ಅಗ್ರಜ ಯು / ಎ

  • IndiaGlitz, [Wednesday,January 15 2014]

ದಿ ಗ್ರೇಟ್ ಇಂಡಿಯನ್ ಮೂವಿ ಕ್ರಿಯೇಟರž್ಸ್ ಲಾಂಛನದಲ್ಲಿ ಚಲನಚಿತ್ರ ಸಂಕಲನಕಾರ,ಟಿ.ಗೋವರ್ಧನ್,ನಿರ್ಮಾಣದ ಮೊದಲ ಚಿತ್ರ ಭಾರೀ ಬಡ್ಜೆಟ್ಟಿನ ಅಗ್ರಜ ಚಿತ್ರಕ್ಕೆ ನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದ್ದು ಶೀಘ್ರದಲ್ಲೇ ಬಿಡುಗಡೆಯಾಗಲಿರು ಈ ಚಿತ್ರದ ನಿರ್ದೇಶನ – ಶ್ರೀನಂದನ್. ಇದು ಇವರ ಪ್ರಥಮ ನಿರ್ದೇಶನ ಚಿತ್ರ.

ಪ್ರಥಮ ಬಾರಿಗೆ ಜಗ್ಗೇಶ್ ಹಾಗೂ ದರ್ಶನ್ ಅವರು ಅಭಿನಯಿಸಿರುವ ಈ ಚಿತ್ರದ ಮೂಲ ಕಥೆ ಆರ್ ಪಿ ಪಟ್ನಾಯಕ್ ಅವರ ಅಭಿನಯಿಸಿದ‘ಬ್ರೊಕರ್’2010 ತೆಲುಗು ಸಿನೆಮಾದ್ದು.

ಛಾಯಾಗ್ರಹಣ - ರಮೇಶ್ ಬಾಬು,ಸಂಗೀತ - ನರೇನ್ ರಾಜ್,ಸಾಹಸ-ರಾಮ್ಲಕ್ಷ್ಮಣ್- ರವಿವರ್ಮ,ಸಂಭಾಷಣೆ - ಸಂತೋಷ್,ಮಂಜುಪ್ರಸಾದ್,ಕಲೆ-ಪಿ.ವಿ. ಜಾನ್,ನಿರ್ವಹಣೆ – ವೇಣುಗೋಪಾಲ್.

ನಾಯಕಿಯರಾಗಿ ಪೂರ್ಣಿಮಾ, ಅರುಂಧತಿ,ಕಾಮನಾ ಜೇಠ್ಮಲಾನಿ, ಸಂಜನ, ಹಾರ್ದಿಕ ಶೆಟ್ಟಿ ಇದ್ದಾರೆ. ಪೋಷಕ ಕಲಾವಿದರಾಗಿ ಸದಾಶಿವ ಬ್ರಹ್ಮಾವರ್, ರಂಗಾಯಣ ರಘು, ಅಚ್ಚುತ್ ಕುಮಾರ್,ಸುಚೇಂದ್ರಪ್ರಸಾದ್,ಬಿರಾದರ್, ಕುರಿ ಪ್ರತಾಪ್, ಜೀವನ್, ಅರುಣ್ ಕುಮಾರ್, ಶ್ರೀನಿವಾಸಪ್ರಭು, ರಘುನಾಥರಾವ್ ಕೆ ಯಾದವ್ ಹಾಗೂ ನಿರ್ದೇಶಕ ಸಾಯಿಪ್ರಕಾಶ್, ಅಭಿನಯಿಸುತ್ತಿದ್ದಾರೆ.