close
Choose your channels

ನೀನಾದೆ ನಾ ಮುಂದಿನವಾರ

Thursday, October 9, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಇದೊಂದು ಅಗ್ನಿಪರೀಕ್ಷೆಯ ಕಾಲ ಒಂದು ಸಿನೆಮಾ ಕುಟುಂಬಕ್ಕೆ. ಹಿರಿಯ ನಟ ದೇವರಾಜ್,ಅವರ ಮಡದಿ ಚಂದ್ರಲೇಖ,ದೊಡ್ಡಮಗ ಪ್ರಜ್ವಲ್,ಸಣ್ಣ ಮಗ ಪ್ರಣಾಮ್ ಜೊತೆ ಸೇರಿ ನಿರ್ಮಿಸಿರುವ ಚಿತ್ರ ನೀನಾದೇನಾ ಇದೆ 17 ರಂದು ಬಿಡುಗಡೆ ಭಾಗ್ಯ ಕಾಣುತ್ತಲಿದೆ. ಮಗನ ಸಿನೆಮಾದಲ್ಲಿ ಅಪ್ಪ ದೇವರಾಜ್ ಸಹ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಡೈನಾಮಿಕ್ ವಿಷನ್ಸ್ ಲಾಂಛನದಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಅರ್ಪಿಸುವ ಚಂದ್ರದೇವರಾಜ್ ಅವರು ನಿರ್ಮಿಸಿರುವ ನೀನಾದೆ ನಾ ಚಿತ್ರ ಒಳ್ಳೆಯ ಪ್ರತಿಕ್ರಿಯೆ ಬಿಡುಗಡೆ ಮುಂಚೆ ದೊರಕಿದೆ. ಚಿತ್ರದ ಹಾಡುಗಳಿಗೆ ಪ್ರಶಂಸೆ ಸಿಕ್ಕಿದೆ.

ಕಂದಾಸ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಪ್ರಜ್ವಲ್ ದೇವರಾಜ್ ಅ ಭಿನಯಿಸಿದ್ದಾರೆ. ಪ್ರಿಯಾಂಕ ಕಂಡ್ವಾಲ್ ಹಾಗೂ ಅಂಕಿತಾಮಹೇಶ್ವರಿ ಈ ಚಿತ್ರದ ನಾಯಕಿಯರು. ಅವಿನಾಶ್,ಬುಲೆಟ್ ಪ್ರಕಾಶ್,ಕೆ.ಎಸ್.ಶ್ರೀಧರ್,ಪವಿತ್ರಲೋಕೇಶ್,ಪನ್ನಗಾಭರಣ,ಯತಿರಾಜ್,ಅಭಿಜಿತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಶ್ರೀನಿವಾಸ್ ರಾಮಯ್ಯರ ಛಾಯಾಗ್ರಹಣವಿದೆ. ಸುರೇಶ್ ಸಂಕಲನ,ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಹಾಗೂ ಕಂದಾಸ್ ಸಂಭಾಷಣೆ ಬರೆದಿದ್ದಾರೆ. ಪ್ರಣಾಮ್ ದೇವರಾಜ್ ಈ ಚಿತ್ರದ ಸಹ ನಿರ್ಮಾಪಕರು.

Follow us on Google News and stay updated with the latest!