ಆಕ್ರಮಣ ಈ ವಾರ

  • IndiaGlitz, [Monday,July 07 2014]

ಆಕ್ರಮಣ ಕನ್ನಡ ಸಿನೆಮಾ ಪ್ರಶಾಂತ್ ಕುಮಾರ್ ಅವರ ಚೊಚ್ಚಲ ನಿರ್ದೇಶನದಲ್ಲಿ 3ಡಿ ಹಾಗೂ 2ಡಿ ತಂತ್ರಜ್ಞಾನದ ಸಿನೆಮಾ ಈ ವಾರ ಬಿಡುಗಡೆ ಆಗುತ್ತಿದೆ.

ಎ ಒನ್ ಸಿನೆಮಾಸ್ ಅಡಿಯಲ್ಲಿ ವಿಮಲ್ ಜೈನ್, ಸುರೇಶ್ ಜೈನ್, ಪರಮೇಶ್ ಜೊತೆ ಸೇರಿ ಪ್ರಶಾಂತ್ ಕುಮಾರ್ ಎನ್ ನಿರ್ಮಾಣ ಸಹಮಾಡಿದ್ದಾರೆ. ಆಕ್ರಮಣ ಮೈಸೂರಿನಲ್ಲಿ ಪ್ರಾರಂಭ ಆಗಿ ಮೈಸೂರಿನಲ್ಲಿ ಸಂಪೂರ್ಣಗೊಳಿಸಿದ ಚಿತ್ರ ಅಲ್ಲದೆ ಮೈಸೂರಿನ ಯುವಕ ಪ್ರಶಾಂತ್ ಕುಮಾರ್ ಎನ್ ಅವರ ಹಲವು ವರ್ಷಗಳ ಪ್ರಯತ್ನದ ಫಲ ಈ ಆಕ್ರಮಣ.

ರತೀಶ್ ಕುಮಾರ್ ಅವರು 3ಡಿ ಹಾಗೂ 2ಡಿ ತಂತ್ರಜ್ಞಾನದಲ್ಲಿ ಛಾಯಾಗ್ರಹಣ ಮೈಸೂರು,ಮಡಿಕೇರಿ,ಕಾಸರಗೊಡಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

ಚೆನ್ನೈ ಅಲ್ಲಿ ಬಾಲ ಅವರು 3ಡಿ ಗಾಗಿ, ಬೆಂಗಳೂರಿನಲ್ಲಿ ಜೀವನ್ ಅವರು 2ಡಿ ತಂತ್ರಜ್ಞಾನದ ಸಂಕಲನ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಸುನಿಲ್ ಆರ್, ಸತೀಶ್ ಆರ್ಯನ್ ಅವರ ಸಂಗೀತ, ಓಸ್ಕರ್ ಅಭಿಶೇಖ್,ಲಲಿತ ರಾಜ್ ವಿನಾಯಕ್,ಆದರ್ಶ್ ಎಂ ಎನ್ ಸಂಭಾಷಣೆ ಬರೆದಿದ್ದಾರೆ, ಶಂಕರ್, ಮಂಜುನಾಥ ರಾವು, ಆದರ್ಶ್, ಸತೀಶ್ ಆರ್ಯನ್ ಆವರ ಗೀತ ಸಾಹಿತ್ಯವಿದೆ. ದೀಪಕ್ ಅವರ ನೃತ್ಯ ನಿರ್ದೇಶನ, ಕೆ ಡಿ ವೆಂಕಟೇಶ್ ಅಂಡ್ ರಾಜೇಶ್ ಕಣ್ಣನ್ ಅವರ ಸಾಹಸ, ಸಹಾಯಕ ನಿರ್ದೇಶಕರಾಗಿ ಆದರ್ಶ, ಲಲಿತ ರಾಜ್ ವಿನಾಯಕ್, ಸಂಜೋತ ಅವರ ಸಹಾಯಕ ನಿರ್ದೇಶನ ಇದೆ.

ತಾರಾಗಣದಲ್ಲಿ ಖಾಕಿ ತೊಟ್ಟ ಅಧಿಕಾರಿಯಾಗಿ ರಘು ಮುಖರ್ಜಿ, ಡೈಸಿ ಷಾ, ಶಿಲ್ಪಿ ಶರ್ಮ, ಮಕರಂದ ದೇಶ್ಪಾಂಡೆ, ಅವಿನಾಷ್, ಸಿದ್ಲಿಂಗು ಶ್ರೀಧರ್, ಸುದರ್ಶನ್, ರಮೇಶ್ ಪಂಡಿತ್, ಡ್ಯಾನಿ ಕುಟ್ಟಪ್ಪ, ಮಾರ್ಕೊ, ಪ್ರಕಾಷ್ ಶೆಣೈ, ಕಿಶೋರಿ ಬಲ್ಲಾಳ್ ಹಾಗೂ ಇತರರು ಇದ್ದಾರೆ.