1. தமிழ்
  2. తెలుగు
  3. മലയാളം
  4. Hindi
  5. Tamil
  6. Telugu
  7. Malayalam
  8. Kannada

ಅಂಬರೀಷ ತೃತೀಯ ಹಂತ

IndiaGlitz [Monday, November 18, 2013]
Comments

ಅಂಬರೀಷ ಚಿತ್ರದ ಎರಡನೇ ನಾಯಕಿ ಬದಲಾವಣೆ ಆದರೂ ಚಿತ್ರೀಕರಣಕ್ಕೆ ಏನು ತೊಂದರೆ ಆಗಿಲ್ಲ.

ನಿಶಾ ಯೋಗೀಶ್ವರ್ ಅವರ ಸ್ಥಾನಕ್ಕೆ ಯಾರು ಎಂಬುವ ಯೋಚನೆ ನಿರ್ದೇಶಕರಿಗೆ ಒಂದು ಕಡೆ ಆದರೆ ಅವರೇನು ಚಿತ್ರೀಕರಣವನ್ನು ಸ್ಥಗಿತಗೊಳಿಸಿಲ್ಲ. ದರ್ಶನ್ ಜೊತೆ ಬುಲ್ ಬುಲ್' ಚಿತ್ರದಲ್ಲಿ ಅಭಿನಯಿಸಿದ ರಚಿತ ರಾಮ್ ಅವರು ನಿಶಾ ಯೋಗೀಶ್ವರ್ ಅವರ ಜಾಗವನ್ನು ತುಂಬಿದ್ದಾರೆ.

ಸುಖಧರೆ ಪಿಕ್ಚರ್ಸ್ ಅಡಿಯಲ್ಲಿ ಮಹೇಶ್ ಸುಖದರೆ ಅವರೇ ನಿರ್ಮಿಸಿ ನಿರ್ದೇಶನ ಸಹ ಮಾಡುತ್ತಿರುವ ಚಿತ್ರ ಅಂಬರೀಷ ಚಿತ್ರದಲ್ಲಿ ಡಾಕ್ಟರ್ ಅಂಬರೀಶ್ ಅವರು ಬೆಂಗಳೂರು ಕಟ್ಟಿದ ಕೆಂಪೇಗೌಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಧ್ಯಕ್ಕೆ ಚಿತ್ರವೂ ಮೂರನೇ ಹಂತದ ಚಿತ್ರೀಕರಣಕ್ಕೆ ತಲುಪಿದೆ.

ಕಳೆದ ಒಂದು ತಿಂಗಳ ಚಿತ್ರೀಕರಣದಲ್ಲಿ ದರ್ಶನ್ ಪ್ರಿಯಾಮಣಿ ಸುಮಲತಾ ಅಂಬರೀಶ್ ಸಾಧು ಕೋಕಿಲ, ರಾಜೇಂದ್ರ ಕಾರಂತ್ ಶರತ್ ಲೋಹಿತ್ಶ್ವ ಪಾಲ್ಗೊಂಡಿದ್ದರು.

ಚಿಂತನ್ ಅವರು ಈ ಚಿತ್ರಕ್ಕಾಗಿ ಹಲವು ಮಾಹಿತಿಗಳನ್ನು ಭೂಮಿ ಕಬಳಿಕೆ ವಿಚಾರದಲ್ಲಿ ಒಟ್ಟುಗೂಡಿಸಿ ಚಿತ್ರಕತೆಗೆ ಮಾಹಿತಿ ನೀಡಿದ್ದಾರೆ. ಸತ್ಯ ಅವರಛಾಯಾಗ್ರಹಣ, ಹರಿಕೃಷ್ಣ ಅವರ ಸಂಗೀತ ರವಿ ವರ್ಮಾ ಅವರ ಸಾಹಸ ಮುರಳಿ, ಗಣೇಶ್ ಕಲಾಯಿ ಅವರ ನೃತ್ಯ ಸಂಯೋಜನೆ ತಾಂತ್ರಿಕ ವರ್ಗದಲ್ಲಿ ಇದ್ದಾರೆ.

ಇಬ್ಬರು ಜನಪ್ರಿಯ ವ್ಯಕ್ತಿಗಳು ಸೀನಮ ರಂಗದಿಂದ ರಾಜಕೀಯ ಸೇರಿ ಇಂದು ಕಾಂಗ್ರೆಸ್ಸ್ ಪಕ್ಷದ ರಾಜ್ಯ ಆಳ್ವಿಕೆಯಲ್ಲಿ ಮಂತ್ರಿಗಳಾಗಿರುವವರು ಡಾಕ್ಟರ್ ಅಂಬರೀಶ್ ಹಾಗೂ ಉಮಾಶ್ರೀ ಅವರು ಈ ಚಿತ್ರದ ಆಕರ್ಷಣೆಗಳಲ್ಲಿ ಒಂದು.

ಬುಲ್ಲೆಟ್ ಪ್ರಕಾಷ್, ಸಿದ್ದರ್ತ್ ಬಿರದರ್ ರೋಹಿತ್ ಭರತ್, ಸತೀಶ್ ಅರುಣಾಚಲಮ್ ಜಯರಾಂ ಚೇತನ್ ಲೋಕಿ,ಉದಯ್ ಹಾಗೂ ಇತರರು ಇದ್ದಾರೆ.
CD from CD Owners Ready

Copyright 2017 IndiaGlitz. All rights reserved. This material may not be published, broadcast, rewritten, or redistributed.Hindi | Tamil | Telugu | Malayalam | Kannada
Home | Tell a friend | Contact Us | Advertise | Terms | Privacy Policy | RSS/Content Syndication | Submit Showtimes

Copyright 2017 IndiaGlitz.com. All rights reserved.