Follow us on
 
 
  1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ರೀಮೇಕ್ ನೋ ಎಂದ ಗಿರಿರಾಜ!

IndiaGlitz [Wednesday, November 06, 2013]
Comments

ಮೊನ್ನೆ ನರಕಚತುರ್ದಶಿ ದಿವಸದಂದು ರೀಮೇಕ್ ಎಂಬುದು ನರಕವೆಂಬಂತೆ ಭಾವಿಸುವ ಗಿರಿರಾಜ ಅವರು ಸಿಕ್ಕ ರೀಮೇಕ್ ಚಿತ್ರದ ಅವಕಾಶವನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದಾರೆ.

ಅದರ ಸಂಧರ್ಭ ಹೀಗಿದೆ. ನಿರ್ಮಾಪಕ ಎನ್ ಎಸ್ ರಾಜಕುಮಾರ್ ಅಲಿಯಾಸ್ ವಜ್ರೆಶ್ವರಿ ಕುಮಾರ್ ಅವರಿಗೆ ಗಿರಿರಾಜ ಅವರನ್ನು ಕಂಡರೆ ತುಂಬಾನೇ ಇಷ್ಟ.  ಅದನ್ನು ಮೊದಲ ದಿವಸದಿಂದಲೂ ಹೇಳಿ ಬರುತ್ತಿದ್ದಾರೆ. ಜಟ್ಟ ಅತ್ಯಂತ ಜನಪ್ರಿಯತೆ ಜೊತೆಗೆ ಮಾಧ್ಯಮದ ಬ್ಲಾಕ್ ಬಸ್ಟರ್ ಆದ ಘಳಿಗೆಯಲ್ಲಿ ನಿರ್ಮಾಪಕ ರಾಜಕುಮಾರ್ ಅವರಿಗೆ ಗಿರಿರಾಜ ಅವರಿಂದ ರೀಮೇಕ್ ಮಾಡಿಸಬೇಕು ಎಂಬ ಆಸೆ ಚಿಗುರಿದೆ. ಸಕ್ಕತ್ ಆದ ರೀಮೇಕ್ ಕಥೆಯನ್ನು ಅವರು ತಮ್ಮ ಮಡಿಲಿಗೆ ಸಹ ಹಾಕಿ ಕೊಂಡಿದ್ದಾರೆ. ಹ್ಯಾಗಾದರೂ ಮಾಡಿ ಈ ಗಿರಿರಾಜ ಅವರನ್ನು ಈ ರೀಮೇಕ್ ಚಿತ್ರ ಮಾಡಲು ಒಪ್ಪಿಸಬೇಕು ಎಂದು ಹಿರಿಯ ಪತ್ರಕರ್ತರುಗಳ ಹತ್ತಿರ ಮನವಿ ಸಹ ಮಾಡಿಕೊಂಡರು.

ರಾಜಕುಮಾರ್ ಅವರ ಈ ಆಸೆಯನ್ನು ಗಿರಿರಾಜ ಅವರ ಮುಂದೆ ಹೇಳಿದರೆ ಏನಂತಾರೆ ಗೊತ್ತೇ ನಾನು ರೀಮೇಕ್ ಮಾಡುವುದಿಲ್ಲ. ರೀಮೇಕ್ ಮಾಡುವುದೇ ಆದರೆ ನಮ್ಮ ನಿರ್ದೇಶಕರಾದ ಡಿ ರಾಜೇಂದ್ರ ಬಾಬು ಅವರು ಮಾಡಿದರಲ್ಲ ರಾಮಾಚಾರಿ ಯುಗಪುರುಷ ಯಾರೆ ನೀನು ಚೆಲುವೇ ರೀಮೇಕ್ ಹಾಗೆ ಮಾಡುವುದಕ್ಕೆ ಸಾಧ್ಯವಾಗಬೇಕು. ಅವರು ಮೂಲ ಪ್ರತಿಗಿಂತ ಬಹಳ ಅಃಚ್ಚುಕಟ್ಟಾಗಿ ಮಾಡುತ್ತಿದ್ದರು. ಹಾಗೆಲ್ಲಾ ಮಾಡಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದ ಮೇಲೆ ರೀಮೇಕ್ ಮಾಡಬಾರದು ಎಂದು ಗಿರಿರಾಜ ಹೇಳಿಕೆ ಕೊಟ್ಟರು.

ಹೀಗೆ ಗಿರಿರಾಜ ಒಂದು ದಿವಸದ ಹಿಂದೆ ಡಿ ರಾಜೇಂದ್ರ ಬಾಬು ಅವರು ಜ್ಞಾಪಿಸಿಕೊಂಡರು ಅದರ ಮಾರನೆಯ ದಿವಸವೆ ಆ ಜನಪ್ರಿಯ ನಿರ್ದೇಶಕರು ಜೀವನದ ಅಂತಿಮ ಯಾತ್ರೆಯನ್ನು ಮುಗಿಸಿಬಿಟ್ಟರು. ಸಾವು ಎಂಬುದು ರೀಮೇಕ್ ಅಲ್ಲ ಅದು ಒರಿಜಿನಲ್ ಅಲ್ಲವೇ!




ಕಾಡು ನಾಡಿಗಿಂತ ಇಷ್ಟ – ಕಿಶೋರ್



Other News

 My Temper Not Come Down - Venkat
 Venkat Birthday Celebrated
 MMMC Audio Comes
 Rukkoji on Raj!
 Rishi Files Complaint
 Puneeth Sing for 'Dove'
 Nikil Gowda to Act
 'Super Ranga' on Friday
 Uppi My Darling - Dr Shiv
 Dr Vishnu Memorial - Health Checkup



Copyright 2014 IndiaGlitz. All rights reserved. This material may not be published, broadcast, rewritten, or redistributed.



Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2014 IndiaGlitz.com. All rights reserved.