close
Choose your channels

‘ಜೈ ಭಜರಂಗ ಬಲಿ’ ಎಫ್ಫೆಕ್ಟ್ಸ್

Wednesday, April 9, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಭಲೇ ಬಲಿ! ಜೈ ಭಜರಂಗ ಬಲಿ. ಕೆಲವು ಸಿನೆಮಗಳು ಮಾಧ್ಯಮದ ಮುಂದೆ ಸದ್ಧೆ ಮಾಡದೆ ಮುನ್ನುಗುತ್ತಿರುತ್ತದೆ. ಅದಕೊಂದು ಉದಾಹರಣೆ ಈ ‘ಜೈ ಭಜರಂಗ ಬಲಿ’.

ಹರಿಮೋನಿಯಂ ರೀಟ್ಸ್ ಲಾಂಛನದಲ್ಲಿ ಎಸ್.ಟಿ.ಪಾಲ್ರಾಜ್ ಅವರು ನಿರ್ಮಿಸುತ್ತಿರುವ ‘ಜೈ ಭಜರಂಗ ಬಲಿ‘ಚಿತ್ರಕ್ಕೆ ಹರಿಕೃಷ್ಣ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ಮುಕ್ತಾಯವಾಗಿದೆ. ರಾಜನ್ ಸ್ಟುಡಿಯೋದಲ್ಲಿ ಸ್ಪೆಷಲ್ ಎಫ್ಫೆಕ್ಟ್ಸ್ಅಳವಡಿಸಲಾಗುತ್ತಿದೆ. ಚೆನ್ನೈನಲ್ಲಿ ಗ್ರಾಫಿಕ್ಸ್ ಹಾಗೂ ಡಿ ಐ ಕಾರ್ಯ ಪ್ರಗತಿಯಲ್ಲಿದೆ.

‘ಸಂಗಮ ‘ಚಿತ್ರದ ನಂತರ ರವಿವರ್ಮ ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಅಜೇಯ್ರಾವ್ ಅಭಿನಯಿಸುತ್ತಿದ್ದಾರೆ. ಸಿಂಧೂಲೋಕನಾಥ್, ಅನಂತನಾಗ್, ರವಿಶಂಕರ್, ಶೋಭ್ರಾಜ್, ಆದಿಲೋಕೇಶ್, ಬುಲೆಟ್ಪ್ರಕಾಶ್, ಮಿತ್ರ, ಅರುಣ್ಸಾಗರ್, ಶ್ರುತಿನಾಯ್ಡು, ಟೆನ್ನಿಸ್ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಎ.ವೆಂಕಟೇಶ್ ಅವರ ಛಾಯಾಗ್ರಹಣವಿದೆ.

ಗಣೇಶ್ ಸಂಕಲನ, ಇಮ್ರಾನ್, ಕಲೈ ನೃತ್ಯ ನಿರ್ದೇಶನ ರವಿವರ್ಮ, ಡಿಫ಼ರೆಂಟ್ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮೋಹನ್ಬಿ.ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ಭಟ್ ಬರೆದರೆ ಸಂಭಾಷಣೆಯನ್ನು ವಿನಾಯಕರಾಮ ಕಲಗಾರು ಬರೆದಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಮಲೇಶಿಯಾದಲ್ಲಿ ಎಪ್ಪತ್ತು ದಿನಗಳ ಚಿತ್ರೀಕರಣವಾಗಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ.

Follow us on Google News and stay updated with the latest!