1. தமிழ்
  2. తెలుగు
  3. ??????
  4. Hindi
  5. Tamil
  6. Telugu
  7. Malayalam
  8. Kannada

ಕಾಡು ನಾಡಿಗಿಂತ ಇಷ್ಟ ಕಿಶೋರ್

IndiaGlitz [Wednesday, November 06, 2013]
Comments

ಕನ್ನಡ ನಾಡಿನ ಈ ಕಿಶೋರ್ ಪಕ್ಕದ ರಾಜ್ಯಗಳಲ್ಲೂ ಶೋರ್ ಮಾಡುತ್ತಿರುವುದು ತಿಳಿದಿದೆ. ಆದರೆ ಅವರಿಗೀಗ ಅತೀವ ಸಂತೋಷಕ್ಕು ಎರಡು ಕಾರಣಗಳು.

ಮೊದಲನೆಯದು ಹೂವಿನ ಜೊತೆ ನಾರು ಸ್ವರ್ಗ ಸೇರಿತು ಅನ್ನುವ ಹಾಗೆ ಅವರ ಅಭಿನಯದ ಆರಂಭ ತಮಿಳು ಸಿನೆಮಾ ದೇಶ ವಿದೇಶಗಳಲ್ಲಿ ಜಯಭೇರಿ ಹೊಡೆಯುತ್ತಿದೆ. ಅದಕ್ಕೆ ಕಾರಣ ಸೂಪರ್ ಸ್ಟಾರ್ ತಲಾ ಅಜಿತ್ ಅವರಿಂದ ಸಾಧ್ಯವಾಗಿರುವುದು ಎನ್ನುತ್ತಾರೆ ಕಿಶೋರ್. ಸಣ್ಣ ಪಾತ್ರವೇನಲ್ಲ ಚಿತ್ರದ ಬಹುತೇಕ ದೃಶ್ಯಗಳಲ್ಲಿ ಕಿಶೋರ್ ಇರುವುದು ಅವರ ಸಂತೋಷವನ್ನು ಇಮ್ಮಡಿಗೊಳಿಸಿದೆ.

ಎರಡನೆಯದು ಈ ವರ್ಷದ ದೀಪಾವಳಿ ಹಬ್ಬಕ್ಕೆ ಕಿಶೋರ್ ಅವರಿಗೆ ಅವರ ನಾಡಿನ ಅಥವಾ ಕಾಡಿನ ಅಂತ ಬೇಕಾದರೂ ಕರೆಯಬಹುದಾದ ಜಟ್ಟ ಸಿನೆಮಾ 25 ದಿವಸಗಳ ಪ್ರದರ್ಶನವನ್ನು ಕಂಡು ಮಾಧ್ಯಮದ ಬ್ಲಾಕ್ ಬಸ್ಟರ್ ಎಂದು ಗುರುತಿಸಿ ನಿರ್ಮಾಪಕರ ಹಣಕ್ಕೆ ಮೊಸವೇನು ಆಗಿಲ್ಲ.

ಕಂಟಿ ಇಂದ ಜಟ್ಟ ವರೆವಿಗೂ ಕಿಶೋರ್ ಅವರಿಗೆ ವೈವಿಧ್ಯಮಯ ಪಾತ್ರಗಳೆ ಸಿಕ್ಕಿದೆ. ಜಟ್ಟ ಸಿನೆಮಾ ಸಂಪೂರ್ಣವಾಗಿ ಕಾಡಿನಲ್ಲೇ ಚಿತ್ರೀಕರಣವಾದ ಪಾತ್ರ. ಹೌದು ಅದು ನನಗೆ ಹೊಂದಿಕೊಳ್ಳಲು ಬಹಳ ಸುಲಭ ಆಯಿತು. ನನಗೆ ಕಾಡು ನಾಡಿಗಿಂತ ತುಂಬಾ ಇಷ್ಟ. ಅದರ ಪರಿಸರದ ಜೊತೆ ಹೆಚ್ಚು ಇರಲು ಬಯಸುವವನು ನಾನು ಎನ್ನುತ್ತಾರೆ ಅವರು.

ಅಂದಹಾಗೆ ಕಿಶೋರ್ ಅವರಿಗೆ ಜಟ್ಟ ಸಿನೆಮದಿಂದ ಆದ ಪ್ರಯೋಜನ ಏನು ನಾನು ಪರಭಾಷೆಯ ಚಿತ್ರಗಳಲ್ಲಿ ಅಭಿನಯಿಸುವಾಗ ಇಂತಹ ಚಿತ್ರಗಳು ಹಾಗೂ ಲುಸಿಯ ಅಂತಹ ಸಿನೆಮಾಗಳ ಉದಾಹರಣೆ ಕೊಡಬಹುದು. ಹಾಗೆ ಹೇಳುತ್ತಾ ಕಿಶೋರ್ ಅವರು ಲುಸಿಯ ಕ್ರೌಡ್ ಫಂಡ್ ಮಾಡಿದ ಸಿನೆಮಾ ನಮ್ಮದು ಕ್ರೌಡ್ ಪಬ್ಲಿಸಿಟಿ ಸಿನೆಮಾ ಎನ್ನುತ್ತಾರೆ.

ಸುದೀಪ್ ಅಂತಹ ಜನಪ್ರಿಯ ನಾಯಕರು ಜಟ್ಟ ಸಿನೆಮಾಗೆ ಮೆಚ್ಚುಗೆ ವ್ಯಕ್ತ ಮಾಡಿರುವುದನ್ನು ನೆನಪು ಮಾಡಿಕೊಂಡ ಕಿಶೋರ್ ಸಿನೆಮಾ ಎಂಬುದು ಒಂದು ಗ್ರೂಪ್ ಆಕ್ಟಿವಿಟೀ ಎಂದೇ ನಂಬಿದವರು. ಆ ಗೂಪ್ ಅಲ್ಲಿ ಮಾಧ್ಯಮ ಅದರ ಕೆಲಸವನ್ನು ಜಟ್ಟ ಸಿನೆಮಕ್ಕೆ ಅಚ್ಚುಕಟ್ಟಾಗಿ ಮಾಡಿರುವುದನ್ನು ಕಿಶೋರ್ ಶ್ಲಾಘಿಸಿದರು.
Brahma Bombat Action

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.