Follow us on
 
 
  1. Hindi
  2. Tamil
  3. Telugu
  4. Malayalam
  5. Kannada

ಪ್ರಶಸ್ತಿ ಎಂಬ ಆಸ್ತಿ ಹಾಗೂ ಕುಸ್ತಿ!

IndiaGlitz [Saturday, October 26, 2013]
Comments

ಆಸ್ತಿ ವಿಂಗಡನೆಗೆ ಕೋರ್ಟಿಗೆ ಹೋಗೋದು ಗೊತ್ತಲ್ಲ ಹಾಗೆ ಈಗ ಪ್ರಶಸ್ತಿ ಎಂಬ ಸರ್ಕಾರದ ಆಸ್ತಿ ಬದಲಾಗಿ ಬಂದಿದೆ. ಕರ್ನಾಟಕ ಸಿನೆಮಾ ಪ್ರಶಸ್ತಿಗಳ ನೀಡುವಿಕೆಯ ವಿಚಾರದಲ್ಲಿ ಚರಿತ್ರೆ ಹುಟ್ಟು ಹಾಕಿದೆ. ಇದು ಭಾಗ್ವಾನ್ ಉವಾಚ! ಎಸ್ ಕೆ ಭಾಗ್ವನ್ ಕಮಿಟಿ ಹೆಚ್ಚು ಅಸಂತೋಷಕ್ಕೆ ಕಾರಣವಾಗಿದೆ.

ಅದದ್ದೆನೋ ಆಗಿ ಹೋಯಿತು ಅಂತ ಹೇಳುವ ಹಾಗೆ ಈ ನವೀಕರಿಸಿದ ಪ್ರಶಸ್ತಿ ಕಮಿಟಿ ಇಂದ ಆಗಿಲ್ಲ. ಬದಲಾವಣೆ ಮಾಡಲೇಬೇಕು ಎಂದು ಹಟ ತೊಟ್ಟಂತೆ ಈ ಪ್ರಶಸ್ತಿಗಳು 2010-2011ಕ್ಕೆ ಪ್ರಕಟ ಆಗಿದೆ. ಎಸ್ ಕೆ ಭಾಗ್ವನ್ ಏನೋ ದೇವರೇ ಹೇಳಿದ ಹಾಗೆ ಹಿರಿಯರ ಮನಸ್ಸಿಗೆ ಯಾಕೆ ನೋಯಿಸಬೇಕು ಅಂತ ಹೇಳಿದ್ದಾರೆ. ಅವರಿಗೆ ಎಚ್ ಎಸ್ ವೆಂಕಟೇಶ ಮೂರ್ತಿ ಬರಗೂರು ರಾಮಚಂದ್ರಪ್ಪ ಹಿರಿಯ ಪತ್ರಕರ್ತ ಸದಾಶಿವ ಶಣೈ ಅವರು ಕಾಳಜಿ ಇಂದ ಮಾಡಿದ ಸಿನೆಮಾ ವ್ಯಕ್ತಿಗಳು ಹಿರಿಯರು ಅಂತ ಯಾಕೆ ಅನ್ನಿಸಲಿಲ್ಲ!

ಕೆಲವು ಉದಾಹರಣೆಗಳ ಸಹಿತ ಹೇಳುವುದಾದರೆ ಪ್ರಾರ್ಥನಾ ಎಂಬ ಸಿನೆಮಕ್ಕೆ ನೀಡಿದ ಪ್ರಶಸ್ತಿಯ ಜೊತೆಗೆ 21 ಪ್ರಶಸ್ತಿಗಳನ್ನು ಬದಲಿಸಿ ಏಳು ಪ್ರಶಸ್ತಿ ಪ್ರಕಟ ಆಗಿದ್ದನ್ನು ಹಾಗೆ ಇಟ್ಟುಕೊಂಡು ಪ್ರಕಟಿಸಿದೆ. ಕನ್ನಡದ ಬಗ್ಗೆ ಕನ್ನಡ ಶಾಲಾ ವ್ಯವಸ್ಥೆಯ ಬಗ್ಗೆ ಅಃಚ್ಚುಕಟ್ಟಾಗಿ ಹೇಳಲಾಗಿದ್ದ ಪ್ರಾರ್ಥನಾ ಅಂತಹ ಸಿನೆಮಾ ಬದಲಿಸಿ ಈ ಹಿಂದೆ ಸರ್ಕಾರಿ ಉದ್ಯಮದಲ್ಲೇ ಇದ್ದವರು ಮಾಡಿದ ಸಿನೆಮಗಳಿಗೆ ಪ್ರಶಸ್ತಿ ಘೋಷಿಸಿ ಹಿರಿಯರಿಗೆ ಘಾಯ ಮಾಡಿದೆ ಈ ಎಸ್ ಕೆ ಭಾಗ್ವನ್ ಕಮಿಟಿ.

ಇದಕ್ಕೆ ಇನ್ನಷ್ಟು ಸೇರಿಸುವುದಾದರೆ ಡಾಕ್ಟರ್ ಎಚ್ ಎಸ್ ವೆಂಕಟೇಶ ಮೂರ್ತಿ ಅಂತಹ ಸಾರಸ್ವತ ಲೋಕದ ದಿಗ್ಗಜರಿಗೆ ಸಾಹಿತ್ಯಕ್ಕೆ ನೀಡಿದ ಪ್ರಶಸ್ತಿಯನ್ನು ಬದಲಿಸಿ ಕಾಲ್ಗೆಜ್ಜೆ ಎಂಬ ಸಿನೆಮಾದ ಬಂಗಾರು ಎಂಬುವರಿಗೆ ನೀಡುವ ಪ್ರಮೇಯ ಏನಿತ್ತು. ನೃಪತುಂಗ ಪ್ರಶಸ್ತಿಯನ್ನು ಇತ್ತೀಚಿಗೆ ಪಡೆದ ಮತ್ತೊಬ್ಬ ಸಾರಸ್ವತ ಲೋಕದ ಪ್ರೊಫೆಸರ್ ಬರಗೂರು ರಾಮಚಂದ್ರಪ್ಪ ಅವರ ಹೆಸರನ್ನು ಕಿತ್ಥಾಕಿ ಲಕ್ಷ್ಮೀಪತಿ ಕೋಲರಾ ಎಂಬುವರಿಗೆ ನಿಡುವಾಗಲು ಭಾಗ್ವನ್ ಕಮಿಟಿ ಯೋಚಿಸಬೇಕಿತ್ತು. ಅದೂ ಅಲ್ಲದೆ ಮುಗ್ದ ಮನಸಿಗೆ ಈ ಕಮಿಟಿ ಪೆಟ್ಟು ನೀಡಿದೆ. ಮಕ್ಕಳ ಮನಸಿಗೆ ಘಾಯ ಮಾಡುವುದು ಸರಿಯಲ್ಲ. ಬಾಲ ನಟನ ಪ್ರಶಸ್ತಿಯನ್ನು ಅನಿಲ್ ಕುಮಾರ್ ಬದಲಿಗೆ ಚನ್ನಕುಮಾರ್ ಎಂಬ ಬಾಲಕನಿಗೆ ನೀಡಿರುವುದಂತೂ ಈಕಮಿಟಿಗೆ ಏನು ಹೇಳಬೇಕೋ ತಿಳಿಯದು.

ವಿಜಯಲಕ್ಷ್ಮಿ ಸಿಂಗ್ ಎಂಬ ಹಿರಿಯ ನಟಿ ನಿರ್ದೇಶಕಿ ನಿರ್ಮಾಪಕಿಗೆ ಉತ್ತಮ ಪೋಷಕ ನಟಿ ಪ್ರಶಸ್ತಿ ನೀಡಿದನ್ನು ಬದಲಿಸಿ ಈಗಿನ ನಟಿ ಹರ್ಷಿಕ ಪೂನಾಚ ಅವರಿಗೆ ನೀಡಿದ್ದು ಅಸಮಾಧಾನವೇ.

ಇನ್ನೂ ರಮ್ಯ ವಿಚಾರಕ್ಕೆ ಬಂದಾಗ ಅವರ ರಾಜಕೀಯ ಪಕ್ಷದ ಕಾಂಗ್ರೆಸ್ ಸರ್ಕಾರ ಅವರಿಗೆ ಪ್ರಶಸ್ತಿ ನೀಡಿರುವುದು ಸಂಶಯ ಉಂಟು ಮಾಡುತ್ತದೆ. ರಮ್ಯ ಅವರ ಅಭಿನಯ ಸಂಜು ವೆಡ್ಸ್ ಗೀತ ಸಿನೆಮಾದಲ್ಲಿ ಉತ್ಕೃಷ್ಟ ಅನ್ನುವುದು ಸರಿಯೇ ಆದರೆ ಸಂಧರ್ಭ ಸರಿ ಇಲ್ಲ. ಅವರು ಈಗ ಹೇಳಿ ಕೇಳಿ ಲೋಕ ಸಭಾ ಸಧಸ್ಯೆ.

ಇನ್ನು ಪುನೀತ್ ರಾಜಕುಮಾರ್ ಅವರ ಪೃಥ್ವಿ ಸಿನೆಮಾದ ಅಭಿನಯದ ಮುಂದೆ ಜಾಕಿ ಅಷ್ಟೇನಿಲ್ಲ. ಅದರ ಪೃಥ್ವಿ ಗಣಿ ವಿವಾದ ಕುರಿತು ಮಾಡಲಾದ ಸಿನೆಮಾ. ರಾಜ್ಯ ಸರ್ಕಾರದ ವಾರ್ತ ಮಂತ್ರಿ ಸಂತೋಷ್ ಲಾಡ್ ಅವರು ಗಣಿ ವಿಚಾರದಲ್ಲಿ ತೊಂದರೆ ಅನುಭವಿಸುತ್ತಿರುವುದರಿಂದ ಆ ಸಿನೆಮಾದ ಹೆಸರನ್ನೆ ಬದಲಿಸುವಷ್ಟು ಯೋಚನೆ ತಂದು ಕೊಳ್ಳುವ ಈ ಕಮಿಟಿ ಮೊದಲ ಅತ್ಯುತ್ತಮ ಚಿತ್ರ ಎಂದು ಮಾಗಿಯ ಕಾಲ ಚಿತ್ರಕ್ಕೆ ಘೋಷಿಸಿದೆ. ಆದರೆ ಆ ಸಿನೆಮಕ್ಕೆ ಇನ್ನ್ಯಾವ ವಿಭಾಗದಲ್ಲೂ ಪ್ರಶಸ್ತಿಗಳು ಬಂದಿಲ್ಲ. ಹಾಗೆ ನೋಡಿದರೆ ಒಂದೂರಲ್ಲಿ ಸಿನೆಮಕ್ಕೆ ಐದಾರು ಪ್ರಶಸ್ತಿಗಳು ಬಂದಿರುವುದರಿಂದ ಅದನ್ನೇ ಮೊದಲ ಉತ್ತಮ ಚಿತ್ರ ಎಂದು ಪ್ರಕಟಿಸಬಹುದಿತ್ತು. ಈವಿಷ್ಟೂ ಹಾಗೂ ಇನ್ನಷ್ಟು ಅವಘಡಗಳಿಗೆಲ್ಲ ಕಾರಣ ಬಸಂತ್ ಕುಮಾರ್ ಪಾಟೀಲ್ ಅವರೇ ಆಗುತ್ತಾರೆ. ಕಾರಣ ಸ್ಪಷ್ಟ. ಅವರು ಕೋರ್ಟಿಗೆ ಹೋಗಿ ರಾಜ್ಯ ಪ್ರಶಸ್ತಿಯನ್ನು ಪ್ರಶ್ನಿಸಿದಕ್ಕೆ ಹೀಗೆಲ್ಲಾ ಆಗಿರುವುದು. ಒಂದುಕಡೆ ಅವರು ಡಾಕ್ಟರ್ ಭಾರತಿ ವಿಷ್ಣುವರ್ಧನ ಅಂತಹವರ ಮನಸ್ಸನ್ನು ದುಃಖಕ್ಕೆ ಈಡು ಮಾಡಿದರು ಹಾಗೂ ಈ ಹಿಂದೆ ಪ್ರಕಟಿಸಿದ ಪ್ರಶಸ್ತಿಗಿಂತ ಹೆಚ್ಚು ಅಸಮಾಧಾನಕರ ಪ್ರಶಸ್ತಿಗಳು ಘೋಷಣೆ ಆಗಿರುವುದರಿಂದ ಪಾಟೀಲ್ ಆವರಿಗೆ ಹಾಲು ಕುಡಿದ ಸಂತೋಷವೇ ಬಸಂತ್ ಕುಮಾರ್ ಪಾಟೀಲ್ ಅವರು ಯಾವುದಕ್ಕೆ ಆಕ್ಷೇಪಣೆ ಇದೆಯೋ ಅದನ್ನು ಮಾತ್ರ ಪ್ರಶ್ನಿಸಬೇಕಿತ್ತು ಎಂಬ ಅರಿವು ಅವರಿಗೆ ಈಗ ಆಗಿರಬೇಕು. ಬುದ್ದಿಜೀವಿಗಳ ನಿರ್ದೇಶಕರಜೊತೆ ಸಿನೆಮಾ ಮಾಡಿದರೆ ಅಷ್ಟೇ ಸಾಲದು.

ಈಗ ನೋಡಿ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಮಾತೊಮ್ಮೆ ಕೋರ್ಟಿಗೆ ಹೋಗಲು ಅವಕಾಶ. ಅವರ ನಿರ್ಮಾಣದ ಚಿತ್ರ ಬೆಟ್ಟದ ಜೀವ ಪಿ ಶೇಷಾದ್ರಿ ಅವರ ನಿರ್ದೇಶನದ ಚಿತ್ರ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದೆ. ಜ್ಞಾನ ಪೀಟ ಪುರಸ್ಕೃತ ಡಾಕ್ಟರ್ ಶಿವರಾಮ ಕಾರಂತ ಅವರಿಗೆ ರಾಷ್ಟ್ರಮಟ್ಟದಲ್ಲಿ ಸ್ಪೆಷಲ್ ಮೆನ್ಷನ್ ಮಾಡಲಾಗಿದೆ ಆದರೆ ರಾಜ್ಯ ಮಟ್ಟದಲ್ಲಿ ಅದನ್ನು ಕಡೆಗಣಿಸಲಾಗಿದೆ. ಈಗಲೇ ಪಾಟೀಲ್ ಅವರಿಗೆ ಸಿಕ್ಕಿರುವುದು ಸರಿಯಾದ ಪಾಯಿಂಟ್.




State Award Puneeth Ramya Best





Copyright 2014 IndiaGlitz. All rights reserved. This material may not be published, broadcast, rewritten, or redistributed.



Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.