close
Choose your channels

ಬೆಳ್ಳಿ ಸೌಂಡ್

Wednesday, April 30, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಯಶಸ್ವಿನಿ ಸಿನಿ ಕ್ರಿಯೆಷನ್ಸ್ ಲಾಂಛನದಲ್ಲಿ ಹೆಚ್.ಆರ್.ರಾಜೇಶ್ ಅವರು ನಿರ್ಮಿಸುತ್ತಿರುವ ‘ಬೆಳ್ಳಿ ಚಿತ್ರಕ್ಕಾಗಿ ವಿ.ನಾಗೇಂದ್ರಪ್ರಸಾದ್ ಅವರು ಬರೆದಿರುವ ‘ಸೌಂಡು ಸೌಂಡು ಸೌಂಡು ಸುಮ್ನೇ ಕೇಳು ದೊಡ್ಡೋರ ಸೌಂಡು ಎಂಬ ಹಾಡಿನ ಚಿತ್ರೀಕರಣ ಮಿನರ್ವಮಿಲ್ನಲ್ಲಿ ನಿರ್ಮಿಸಲಾಗಿದ್ದ ಸೆಟ್ನಲ್ಲಿ ನಡೆದಿದೆ.

ಶಿವರಾಜಕುಮಾರ್, ವಿನೋದ್ಪ್ರಭಾಕರ್, ದೀಪಕ್, ಪ್ರಶಾಂತ್ ಹಾಗೂ ವೆಂಕಟೇಶ್ ಅವರು ಅಭಿನಯಿಸಿದ ಈ ಹಾಡಿಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ.

ಮಹೇಶ್(ಮುಸ್ಸಂಜೆಮಾತು) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಶ್ರೀಧರ್ ಸಂಗೀತ ನೀಡುತ್ತಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ಗಣೇಶ್ ಸಾಹಸ ನಿರ್ದೇಶನ, ಎ.ಹರ್ಷ, ಆದಿಲ್ ಶೇಖ್, ಮುರಳಿ ನೃತ್ಯ ನಿರ್ದೇಶನ ಹಾಗೂ ಸೀನು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಸೆಂಚುರಿ ಸ್ಟಾರ್ ಶಿವರಾಜಕುಮಾರ್, ಕೃತಿ ಖರಬಂದ, ವಿನೋದ್ಪ್ರಭಾಕರ್, ದೀಪಕ್, ಒರಟ ಪ್ರಶಾಂತ್, ವೆಂಕಟೇಶ್, ಆದಿಲೋಕೇಶ್, ಪದ್ಮಾವಾಸಂತಿ, ಬಿ.ವಿ.ರಾಧಾ,ಶ್ರೀನಿವಾಸಮೂರ್ತಿ, ರಮೇಶ್ಭಟ್, ನಾಗರಾಜ್, ಹರೀಶ್ ರೈ, ಲೋಕಿ, ನೀನಾಸಂ ಮಂಜು, ಭಾಸ್ಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅರವಿಂದ್ರಾವ್ ಕಾರ್ಯಕಾರಿ ನಿರ್ಮಾಪಕರಾಗಿರುವ ‘ಬೆಳ್ಳಿ ಚಿತ್ರಕ್ಕೆ ಕೆ.ಜೆ.ರಾಜಶೇಖರ್ ಸಹ ನಿರ್ಮಾಪಕರಾಗಿದ್ದಾರೆ.

Follow us on Google News and stay updated with the latest!