1. தமிழ்
  2. తెలుగు
  3. ??????
  4. Hindi
  5. Tamil
  6. Telugu
  7. Malayalam
  8. Kannada

ಪಾವನವಾಯಿತು!

IndiaGlitz [Wednesday, November 06, 2013]
Comments

ಪಾವನ ವಾಯಿತು ಕುಲಕೋಟಿಗಳು.... ಎಂಬುದು 'ಭಕ್ತ ಕುಂಬಾರ ಸಿನೆಮಾದ ಕಂಡೆ ಹರಿಯ ಕಂಡೆ ಹಾಡಿನ ಸಾಲು.... ಈಗ ಪಾವನ ಆಗಿರುವುದು ಪಾವನ ಅವರ ಜೀವನ. ಅದರಲ್ಲೂ ಸಿನೆಮಾ ಜೀವನ.

ಹೌದು ಈ ಪುಟ್ಟ ಕಲಾವಿದೆಗೆ ಅದೇಂತಹುದೋ ಸೌಭಾಗ್ಯ ತಾನಾಗೆ ಒದಗಿ ಬಂದಿದೆ. ಮೊದಲ ಚಿತ್ರ ಅದ್ವೈತ ಇನ್ನೂ ಬಿಡುಗಡೆ ಆಗಿಲ್ಲ ಎರಡನೆಯ ಸಿನೆಮಾ ಗೊಂಬೆಗಳ ಲವ್ ಮಾಧ್ಯಮದಿಂದ ಅತ್ಯಂತ ಹೆಚ್ಚಿನ ಮೆಚ್ಚುಗೆ ಗಳಿಸಿದ ಚಿತ್ರ ಹಾಗೂ ಇದೀಗ ಜಟ್ಟ ಹಿಂದಿನ ಚಿತ್ರಕ್ಕಿಂತಲೂ ಹೆಚ್ಚು ಪ್ರಶಂಸೆಯನ್ನೇ ಗಳಿಸಿದೆ. ಅದೇ ಅಲ್ಲವೇ ಪವನವಾಯಿತು ಪಾವನ ಅವರಿಗೆ!

ಈ ಸುಂದರ ಎತ್ತರದ ಮಂಡ್ಯ ಹುಡುಗಿ ವಿಧ್ಯೆಯಲ್ಲಿ ತಿಳವಳಿಕೆಯಲ್ಲಿ ಬಹಳ ಮುಂದಿದ್ದಾರೆ. ಸಾಮಾನ್ಯ ಹುಡುಗಿಯರಿಗಿಂತ ವಿಭಿನ್ನ ಆಗಿ ಯೋಚಿಸುವ ವರ್ತಿಸುವ ಈ ಬೆಡಗಿ ಕನ್ನಡದ ಮಟ್ಟಿಗಂತು ಅಸೆಟ್ ನೋಟದಲ್ಲೂ ಮೈಮಾಟದಲ್ಲೂ ಯಾವುದೇ ಬಾಲಿವುಡ್ ಬೆಡಗಿಗಿಂತ ಕಡಿಮೆ ಏನಿಲ್ಲ. ಸ್ವಲ್ಪ ಮಟ್ಟಿಗೆ ಕನ್ನಡದ ಸ್ಮಿತಾ ಪಾಟೀಲ್ ಅನ್ನಬಹುದು!

ಮೈಸೂರಿನ ಮಹಾಜನ್ ಕಾಲೇಜಿನಲ್ಲಿ ಪದವಿ ನಂತರ ಜರ್ನಲಿಸ್ಮ್ ಮಾಡಿ ಆನಂತರ ಗಿರಿರಾಜ ಅವರ ವರ್ಕ್ ಶಾಪ್ ಅಲ್ಲಿ ತರಬೇತಿ ಪಡೆದು ಅವರ ಮೊದಲ ಸಿನೆಮಾ ಅದ್ವೈತ ಚಿತ್ರಕ್ಕೆ ಆಯ್ಕೆ ಅದವರು. ಪಾವನ ಹೇಳುವುದು ಏನು ಗೊತ್ತೇ ಹೆತ್ತವರ ಆಸೆಯಂತೆ ವಿಧ್ಯಬ್ಯಾಸ ಮಾಡಿದ್ದು ಆಗಿದೆ. ಈಗ ಏನಿದ್ದರೂ ನನಗೆ ಇಷ್ಟ ಇರುವ ಈ ಮಾಧ್ಯಮ. ಜಟ್ಟ ಸಿನೆಮಾದ ಪ್ರತಿಕ್ರಿಯ ಮಾಧ್ಯಮದ ಪ್ರಶಂಸೆಯಿಂದ ಸಂತೋಷ ಆಗಿರುವ ಪಾವನ ಇನ್ನೂ ಮುಂದೆ ಇಂತಹ ಘಟ್ಟಿಯಾದ ಪಾತ್ರ ನನ್ನ ಜೀವನದಲ್ಲಿ ಸಿಕ್ಕುವುದೇ ಇಲ್ಲ ಎಂದು ಅಭಿಪ್ರಾಯ ಪಡುತ್ತಾರೆ.

ಪಾವನ ಅವರು ಈಗ ಸೃಜನ್ ಲೋಕೇಶ್ ಅವರ ಟಿಪಿಕಲ್ ಕೈಲಾಸ್ ಎಂಬ ಚಿತ್ರದ ನಾಯಕಿ. ಈ ಚಿತ್ರದಲ್ಲಿ ಕಾರ್ಪಾರೇಟ್ ಕಂಪನಿಯ ಉದ್ಯೋಗಿ ಸಿಕ್ಕಿರುವ ಮಾಡುತ್ತಿರುವ ಪಾತ್ರಗಳು ಎಲ್ಲವೂ ಬೇರೆಯದೇ ಆಯಾಮ ಘಳಿಸಿದೆ ಎಂಬುದು ಕನ್ನಡದ ಈ ಘಾಟಿ ನಟಿಯ ಹೆಗ್ಗಳಿಕೆ.

ಪಾವನ ಅವರು ಆಯ್ಕೆ ಮಾಡಿಕೊಂಡ ಅದೃಷ್ಟ ಸಿನೆಮವನ್ನು ಕೈ ಬಿಟ್ಟಿದ್ದಾರೆ. ಅವರಿಗೆ ನಿಜವಾದ ಅದೃಷ್ಟ ಖುಲಾಯಿಸಿರುವಾಗ  ಇನ್ನೆಂತಹ ಅದೃಷ್ಟ ಬೇಕು!
ರೀಮೇಕ್ ನೋ ಎಂದ ಗಿರಿರಾಜ!

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.