ ಬಾಲಾಜಿ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಪ್ರಾರಂಭವಾಗಿದೆ. ಇದಕ್ಕೂ ಮುಂಚೆ ಮೂರು ದಿವಸಗಳ ಪ್ಯಾಚ್ ವರ್ಕ್ ಮಾಡಲಾಗಿದೆ. ಇನ್ನೂ ನಾಲ್ಕು ಹಾಡುಗಳಷ್ಟೇ ಬಾಕಿ ಇರುವುದಾಗಿ ನಿರ್ದೇಶಕ ಶ್ರೀನಾಥ್ ಅವರು ತಿಳಿಸಿದ್ದಾರೆ. ಶ್ರೀನಾಥ್ ರಂಬೊ ನಿರ್ದೇಶಕರೂ

ವಿಕ್ಟರಿ ಚಿತ್ರಕ್ಕೆ ಕಥೆ ಒದಗಿಸಿರುವವರು ಈ ಬಾರಿ ಒಂದು ವಿಚಿತ್ರ ಹಾಗೂ ಸಮಾಜದಲ್ಲಿ ಜರಗುವ ಸಂಗತಿಯನ್ನು ಇಟ್ಟುಕೊಂಡೇ ನಕ್ಕು ನಗಿಸಲು ಕೋಮಲ್ ಕುಮಾರ್ ಅವರ ಇಮೇಜ್ ಅನ್ನು ಬಳಸಿಕೊಳ್ಳುತ್ತಿದ್ದಾರೆ.ಮನೆಯಲ್ಲಿ ತಾತ ಅಸುನೀಗಿದ್ದಾನೆ. ಆದರೆ ಆತ ಸಾಲ ಕೊಟ್ಟಿರುವ ತಾತ ಹಾಗೂ ಪಡೆದಿರುವ ಘಾಟಿ ತಾತ. ಅದನ್ನು ಪಡೆಯಲು ಹ್ಯಾಗಗೆಲ್ಲ ಪುಂಗಿ ಊದಬೇಕಾಗಬಹುದು ಎಂಬುದು ಚಿತ್ರದ ತಿರುಳು.ಕೋಮಲ್ ಕುಮಾರ್ ಅವರಿಗೆ ಆಸ್ಮ ಎಂಬುವರು ನಾಯಕಿ. ಆರ್ ಎನ್ ಸುದರ್ಶನ್ ತಾತ ಸೌಕರ್ ಜಾನಕಿ ಅವರು ಅಜ್ಜಿ ಪಾತ್ರದಾರಿ. ಬಿ ಸಿ ಪಾಟೀಲ್ ಅವರು ಬಳಿಕ ಬಣ್ಣ ಹಚ್ಚುತ್ತಿದ್ದಾರೆ. ಆಶಿಷ್ ತಬ್ಲ ನಾಣಿ ಕುರಿ ಪ್ರತಾಪ್ ಬುಲ್ಲೆಟ್ ಪ್ರಕಾಷ್ ಪದ್ಮಜ ರಾವು ಮುಖ್ಯ ಪಾತ್ರದಲ್ಲಿ ರಾಜೇಂದ್ರ ಕಾರಂತ್ ಹಾಗೂ ಇನ್ನಿತರರು ಇದ್ದಾರೆ.

ಪುಂಗಿ ದಾಸ ಚಿತ್ರಕ್ಕೆ ಸಂಗೀತ ಭಾರಿಸುತ್ತಿರುವವರು ಫರ್ಹಾನ್ ರೋಶನ್ (ಈ ಹಿಂದೆ ಏಮಿಲ್ ಎಂದು ಪರಿಚಯ ಅದವರು ನಂದ ಲವ್ಸ್ ನಂದಿತಾ ಚಿತ್ರದ ಜಿಂಕೆಮರಿ ಹಾಡಿನ ಖ್ಯಾತಿ). ಅರುಳ್ ಅವರ ಛಾಯಾಗ್ರಹಣವಿದೆ.ಎಸ್ ಎಸ್ ವಿ ಪ್ರೊಡಕ್ಷನ್ ಈ ಚಿತ್ರದ ನಿರ್ಮಾಪಕರು ಸದಾಶಿವ. ಬೆಂಗಳೂರಿನ ಸುತ್ತ ಮುತ್ತ ಆರ್ ಎಸ್ ಗೌಡ ರಾಜರಾಜೇಶ್ವರಿನಗರ ತಾವರೆಕೇರೆ ನೈಸ್ ರಸ್ತೆ ಗಿರಿನಗರ ಹಾಗೂ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ.Other News


ಖಾತರ್ನಾಕ್ ಕೂಡ ರಿವೈಸಿಂಗ್

Vaishali Vivacious

Nrupathunga Baraguru

SharanNanda Again!

ಖಾತರ್ನಾಕ್ ಕೂಡ ರಿವೈಸಿಂಗ್

Copyright 2016 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.