close
Choose your channels

ಸೊರಗಿದ ಸೂಪರ್, ಇಳಿದ ಪವರ್

Friday, October 10, 2014 • Tamil Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

Sharan, Upendra, Puneeth Rajakumar

ಸೊರಗಿದೆ ಸೂಪರ್ ರಂಗ,ಇಳಿದ ಪವರ್,ಮುನ್ನಡೆದ ಅಧ್ಯಕ್ಷ!

ಕನ್ನಡದ ಎರಡು ಸೂಪರ್ ಸ್ಟಾರ್ ಸಿನೆಮಗಳು ಚಿತ್ರಮಂದಿರದಲ್ಲಿ ಇಳಿಮುಖ ಕಂಡಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪವರ್ ಸ್ಟಾರ್ ಏಳನೇ ವಾರಕ್ಕೆ 30 ಚಿತ್ರಮಂದಿರಗಳಿಗೆ ಇಳಿದಿದೆ,ಸೂಪರ್ ಸ್ಟಾರ್ ಉಪೇಂದ್ರ ಅವರ ಸೂಪರ್ ರಂಗ ಅವರ ಚಿತ್ರ ನಾಲ್ಕನೇ ವಾರಕ್ಕೆ 25 ಚಿತ್ರಮಂದಿರಗಳಿಗೆ ಸೊರಗಿದೆ.

ಅಂದಹಾಗೆ ಪವರ್ ಸ್ಟಾರ್ ಕನ್ನಡ ಸಿನೆಮಾ 250 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು ಮೊದಲ ದಿವಸ. ಸೂಪರ್ ರಂಗ 175 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು ತಿಳಿದ ವಿಚಾರ.

ಅಂದ ಮಾತ್ರಕ್ಕೆ ಈ ಎರಡು ಸಿನೆಮಗಳು ಸೋಲು ಅಂತ ಹೇಳುವ ಹಾಗಿಲ್ಲ. ಪುನೀತ್ ರಾಜಕುಮಾರ್ ಹಾಗೂ ಉಪೇಂದ್ರ ಅವರ ಸಿನೆಮಗಳು ಟಿ ವಿ ಹಕ್ಕಿನಲ್ಲೇ ನಿರ್ಮಾಪಕರುಗಳನ್ನು 30 ಪರ್ಸೆಂಟ್ ಸೇಫ್ ಮಾಡಿಬಿಟ್ಟಿತ್ತು. ಹಾಕಿದ ಹಣಕ್ಕೆನೂ ಇಬ್ಬರು ಸೂಪರ್ ಸ್ಟಾರ್ ಗಳ ಸಿನೆಮಾ ಮೋಸ ಮಾಡಿಲ್ಲ.

ವಿಚಾರ ಏನಪ್ಪಾ ಅಂದರೆ ನಗೆ ನಟ ಶರಣ್ ಅವರ ಅಧ್ಯಕ್ಷ ಸೂಪರ್ ಪವರ್ ಬಾಕ್ಸ್ ಆಫೀಸು ಅಲ್ಲಿ ಗಳಿಸಿದ್ದು. ಇಬ್ಬರು ಸೂಪರ್ ಸ್ಟಾರ್ ಗಳಿಗಿಂತ 104 ಸಿನೆಮಾಗಳ ಶರಣ್ ಹಿರಿಯ ನಟ ಸರಿ. 100 ನಂತರ ಅವರು ಹೀರೋ ಅದವರು. ಒಂದೇ ಎಟಿಗೆ ನಾಲ್ಕು ಸೂಪರ್ ಹಿಟ್ ಸಿನೆಮಗಳು ಅವರ ಪಾಲಾಗಿದೆ.

ಹಾಗೆಯೇ ದುನಿಯಾ ವಿಜಯ್ ಅವರ ಸಿಂಹಾದ್ರಿ ಈಗ ಬಹದ್ದೂರ್ ಮುಂದೆ ಬಾಕ್ಸ್ ಆಫೀಸು ಅಲ್ಲಿ ತಗ್ಗಿದೆ ಎಂಬುದು ಒಪ್ಪತಕ್ಕ ವಿಚಾರ.

Follow us on Google News and stay updated with the latest!