1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ನಗೆ ಬಾಂಬ್ ಟ್ರೈನ್ ಹೊರಡಲು ಸಿದ್ದ

IndiaGlitz [Wednesday, October 30, 2013]
Comments

ನೂರು ಸಿನೆಮಾಗಳ ಸಂಗೀತ ನಿರ್ದೇಶಕ ಸ್ಥಾಯಿ ಡಿಜಿಟಲ್ ಸ್ಟುಡಿಯೋ ಸ್ಥಾಪಕ ರಾಜೇಶ್ ರಾಮನಾಥ್ ಅವರ ಮೊದಲ ನಿರ್ಮಾಣದ ಚಿತ್ರ ಚಿತ್ರದ ಪ್ರಾಚಾರಕ್ಕಾಗಿ ಹಲವಾರು ಅದ್ಬುತ ಯೋಜನೆಗಳನ್ನು ಸಿದ್ದಮಾಡಿಕೊಂಡಿದೆ.

ಸಧ್ಯದಲ್ಲೇ ಮೈಸೂರಿನಿಂದ ಹುಬ್ಬಳ್ಳಿಗೆ - ಹುಬ್ಬಳ್ಳಿ ಇಂಟರ್ ಸಿಟಿ ಬಂಡಿ ನಗೆ ಬಾಂಬ್ ಟ್ರೈನ್ ಅನ್ನುವ ಹೆಸರಿನಲ್ಲಿ ಹೊರಡಲಿದೆ. ಈ ನಗೆ ಬಾಂಬ್ ಟ್ರೈನ್ 21 ಭೋಗಿಗಳನ್ನು ಒಳಗೊಂಡಿದ್ದು ಮೈಸೂರಿನಿಂದ ಹೊರತು ಬೆಂಗಳೂರು ಶಿವಮೊಗ್ಗ ಧಾರವಾಡ ನಂತರ ಹುಬ್ಬಳಿ ಬಂದು ತಲುಪಲಿದೆ. ಮೂರು ತಿಂಗಳು ಈ ಪ್ರಯಾಣದ ಜೊತೆ ಪ್ರಯಾಣಿಕರು ನಗೆ ಬಾಂಬ್ ಪ್ರಯಾಣ ಅನುಭವಿಸಲಿದ್ದಾರೆ ಎಂದು ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಅವರು ತಿಳಿಸಿದ್ದಾರೆ. ನಗೆ ಬಾಂಬ್ ಟ್ರೈನ್ ಸಿದ್ದತೆ ಈಗಾಗಲೇ ಆಗಿದ್ದು ಕೆಲವೇ ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ.

ಟ್ರೆಂಡ್ ಸೆಟ್ ಮಾಡುವುದು ಅಲ್ಲದೆ ಕನ್ನಡ ಸಿನೆಮಗಳಿಗೆ ಹೊಸ ದಾರಿಗಳನ್ನು ಅನ್ವೇಷಣೆ ಮಾಡುವುದು ನಮ್ಮ ತಂಡದ ಯೋಚನೆ ಎಂದು ತಿಳಿಸುವ ರಾಜೇಶ್ ರಾಮನಾಥ್ ಅವರು ಬೆಂಗಳೂರಿನ ಮಂತ್ರಿ ಮಾಲ್ ಅಲ್ಲಿ 3 ಮಹಡಿಗಳ ಎಸ್ಕಾಲೆಟರ್ ಅಲ್ಲೂ ಸಹ ನಗೆ ಬಾಂಬ್ ಕನ್ನಡ ಚಿತ್ರದ ಪೋಸ್ಟರ್ ಅನ್ನು ಪ್ರಚಾರಕ್ಕಾಗಿ ಬಳಸಿದ್ದಾರೆ.

ಇದೆ ಅಲ್ಲದೆ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಒಂದು ಟೆಂಪೋ ಟ್ರಾವೆಲರ್ ವಾಹನವನ್ನು ಪ್ರತ್ಯೇಕವಾಗಿ ಬಳಸಲಾಗುತ್ತಿದೆ. ಈ ಟೆಂಪೋ ಟ್ರಾವೆಲರ್ ನಗೆ ಬಾಂಬ್ ಜಾಹೀರಾತು ಹೊತ್ತ ವಾಹನ ಬಾಡಿಗೆಗೆ ಸಹ ದೊರಯಲಿದೆ.

ಈ ಎಲ್ಲ ಹೊಸ ವಿಧಾನದ ಪ್ರಚಾರಕ್ಕೆ ಮಹೇಶ್ ಕೊಠಾರಿ ಅವರ ಸಹಕಾರ ಬಹಳವಾಗಿದೆ ಎಂದು ರಾಜೇಶ್ ರಾಮನಾಥ್ ಅವರು ನೆನೆಯುತ್ತಾರೆ.

ಸಂಕಲನಕಾರ ನಟ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಈ ಹಿಂದೆ ಹಾರ್ಟ್ ಬೇಟ್ಸ್ ರಾಕಿ ಚಿತ್ರಗಳಿಗೆ ನಿರ್ದೇಶನ ಮಾಡಿ ಈ ಬಾರಿ ಸಂಪೂರ್ಣ ಹಾಸ್ಯಮಯ ಚಿತ್ರಕ್ಕೆ ಚುಕ್ಕಾಣಿ ಹಿಡಿದಿದ್ದಾರೆ. ರವಿಶಂಕರ್ ಗೌಡ ಹಾಗೂ ಅನಿತಾ ಮೌಸಾಮಿ ಆನಂದಪ್ರಿಯ ಸಂಭಾಷಣೆ ಜೊತೆಗೆ ಪಾತ್ರವನ್ನು ಸಹ ಮಾಡಿದ್ದಾರೆ.ರಾಜೇಂದ್ರ ಕಾರಂತ್ ಸಾಧು ಕೋಕಿಲ ಮ್ಯಾಜಿಕ್ ಜಿನ್ನಿ ಲಯೇಂದ್ರ ಸಹ ತಾರಾಗಣದಲ್ಲಿ ಇದ್ದಾರೆ.

ಕಿರಣ್ ಹಾಗೂ ಸುರೇಶ್ ಅವರ ಛಾಯಾಗ್ರಹಣ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಅವರ ಸಂಕಲನ ವೆಂಕಟ್ ಅವರ ಸಾಹಸ ರೆಡ್ಡಿ ಅವರ ನೃತ್ಯ ಸಂಯೋಜನ ಈ ಚಿತ್ರಕ್ಕಿದೆ.
3 Pretty Girls in TNM

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.