close
Choose your channels

ಐಸ್ಪೈಸ್ ಯು ಅರ್ಹತೆ

Friday, May 2, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ವಿ ಸಿ ಎನ್ ಮಂಜುನಾಥ್ ಕಾರ್ಯಕಾರಿ ನಿರ್ಮಾಪಕರಾಗಿ ಹಿಡಿದ ಕೆಲಸವನ್ನು ಅನೇಕ ಕಷ್ಟಗಳ ನಡುವೆ ಸಾದಿಸಿ ಇತ್ತೀಚಿಗೆ ‘ಐಸ್ ಪೈಸ್’ ಚಿತ್ರವನ್ನು ಸೆನ್ಸಾರ್ ಮಂಡಳಿ ಇಂದ ‘ಯು’ ಅರ್ಹತಾ ಪತ್ರ ಪಡೆಯುವಲ್ಲಿಗೆ ಯಶಸ್ವಿ ಆಗಿದ್ದಾರೆ.

ಸರಿಯಾದ ಸಮಯ ನೋಡಿಕೊಂಡು, ಉತ್ತಮ ಚಿತ್ರಮಂದಿರಗಳ ತಲಾಷ್ ಮಾಡಿ ಸಿನೆಮಾ ಬಿಡುಗಡೆ ಮಾಡಿ ಮಾಧ್ಯಮದಲ್ಲಿ ಹಾಗೂ ಪ್ರೇಕ್ಷಕರುಗಳಿಂದ ಜೈ ಅನ್ನಿಸಿಕೊಳ್ಳುವುದು ಈಗ ವಿ ಸಿ ಎನ್ ಮಂಜುನಾಥ್ ಅವರ ಮುಂದಿರುವ ಗುರಿ.

ಸುರೇಶ್ಮುತ್ತಪ್ಪ ಕ್ರಿಯೇಷನ್ಸ್ ಲಾಂಛನದಲ್ಲಿ ಸುರೇಶ್ಮುತ್ತಪ್ಪ ಅವರು ನಿರ್ಮಿಸಿರುವ ‘ಐಸ್ಪೈಸ್ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ರಂಗಾಯಣರಘು ಅವರು ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ತಾರಾಬಳಗದಲ್ಲಿ ನೀತು, ಸಿಂಧೂರಾವ್, ಮೇಘನಾ, ಚಂದ್ರಕಲಾಮೋಹನ್, ಬ್ಯಾಂಕ್ಜನಾರ್ದನ್ ಮುಂತಾದವರಿದ್ದಾರೆ. ಶಿವಸಾಯಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗೌರಿವೆಂಕಟೇಶ್ ಅವರ ಛಾಯಾಗ್ರಹಣವಿದೆ. ಸಾಗರ್ನಾಗಭೂಷಣ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ರಾಜೇಶ್, ವಿ.ಸಿ.ಎನ್.ಮಂಜುನಾಥ್, ಶಿವಸಾಯಿಕೃಷ್ಣ ಹಾಗೂ ಎಚ್.ಎಸ್.ವೆಂಕಟೇಶಮೂರ್ತಿ ಬರೆದಿದ್ದಾರೆ. ಶಿವಪ್ರಸಾದ್ ಸಂಕಲನ, ಸುಪ್ರೀಂಸುಬ್ಬು ಸಾಹಸ ನಿರ್ದೇಶನ, ಸದಾ, ರಾಜು, ತ್ರಿಭುವನ್ ನೃತ್ಯ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ವಿ.ಸಿ.ಎನ್.ಮಂಜುನಾಥ್.

Follow us on Google News and stay updated with the latest!