close
Choose your channels

ಈ ವಾರ ತೆರೆಗೆ ‘ಉಗ್ರ0’

Wednesday, February 19, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಇಂಕ್ ಫೈನೈಟ್ ಅವರ ಪ್ರಥಮ ನಿರ್ಮಾಣದ ಚಿತ್ರ ಪ್ರಶಾಂತ್ ನೀಲ್ ಅವರ ಮೊದಲ ನಿರ್ದೇಶನ ಸಹ ಇದೆ ಶುಕ್ರವಾರ ಬಿಡುಗಡೆ ಆಗುತ್ತಿದೆ. ನೀಲ್ ಜೊತೆ ಚಿತ್ರಕಥೆ ಸಹಾಯ ಕೆ ರಾಮ್ ಒದಗಿಸಿದ್ದಾರೆ.

ಜನಪ್ರಿಯ ನಾಯಕ ಶ್ರೀಮುರಳಿ ಜೊತೆ ನಾಯಕಿಯಾಗಿ ಚೆಲುವೆ ಹರಿಪ್ರಿಯಾ ಅವರು ಅಭಿನಯಿಸಿದ್ದಾರೆ. ಇದೊಂದು ಅಪಾರ ವೆಚ್ಚದ ಚಿತ್ರ ಹಲವು ವಿಶೇಷಗಳನ್ನು ಒಳಗೊಂಡಿದೆ.

ರಾಮ್ ಲೀಲ ಎಂಬ ಹಿಂದಿ ಸಿನೆಮಕ್ಕೆ ಛಾಯಾಗ್ರಹಣ ಮಾಡಿದ ರವಿ ವೆರ್ಮಾನ್ ಅವರು ಮೊದಲ ಭಾರಿಗೆ ಕನ್ನಡ ಸಿನೆಮಾದಲ್ಲಿ ತಮ್ಮ ಚಾಕ ಚಕ್ಯತೆ ಅನ್ನು ನೀಡಿದ್ದಾರೆ. ನಗರದ ಹೈ ಲ್ಯಾಂಡ್ ಹೊಟೇಲ್ ಶ್ರೀರಾಮ್ ರೆಡ್ಡಿ ಅವರ ಮೊಮ್ಮಗ ಪ್ರಶಾಂತ್ ನೀಲ್ ಗುಲ್ಬರ್ಗಾ, ಕೆ ಜಿ ಎಫ್ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ.

ತಾಳ್ಮೆಯೇ ಮೂಲ ಮಂತ್ರ, ಅದು ಮೀರಿದರೆ ಎನಾಗುವುದು ಎಂಬ ವಿಚಾರ ಪ್ರಸ್ತಾಪ ಆಗಿರುವ ‘ಉಗ್ರ0’ ಸಿನೆಮವನ್ನು ತೂಗುದೀಪ ಸಂಸ್ಥೆ ವಿತರಣೆ ಮಾಡುತ್ತಿದೆ. ವಿದೇಶದಿಂದ ತಾಯಿಯ ಸಮಾಧಿ ಅನ್ನು ಹುಡುಕಿಕೊಂಡು ಬರುವ ನಾಯಕಿ ಹರಿಪ್ರಿಯಾ ನಿತ್ಯ ಪಾತ್ರದಲ್ಲಿ ಅನುಭವಿಸುವ ವಿಪರ್ಯಾಸ, ಪ್ರೀತಿ, ಪ್ರೇಮ ಈ ಸಿನೆಮಾದ ಕೆಲವು ಅಂಶಗಳಲ್ಲಿ ಇದೆ.

ರವಿ ಬರ್ಸೂರ್ ಅವರ ಸಂಗೀತ ತಿಲಕ್ ಶೇಕರ್, ಅತುಲ್ ಕುಲಕರ್ಣಿ, ಜೈ ಜಗದೀಶ್, ಅವಿನಾಷ್, ಪದ್ಮಜ ರಾವ್, ಸುರೇಶ್ಚಂದ್ರ, ಪ್ರದೀಪ್, ಶರತ್, ತುಂಗಾ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

Follow us on Google News and stay updated with the latest!