1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಅಯ್ಯ2 ಬಿರುಸಿನ ಚಿತ್ರೀಕರಣ

IndiaGlitz [Wednesday, November 13, 2013]
Comments

ಅಂದಿನ ಅಯ್ಯ ಚಿತ್ರದ ನಿರ್ದೇಶಕ ಎನ್ ಓಂಪ್ರಕಾಶ್ ರಾವ್ ಅವರು ಇಂದಿಗೆ ಅಯ್ಯ-2 ಎಂಬ ಚಿತ್ರ ನಿರ್ದೇಶನ ಮಾಡುತ್ತಾರೆ ಎಂದು ತಿಳಿದಿದೆ. ಆದರೆ ತಾರಾಗಣದಲ್ಲಿ ಬದಲಾವಣೆ ಮಾಡಿಕೊಂಡು ಕಥೆಯಲ್ಲಿ ಇಡೀ ದೇಶಕ್ಕೆ ಅನುಗುಣವಾಗುವ ವಿಷಯವನ್ನು ಇಟ್ಟುಕೊಂಡು ಅವರು ಮುಂದಾಗಿದ್ದಾರೆ.

ಚಿರಂಜೀವಿ ಸರ್ಜಾ ಹಾಗೂ ವೈಶಾಲಿ ದೀಪಕ್ ಅವರ ಮುಖ್ಯಾತಾರಾಗಣದ ನಿರ್ಮಾಪಕ ಉಮೇಶ್ ರೆಡ್ಡಿ ಅವರ ಮೊದಲ ನಿರ್ಮಾಣದ ಚಿತ್ರ ಅಯ್ಯ-2 ಮುಹೂರ್ತವನ್ನು ಮಾಡಿಕೊಂಡು ಇದೀಗ ರಾಕ್ಲೈನ್ ಸ್ಟುಡಿಯೋದಲ್ಲಿ ಚಿತ್ರೀಕರಣವನ್ನು ನಡೆಸುತ್ತಿದೆ.

ಹೆಸರಾಂತ ಹಿಂದಿ ನಟ ಅನುಪಮ್ ಖೇರ್ ಅವರು ಈ ಸಿನೆಮಾದಲ್ಲಿ ಭಾರತ ದೇಶದ ಜನಪ್ರಿಯ ಮಂತ್ರಿಯ ಪಾತ್ರದಲ್ಲಿ ಅಭಿನಯಿಸಲಿರುವ ಈ ಚಿತ್ರದಲ್ಲಿ ದೇಶ ಕಾಯುವ ನಾಯಕನಾಗಿ ಚಿರಂಜೀವಿ ಸರ್ಜಾ ಇದ್ದಾರೆ. ಅವರ ಪಾತ್ರದ ಮುಖೇನ ಯುವ ಜನತೆ ದೇಶವನ್ನು ಕಾಪಾಡಿಕೊಳ್ಳಬೇಕೆಂದು ಹೇಳುವ ವಿಚಾರ ಹೇಳಲಾಗಿದೆ.

ಅಯ್ಯ-2 ಚಿತ್ರದಲ್ಲಿ ನನ್ನ ತಂಟೆಗೆ ನಾನೇ ಹೋಗೋಲ್ಲ ಎಂಬ ಅಡಿಬರಹದಲ್ಲಿ ಪೋಲೀಸು ಅಧಿಕಾರಿಯ ಪಾತ್ರದಲ್ಲಿ ಚಿರಂಜೀವಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿಕ್ಕಮಗಳೂರಿನ ವೈಶಾಲಿ ದೀಪಕ್ ರಂಗಭೂಮಿಯಲ್ಲಿ ಸಾಕಷ್ಟು ತಿಳವಳಿಕೆ ಪಡೆದು ಕೊಂಡು ಮೊದಲ ಕನ್ನಡಸಿನೆಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಓಂ ಪ್ರೊಡಕ್ಷನ್ ಅಡಿಯಲ್ಲಿ ಎ ಎಂ ಉಮೇಶ್ ರೆಡ್ಡಿ ಅವರ ನಿರ್ಮಾಣದ ಚಿತ್ರಕ್ಕೆ ಎಂ ಎಸ್ ರಮೇಶ್ ಅವರ ಸಂಭಾಷಣೆ ಅರ್ಜುನ್ ಜನ್ಯ ಅವರ ಸಂಗೀತ ರಾಜೇಶ್ ಕಟ್ಟ ಅವರ ಛಾಯಾಗ್ರಹಣ ರವಿ ವರ್ಮ ಅವರ ಸಾಹಸ ಸರಿಗಮ ವಿಜಿ ಅವರ ನಿರ್ದೇಶನ ಸಹಾಯ ಗೋವರ್ಧನ್ ರೆಡ್ಡಿ ಅವರ ಸಂಕಲನ ಇದೆ.
‘ಪಾತರಗಿತ್ತಿ’ ಗಟ್ಟಿಗಿತ್ತಿOther News


Naganna on Muddanna

Mallikarjun ERA Ends

Raganna Back Home

Copyright 2015 IndiaGlitz. All rights reserved. This material may not be published, broadcast, rewritten, or redistributed.

Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2015 IndiaGlitz.com. All rights reserved.