1. தமிழ்
  2. తెలుగు
  3. Hindi
  4. Tamil
  5. Telugu
  6. Malayalam
  7. Kannada

ಬೌನ್ಸರ್ ಪ್ರಿಯ!

IndiaGlitz [Wednesday, November 13, 2013]
Comments

ಅಣ್ಣಾವ್ರು ಕೇಳಲೇ ಇಲ್ಲ ವಿಷ್ಣುವರ್ಧನ ಪಡಿಯಲು ಇಲ್ಲ = ಆದರೆ ಇಂದಿನ ಕಾಲದ ನಟರು ನೋಡ್ರಪ್ಪ ಐಷಾರಾಮಿ ಜೀವನದಲ್ಲಿ ಮಿಂದು ಏಳುತ್ತಿದ್ದಾರೆ. ಬಹುತೇಕ ಎಲ್ಲ ನಟರುಗಳು ಕಾರವಾನ್ ಬಳಸುವುದು ಅದರಿಂದ ಅವರ ಪಾತ್ರದ ಮೇಲೆ ಅದು ಇನ್ನಷ್ಟು ಪರಿಣಾಮ ಬೀಳುವುದು ಎಂದು ತಿಳಿದು ಕೊಂಡಿದ್ದರೆ ಅದು ತಪ್ಪು. ಅದು ಸುಖ ಯೋಗ ಅಷ್ಟೇ!

ಈಗ ನೋಡಿ ನಾಲ್ಕು ಫಿಲ್ಮ್ ಮಾಡಿಲ್ಲ ಪ್ರಿಯ ಹಾಸನ್ ಅವರು ನಾಲ್ಕು ಬೌನ್ಸರ್ ಗಳನ್ನು ಇಟ್ಟುಕೊಂಡು ಮೊನ್ನೆ ಸ್ಮಗ್ಗ್ಲರ್ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಓಡಾಡಿಕೊಂಡಿದ್ದರು. ಹಿಂದಿನ ಸೀಟಿನಲ್ಲಿ ಕುಳಿತ ಸಿನೆಮಾ ಪ್ರೇಕ್ಷಕ ಕಮಲ ಹಾಸನ್ ಅಂತವರಿಗೆ ಇಲ್ಲದ್ದು ಪ್ರಿಯ ಹಾಸನ್ ಅವರಿಗೆ ದಕ್ಕಿರುವುದನ್ನು ಬಯ್ಯಲು ಇಲ್ಲ ಹೊಗಳಲು ಇಲ್ಲ!

ಹೌದು ಮೊನ್ನೆ ಡಾಕ್ಟರ್ ಅಂಬರೀಶ್ ಬಂದೊಡನೆ ಎರಡು ಪೋಲೀಸು ಅಧಿಕಾರಿಗಳು ಅವರು ಡ್ಯೂಟಿ ಮೇಲೆ ಅಂಬರೀಶ್ ವಸತಿ ಸಚಿವರಾದ್ದರಿಂದ ಬಂದಿದ್ದರು. 300 ಸಿನೆಮಗಳನ್ನು ದಕ್ಷಿಣಭಾರತದಲ್ಲಿ ಅಭಿನಯಿಸಿರುವ ಸುಮನ್ ಅವರು ಸಾಮಾನ್ಯವಾಗೆ ಬಂದಿದ್ದರು.

ಆದರೆ ಪ್ರಿಯ ಹಾಸನ್ ಬಂದರು ನೋಡಿ ನಾಲ್ಕು ಆಜಾನುಬಾಹುಗಳು ಒಬ್ಬಬ್ಬರು ಆರು ಅಡಿ ಎತ್ತರ ಕಪ್ಪು ಉಡುಗೆ ಹಾಗೂ ತಲೆಗೆ ಅಂಟಿದ ಟೋಪಿ ಧರಿಸಿ ಪ್ರಿಯ ಹಾಸನ್ ಹೋದಲೆಲ್ಲಾ ಹಿಂದೆ ಹಿಂದೆ ಹೋಗುತ್ತಿದ್ದರು. ಅವರುಗಳ ಕೈಯಲ್ಲಿ ಬಂದೂಕು ಇಲ್ಲ ಆದರೆ ಯಾರನ್ನೆ ಆದರೂ ಪೋಗೊ ಚಾನಲ್ ಅಲ್ಲಿನ ಕಾರ್ಟೂನ್ ಸೀರಿಯಲ್ ಅಲ್ಲಿ ಎತ್ತಿ ಬಿಸಾಕಿದ ಹಾಗೆ ಬಿಸಾಕುವ ಶಕ್ತಿ ತುಂಬಿದಂತೆ ಕಂಡು ಬಂದರು. ಇದಪ್ಪ ವರಸೆ! ಪ್ರಿಯ ಹಾಸನ್ ಅವರು ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಪಡೆಯ ಅಧ್ಯಕ್ಷೆ. ಹಾಗಾಗಿ ಈ ಸವಲತ್ತನ್ನು ತಾವೇ ಪಡೆದು ಕೊಂಡು ಬಂದಿದ್ದರು.

ಮೊನ್ನೆ ತಾನೇ ದೇಶದ ಬಿ ಜೆ ಪಿ ಪ್ರಧಾನ ಮಂತ್ರಿ ವ್ಯಕ್ತಿ ನರೇಂದ್ರ ಮೋದಿ ಅವರಿಗೇಕೆ ಸೆಕ್ಯೂರಿಟೀ ಎಂಬ ವಿಚಾರ ಜ್ಞಾಪಕಕ್ಕೆ ಬಂದಿತು. ಹಣ ಬಲವೊಂದೇ ಇದ್ದರೆ ಸಾಲದು ಜನ ಬಲವು ಬೇಕು ಅಲ್ಲವೇ!
6 Heroes Bhajarangi Song

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.