1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಗೂಗ್ಲಿ 100 ಯಷ್ ಕುಶ್

IndiaGlitz [Saturday, October 26, 2013]
Comments

ಯಾವ ನಟನಿಗೆ ಶಿವಾಜಿನಗರದಲ್ಲಿ ನಿಂತ್ಕೋಂಡ್ರೆ ಗುರುತು ಹಿಡಿಯೋರು ಗತಿ ಇಲ್ಲ ಎಂದು ಹಂಗಿಸಲಾಯಿತೋ ಅದೇ ನಟನ ಸಿನೆಮಾ ಒಂದಾದ ಮೇಲೆ ಗೆಲ್ಲುತ್ತಲೆ ಇದೆ. ಹಂಗಿಸಿದವರು ಈ ನಟನ ಕಾಲ್ ಶೀಟ್ ಕೇಳುವ ಹಂತಕ್ಕೆ ಬೆಳುದು ಬಿಟ್ಟಿದ್ದಾನೆ. ಅವರೇ ಯಷ್. ಇಂದಿನ ಯುವ ಪೀಳಿಗೆಯ ನಾಡಿ ಬಡಿತವನ್ನು ಮಿಂಚಿನ ನಟನೆಯಿಂದ ಸುಂದರ ನೋಟದಿಂದ ಸೆಳೆಯುತ್ತಾ ಬಂದಿದ್ದಾರೆ. ನಾಲ್ಕೈದು ನಟರುಗಳ ಸಿನೆಮಕ್ಕೆ ತುಂಬಾನೇ ಬೇಡಿಕೆ ಅಪ್ಪ ಎನ್ನುವ ಗಾಂಧಿನಗರಕ್ಕೆ ಇನ್ನೊಬ್ಬ ಸೇರ್ಪಡೆ ಆಗಿರುವರು.

ಇಂದಿಗೆ ಯಷ್ ಅಭಿನಯದ ಗೂಗ್ಲಿ 100 ದಿವಸ 30 ಚಿತ್ರಮಂದಿರಗಳಲ್ಲಿ ಪೂರೈಸಿದೆ. ಸಂತೋಷ್ ಅಂತಹ ದೊಡ್ಡ ಚಿತ್ರಮಂದಿರದಲ್ಲಿ 100 ದಿವಸ ಓಡಿರುವುದು ಸಾಮಾನ್ಯದ ವಿಚಾರ ಎನಲ್ಲ. ಜಯಣ್ಣ ಕಂಬೈನ್ಸ್ ಯಷ್ ಅವರ ಸಿರೀಸ್ ಆಫ್ ಸಿನೆಮಾಗಳ ಗೆಲುವಿನ ಮೆಟ್ಟಿಲನ್ನು ಬಿಟ್ಟು ಕೊಟ್ಟಿಲ್ಲ.

ಜಯಣ್ಣ ಹಾಗೂ ಭೋಗೇಂದ್ರ ಅವರ ಜಂಟಿ ನಿರ್ಮಾಣದ ಚಿತ್ರ ಗೂಗ್ಲಿ ನೋಡಿ ಒಂದೇ ಒಂದು ಬಾರಿ ಅದು ಧ್ವನಿ ಸುರುಳಿ ಸಮಾರಂಭದಲ್ಲಿ ಮಾತ್ರ ಮಾಧ್ಯಮದ ಮುಂದೆ ಬಂದಿದ್ದು ಬಿಟ್ಟರೆ. ಈ ನೂರು ದಿವಸಗಳಲ್ಲಿ ಕೊಚ್ಚಿಕೊಳ್ಳೋದು ತೋರಿಕೆಯ ಮಾತುಗಳನ್ನು ಆಡಲಿಲ್ಲ. ಪ್ರೇಕ್ಷಕ ಮೆಚ್ಚಿಕೊಂಡರೆ ಮಿಕ್ಕಿದೆಲ್ಲ ಶೂನ್ಯ ಅಲ್ಲವೇ!

ಇನ್ನೂ ಯಷ್ ಅಂತೂ ಮೊಗ್ಗಿನ ಮನಸು ಚಿತ್ರದ ಮೊದಲ ಚಿತ್ರ (ಜಂಬದ ಹುಡುಗಿ ಚಿಕ್ಕ ಪತ್ರ ಅದಕ್ಕೂ ಮೊದಲು) 100 ದಿವಸ ಕಂಡ ಚಿತ್ರ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿಯು ದೊರಕಿತ್ತು.

ರಾಕಿ ಇಂದ ರಾಕ್ ಸ್ಟಾರ್ ಆದ ಅವರು ಕಳ್ಳರ ಸಂತೆ ಗೋಕುಲ ತಮಸ್ಸು ಅಭಿನಯಿಸಿದರೂ ಅವರಿಗೆ ಎರಡೇ 100 ದಿನದ ಖ್ಯಾತಿ ತಂದುಕೊಟ್ಟಿತು. ಅದರ ನಂತರ ರಾಜಧಾನಿ ಮುಗ್ಗರಿಸಿದರು ಕಿರಾತಕ 100 ದಿನದ ಭಾಗ್ಯ ಕಂಡಿತು ಅವರು ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಲಕ್ಕಿ ಜಾನು ಸಿನೆಮಗಳು 50 ದಿವಸ ಪ್ರದರ್ಶನ ಕಂಡರೆ ಯೋಗರಾಜ ಭಟ್ಟರ ಡ್ರಾಮಾ 100 ದಿವಸಕ್ಕೆ ಕಾಲಿಟ್ಟಿತು. ಜಾನು ಡ್ರಾಮಾ ಗೂಗ್ಲಿ ಅವರ ಮೂರು ಸಿನೆಮಗಳು ಒಂದೇ ಬ್ಯಾನ್ನರ್ಗೆ - ಯಷ್ ನಿಜಕ್ಕೂ ಯಶಸ್ ಆಗಿ ಬಿಟ್ಟರು.

ಯಶಸ್ಸಿನ ಪರಾಕ್ರಮಾವೋ ಏನೋ ಅವರು ಬಂದು ಹೋದ ಒಂದು ಹಾಡು ಚಂದ್ರ ಸಿನೆಮಕ್ಕೆ ಅದು ಸಹ ಬಹಳವೆ ಸದ್ದು ಮಾಡಿತು ಅದರ ಜೊತೆಗೆ ಯಶಸ್ಸಿನ ಮುತ್ತು ಸಹ ಶ್ರೀಯ ಶರಣ್ ಅಂತಹ ನಟಿ ಇಂದ ಅವರಿಗೆ ಸಿಕ್ಕಿತು. ಇನ್ನೇನು ಭಾಗ್ಯ ಬೇಕಪ್ಪ ಈ ನಟನಿಗೆ!

ರಾಜ್ಯೋತ್ಸವಕ್ಕೆ ರಾಜ ಹುಲಿ ಯಷ್ ಅವರಿಂದ, ಆನಂತರ ಗಜಕೇಸರಿ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಅಂತೆ. ಈ ಬ್ರಹ್ಮಚಾರಿ ಯಾವಾಗ ಮದುವೆ ಆಗ್ತಾರೆ ಅಂತ ಕೇಳುವ ಸಮಯ ಇನ್ನೂ ಬಂದಿಲ್ಲ ಬಿಡಿ.Other News


‘ಲೊಡ್ಡೆ’ ದ್ವಿತೀಯ ಹಂತ

‘ಕರ್ನಾಟಕ ಅಯೋಧ್ಯಪುರ’ ಮರುಪರಿಶೀಲನೆಗ

Paru Gets U

Anjada Gandu Ready

‘ಲೊಡ್ಡೆ’ ದ್ವಿತೀಯ ಹಂತ

Copyright 2016 IndiaGlitz. All rights reserved. This material may not be published, broadcast, rewritten, or redistributed.Latest Videos

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2016 IndiaGlitz.com. All rights reserved.