close
Choose your channels

ಈ ವಾರ ಸೂಪರ್ ರಂಗ

Monday, September 15, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಸೂಪರ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಹಾಗೂ ಮನರಂಜನೆ ಬಯಸುವ ಫ್ಯಾಮಿಲಿ ಪ್ರೇಕ್ಷಕರಿಗೆ ಸೂಪರ್ ರಂಗ ಉಪೇಂದ್ರ ಅವರ ಹುಟ್ಟು ಹಬ್ಬದ ಮಾರನೇ ದಿನವೇ ಬಿಡುಗಡೆ ಆಗುತ್ತಿದೆ.

ಸಾಂಗ್ ಅಲ್ಲಿ ಸಕ್ಕತ್ ರಂಗ,ಫೈಟ್ ಅಲ್ಲಿ ಪಂಟ್ರು ರಂಗ,ಲವ್ಗೆ ಲೈಕ್ ಇಟ್ಟ್ ರಂಗ,ಕಾಮಿಡಿಯಲ್ಲಿ ಕಿಲಾಡಿ ರಂಗ,ಟೋಟಲ್ ಆಗಿ ಫ್ಯಾಮಿಲಿ ಇಷ್ಟ ಪಡೋ ಸೂಪರ್ ರಂಗ

ಸೂಪರ್ ರಂಗ ಕನ್ನಡ ಸಿನೆಮಾ ನಿರ್ಮಾಪಕ ಕೆ ಮಂಜು ಅವರ ಬಹುಕೋಟಿ ವೆಚ್ಚದ ಚಿತ್ರ,ಕೆ ಮಂಜು ಸಿನೆಮಾಸ್ ಬ್ಯಾನ್ನರ್ ಅಡಿಯಲ್ಲಿ ಬಹು ನಿರೀಕ್ಷಿತ ಚಿತ್ರ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಸೂಪರ್ ರಂಗ ಚಿತ್ರದ ಹಾಡೊಂದು ಯುರೋಪ್ ದೇಶದ ಸ್ಲೊವೇನಿಯ,ಸೆಳ್ಳೈ,ಲುಜಾಣ,ಐಸ್ ಕವ್ವ,ಫುಟ್ ಸ್ಟ್ರೀಟ್,ಚರ್ಚ್ ಸರ್ಕಲ್,ಬ್ಲೆಡ್ ರಿವರ್,ರಸ್ತೆಗಳು ಹಾಗೂ ಫೋರ್ಟ್ ಗಳಲ್ಲಿ ಚಿತ್ರೀಕರಿಸಲಾಗಿದೆ.

ಸಾಧು ಕೋಕಿಲ ಅವರ ನಿರ್ದೇಶನದಲ್ಲಿ ಉಪೇಂದ್ರ ಅವರ ಜೊತೆ ಇದು ಮೂರನೇ ಸಿನೆಮಾ. ಈ ಹಿಂದೆ ರಕ್ತ ಕಣ್ಣೀರು ಹಾಗೂ ಅನಾಥರು ಸಿನೆಮಗಳಿಂದ ಈ ಜೋಡಿ ಮೋಡಿ ಮಾಡಿತ್ತು.ಕೆ ಮಂಜು ನಿರ್ಮಾಣದ ಸೂಪರ್ ರಂಗ ಅರ್ಜುನ್ ಜನ್ಯ ಅವರ ಸಂಗೀತ,ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣ,ಜೋನಿ ಹರ್ಷ ಅವರ ಸಂಕಲನ ಈ ಚಿತ್ರಕ್ಕೆ ಇದೆ.

ಸೂಪರ್ ರಂಗ ಚಿತ್ರದಲ್ಲಿ ಇದೆ ಮೊದಲ ಬಾರಿಗೆ ರೋಟೊ ಗ್ರಫಿ ತಂತ್ರಜ್ಞಾನದಲ್ಲಿ ಡಾನ್ಸ್ ರಾಜ ಡಾನ್ಸ್..... ಹಾಡಿಗೆ ಸಕ್ಕತ್ ಪರಿಶ್ರಮವಹಿಸಿದ್ದಾರೆ ಛಾಯಾಗ್ರಾಹಕ ಅಶೋಕ್ ಕಶ್ಯಪ್.

ಉಪೇಂದ್ರ,ಕೃತಿ ಖರಬಂದ,ರಘು ಮುಖರ್ಜಿ,ಪ್ರಿಯಾಂಕ,ದೊಡ್ಡಣ್ಣ,ರಂಗಾಯಣ ರಘು,ಬುಲ್ಲೆಟ್ ಪ್ರಕಾಷ್,ದಯಾನಂದ,ಸಿದ್ಲಿಂಗು ಶ್ರೀಧರ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

Follow us on Google News and stay updated with the latest!