close
Choose your channels

ಉದ್ಯಾನನಗರಿಯಲ್ಲಿ ಜಗ್ಗಿ ಹಾಡು

Friday, March 14, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಅಭಿನಂದನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ಎನ್.ಎಸ್ ಶ್ರೀನಿವಾಸ ಅವರು ನಿರ್ಮಿಸುತ್ತಿರುವ ‘ಜಗ್ಗಿ ಚಿತ್ರಕ್ಕಾಗಿ ಗೌಸ್ಫ಼ಿರ್ ಬರೆದಿರುವ ‘ಯಾರಾದರೂ ಏನಾದರೂ ಎಂದೆಂದಿಗೂ ನೀನಾಗಿರು ಎಂಬ ಹಾಡಿನ ಚಿತ್ರೀಕರಣ ಉದ್ಯಾನನಗರಿಯ ಮಾನ್ಯತಾ ಟೆಕ್ಪಾರ್ಕ್, ನೈಸ್ರೋಡ್, ಮಿನರ್ವಮಿಲ್ ಮುಂತಾದ ಕಡೆ ನಡೆದಿದೆ. ಈ ಗೀತೆ ಚಿತ್ರದಲ್ಲಿ ನಾಯಕನನ್ನು ಪರಿಚಯಿಸುವ ಗೀತೆಯೂ ಹೌದು. ನಾಯಕ ಸುನೀಲ್ರಾಜ್ ಅವರು ಅಭಿನಯಿಸಿದ ಈ ಹಾಡಿಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ವಿಜಯಪ್ರಕಾಶ್ ಹಾಡಿದ್ದಾರೆ.

ಸುಲ್ತಾನ್ರಾಜ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸುನೀಲ್ರಾಜ್ ಅವರೇ ಕಥೆ ಬರೆದಿದ್ದಾರೆ. ಮಂಜುಭಾಸ್ಕರ್ ಅವರ ಸಹನಿರ್ಮಾಣವಿರುವ ಈ ಚಿತ್ರಕ್ಕೆ ರಮೇಶ್ಕೊಯಿರ ಛಾಯಾಗ್ರಹಣ, ಎಲ್ವಿನ್ ಜೋಶ್ವ ಸಂಗೀತ ನಿರ್ದೆಶನ, ಈಶ್ವರ್ ಸಂಕಲನ, ಮದನ್ ಹರಿಣಿ, ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ಕೌರವ ವೆಂಕಟೇಶ್, ಹ್ಯಾರಿಸ್ ಜಾನಿ ಸಾಹಸ ನಿರ್ದೇಶನವಿದೆ. ಸುನೀಲ್ರಾಜ್, ಅಹನಾ, ರಮೇಶ್ಭಟ್, ಶರತ್ಲೋಹಿತಾಶ್ವ, ಮುನಿ, ಬುಲೆಟ್ಪ್ರಕಾಶ್, ಪೆಟ್ರೋಲ್ ಪ್ರಸನ್ನ, ಮೋಹನ್ ಜುನೇಜ, ವಿಶ್ವ, ಕೆಂಪೇಗೌಡ, ಪ್ರಕಾಶ್, ಎಂ.ಎನ್.ಲಕ್ಷ್ಮೀದೇವಮ್ಮ, ಸಂಗೀತ, ರೋಷಿಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Follow us on Google News and stay updated with the latest!