Follow us on
 
 
  1. Hindi
  2. Tamil
  3. Telugu
  4. Malayalam
  5. Kannada

'2003' ಇದಪ್ಪ ವರ್ಸೆ

IndiaGlitz [Friday, October 25, 2013]
Comments

ಚಿತ್ರಗಳು ವಿಚಿತ್ರವಾಗಿದ್ದಾರೆ ನಿರ್ಮಾಪಕರುಗಳಿಗೆ ಸುಚಿತ್ರ ವಾಣಿ. ಅರ್ಥಾತ್ ಗಲ್ಲಾ ಪೆಟ್ಟಿಗೆಯಲ್ಲಿ ಶುಭ ವಾರ್ತೆ! ಅದೇಕೋ ಏನೋ ಕೆಲವರಂತೂ ಶೀರ್ಷಿಕೆ ಇಟ್ಟುಕೊಳ್ಳಲು ಇನ್ನಿಲ್ಲದಂತೆ ಜವಾಬ್ದಾರಿ ಹಾಗೂ ಬೇಜವಾಬ್ದಾರಿ ಸಹ ತೋರಿದ್ದಾರೆ.

ಈಗ ನೋಡಿ ಸಾಯಿ ಜಾದವ್ ಅವರು 2003ರಲ್ಲಿ ನಡೆದ ಪ್ರೇಮ ಕಥೆಗೆ '2003' ನೈಜ ಪ್ರೇಮ ಕಥೆ ಎಂದೇ ನಾಮಕರಣ ಮಾಡಿದ್ದಾರೆ. ಆದರೆ ಇಲ್ಲಿ ಎದ್ದು ಕಾಣುವುದು ಸಾಯಿ ಜಾದವ್ ಅವರು ಚಿತ್ರಾನ್ನ ಬಡೆಸಲು ಸಿದ್ದವಾಗಿದ್ದಾರೆ. ಅಂದರೆ ಆ ಹೆಸರಿನ ಚಿತ್ರ ಸಿದ್ದಮಾಡಿಕೊಂಡಿದ್ದಾರೆ. ಕೇಬಲ್ ವಾಯ್ಸ್ ಎಂಬ ಮತ್ತೊಂದು ಸಿನೆಮವನ್ನು ಪೂರ್ತಿಗೊಳಿಸಿದ್ದಾರೆ.

'2003' ರ ವಿಚಾರಕ್ಕೆ ಬಂದರೆ ಸಾಯಿ ಜಾದವ್ ಅವರು ಆ ವರ್ಷದಲ್ಲಿ ಕ್ಲಾಸಿಕಲ್ ನೃತ್ಯಗಾರ್ತಿ ಒಬ್ಬರು ಈವೆಂಟ್ ಮ್ಯಾನೇಜರ್ ಅವರನ್ನು ಪ್ರೀತಿಸಿ ಸಂಕಟಕ್ಕೆ ಸಿಕ್ಕಿದ ಕತವಸ್ತುವನ್ನು ತೆರೆಯ ಮೇಲೆ ತರಲಿದ್ದಾರೆ. ಬಡವ ಶ್ರೀಮಂತ ಎಂಬ ವಿಚಾರದಲ್ಲಿ ಆದ ಮನಸ್ತಾಪ ಸಹ ಈ ಚಿತ್ರದಲ್ಲಿ ಇಟ್ಟುಕೊಂಡಿದ್ದಾರೆ.

ವೆಂಕಟಾದ್ರಿ ಸಿನೆ ವಿಷನ್ ಅಡಿಯಲ್ಲಿ ಡಾಕ್ಟರ್ ಸುಪರ್ಣ ರವಿಶಂಕರ್ ಸುರೇಶ್ ರಾಜ್ ಎನ್ ಕೆ ಫರೀದ್ ಜೊತೆ ಸೇರಿ ಈ ಸಿನೆಮಾ ನಿರ್ಮಾಣ ಮಾಡುತ್ತಿದ್ದಾರೆ. ತಾರನಾಥ್ ಅವರ ಸಂಗೀತ ಆನಂದ್ ಅವರ ಛಾಯಾಗ್ರಹಣ ಈ ಚಿತ್ರಿಕ್ಕಿದೆ. ಐದು ಹಾಡುಗಳಿಗೆ ಪ್ರಸಾದ್ ಸ್ಟುಡಿಯೋದಲ್ಲಿ ಅನುರಾಧ ಭಟ್ ಹಾಡಿರುವ ಹುಸಿನಗೆಯಲ್ಲಿ ನೀನು ಉಸಿರಾಗಿ ಸೇರಿದೆ....ಪ್ರಣಯದ ರಾಗದಲ್ಲಿ ಸ್ವರಗಳ ಮೀಟಿ ಹಾಡಿದೆ.... ಎಂಬ ಹಾಡಿನೊಂದಿಗೆ ಹಾಡುಗಳ ಧ್ವನಿ ಮುದ್ರಣ ಶುರು ಆಗಿದೆ.

ಈ ಚಿತ್ರದಿಂದ ಈ ಸಂಭಾಷಣೆ ಜೈ ಹಿಂದ್ಸಿನೆಮಾಗಳ ನಟ ಸಂದೇಶ್ ಜೈ ಸಂದೇಶ್ ಎಂದು ಮರುನಾಮಕರಣ ಮಾಡಿಕೊಂಡಿದ್ದಾರೆ. ನೃತ್ಯ ಬಲ್ಲ ನಟಿಯ ತಲಾಷ್ ಅಲ್ಲಿ ಸಾಯಿ ಜಾದವ್ ಅವರು ಇದ್ದಾರೆ. ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭ ಅಂತಾರೆ ಸಾಯಿ ಜಾದವ್.




ಪುಂಗಿ ದಾಸ ಮಾತೊ ಮಾತು!



Other NEws

ಪುಂಗಿ ದಾಸ ಮಾತೊ ಮಾತು!

Read More »



Copyright 2014 IndiaGlitz. All rights reserved. This material may not be published, broadcast, rewritten, or redistributed.





Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.