ಆಕ್ಟೋಪಸ್ ದ್ವಿಭಾಷಾ ಚಿತ್ರ

  • IndiaGlitz, [Thursday,September 04 2014]

ಅನೇಕ ಪ್ರಾಣಿಗಳ ಹೆಸರಿನಲ್ಲಿ ಈಗ ಚಿತ್ರಗಳು ಮೂಡಿಬಂದಿದೆ. ಆಕ್ಟೋಪಸ್ ಒಂದು ಬಾಕಿ ಉಳಿದಿತ್ತು. ಈಗ ಅದರ ಹೆಸರಲ್ಲೂ ಚಿತ್ರ ಪ್ರಾರಂಭವಾಗಿದೆ. ಕೆಲವು ದಿನಗಳ ಹಿಂದೆ ಹಾಡುಗಳ ಧ್ವನಿಮುದ್ರಣ ಶುರು ಆಯಿತು. ಸೆಪ್ಟಂಬರ್ 4 ರಿಂದ ಚಿತ್ರೀಕರಣಕ್ಕೆ ಮುಹೂರ್ತ ನಡೆಯುತ್ತಿದೆ.

ಶ್ರೀಚರಂತ್ ಫ಼ಿಲಂಸ್ ಲಾಂಛನದಲ್ಲಿ ಡಿ.ಸಿ.ಪ್ರಸನ್ನಕುಮಾರ್ ದೊಡ್ ಬೆಲೆ ಅವರು ನಿರ್ಮಿಸುತ್ತಿರುವ ಆಕ್ಟೋಪಸ್ ಚಿತ್ರಕ್ಕೆ ಸಂಗೀತ ನಿರ್ದೇಶಕ ಎ.ಕೆ.ರಿಶಾಲ್ ಸಾಯಿ ಅವರ ಸಾರಥ್ಯದಲ್ಲಿ ಶ್ರೀಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ನಡೆದಿದೆ. ಕೆ.ಕಲ್ಯಾಣ್ ಬರೆದಿರುವ ಹಾಡುಗಳನ್ನು ಜೈಹೋ ಖ್ಯಾತಿಯ ವಿಜಯಪ್ರಕಾಶ್,ರಾಜೇಶ್ ಕೃಷ್ಣ ಹಾಗೂ ಸುನೀತ ಹಾಡಿದ್ದಾರೆ.

ಸೆಪ್ಟಂಬರ್ ೪ರಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರ ಕನ್ನಡ ಹಾಗೂ ತಮಿಳಿನಲ್ಲಿ ನಿರ್ಮಾಣವಾಗುತ್ತಿದೆ. ಬೆಂಗಳೂರು,ಶ್ರೀರಂಗಪಟ್ಟಣ ಹಾಗೂ ಚೆನ್ನೈನಲ್ಲಿ ಚಿತ್ರೀಕರಣ ನಡೆಯಲಿದೆ.

ಪಿ.ಅಣ್ಣಯ್ಯ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಎಂ.ರಾಜೇಂದ್ರಕುಮಾರ್ ಆರ್ಯ ಚಿತ್ರಕಥೆ ಬರೆದಿದ್ದಾರೆ. ಮನೋಹರ್ ಜೋಷಿ ಛಾಯಾಗ್ರಹಣ,ಕಲೈ,ಮದನ್ - ಹರಿಣಿ ನೃತ್ಯ ನಿರ್ದೇಶನ ಹಾಗೂ ರವಿವರ್ಮ,ಉದಯ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ

ಕಿಶೋರ್,ಯಜ಼್ಞಶೆಟ್ಟಿ,ಅಶ್ವಿನಿ,ತಾರಾ,ಶರತ್ ಲೋಹಿತಾಶ್ವ,ತಿಲಕ್,ಅವಿನಾಶ್,ಸಂಪತ್ ರಾಮ್,ಬುಲೆಟ್ ಪ್ರಕಾಶ್,ಬ್ಯಾಂಕ್ ಜನಾರ್ದನ್ ಮುಂತಾದವರಿದ್ದಾರೆ.