close
Choose your channels

ಆರಂಭ ಡಬ್ಬಿಂಗ್ ಆರಂಭ

Saturday, November 22, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಎಸ್.ಅಭಿ ಹನಕೆರೆ ನಿರ್ದೇಶನದ ಆರಂಭ ಚಿತ್ರ ಡಬ್ಬಿಂಗ್ ಹಂತ ಮುಗಿಸಿ,ಮುಂದಿನ ಹಂತಕ್ಕೆ ಸಜ್ಜಾಗಿದೆ. ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಿ.ಗಣೇಶ್.ವಿ.ನಾಗೇನಹಳ್ಳಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪಾಂಡುಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

Aarambha

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಊರಾದ ಕಣಗಾಲ್ ನಲ್ಲಿ ಈ ಚಿತ್ರದ ಚಿತ್ರೀಕರಣ ನದೆದಿದೆ. ಈ ಚಿತ್ರದ ಪ್ರೀಮಿಯರ್ ಶೋನ್ನು ಕಣಗಾಲ್ ನಲ್ಲಿ ಆಯೋಜಿಸಿ ಚಿತ್ರರಂಗದ ಗಣ್ಯರನ್ನು ಆಹ್ವಾನಿಸುವ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿರುವ ನಿರ್ದೇಶಕ ಅಭಿ ಹನಕೆರೆ ಕಣಗಾಲ್ ನಲ್ಲಿ ಚಿತ್ರೀಕರಿಸಿರುವ ಮೊದಲ ಕನ್ನಡ ಚಿತ್ರ ಆರಂಭ ಎನ್ನುತ್ತಾರೆ.

ಗುರುಕಿರಣ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಗುರುಕಿರಣ್,ಗೋಟುರಿ,ಕವಿರಾಜ್,ಅಭಿ ಹನಕೆರೆ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ನಾಗರಾಜ್ ಛಾಯಾಗ್ರಹಣ,ಗಿರೀಶ್ ಸಂಕಲನ ಹಾಗೂ ಸಂದೀಪ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Follow us on Google News and stay updated with the latest!