ಆಲೋನ್ ಕಾಪು ಬೀಚ್ ಬಳಿ ಮನೆ

  • IndiaGlitz, [Tuesday,December 02 2014]

ನಿರ್ದೇಶಕ ಜೆ ಕೆ ಎಸ್ ಅವರು ನಿರ್ದೇಶನ ಮಾಡುತ್ತಿರುವ ಮೂರನೇ ಕನ್ನಡ ಸಿನಿಮಾ ಆಲೋನ್ ಸುಂದರ ತಾಣವಾದ ಕಾಪು ಬೀಚ್ ಬಳಿ ಒಂದು ಮನೆಯನ್ನು ನಿರ್ಮಿಸಿ ಅಲ್ಲಿಯೇ ಬಹುತೇಕ ಚಿತ್ರೀಕರಣ ಮಾಡಲಾಗಿದೆ.

ಸತತವಾಗಿ 26 ದಿವಸಗಳ ಕಾಲ ಚಿತ್ರೀಕರಣ ಮಾಡಿರುವ ಜೆ ಕೆ ಎಸ್ ಅವರು ಗೋವ ರಾಜ್ಯದಲ್ಲೂ 5ದಿವಸಗಳ ಕ್ಲೈಮಾಕ್ಸ್ ಚಿತ್ರೀಕರಣ ಬಾಕಿ ಇಟ್ಟುಕೊಂಡಿದ್ದಾರೆ.ಚಿತ್ರದ ವಿಶೇಷ ಪಾತ್ರದಲ್ಲಿ ಹಿಂದಿಯ ಪ್ರಸಿದ್ದ ನಟ ಸುನಿಲ್ ಶೆಟ್ಟಿ ಅವರ ಆಗಮನ ಆಗಲಿದೆ.

ಕಾಪು ಬೀಚ್ ಬಳಿ ನಿರ್ಮಾಣ ಆಗಿರುವ ಮನೆಯ ಒಡತಿ ನಾಯಕಿ ನಿಕೀಶ ಪಟೇಲ್. ಅವರ ಮನೆಯಲ್ಲಿ ಹಲವಾರು ಘಟನೆಗಳು ಜರಗುತ್ತವೆ.ಅವೆಲ್ಲವೂ ಹೆಜ್ಜೆ ಹೆಜ್ಜೆಗೆ ಕುತೂಹಲ ಮೂಡಿಸುವ ಸಂಧರ್ಭಗಳು.

ಕುತೂಹಲಕಾರಿ ಸಿನಿಮಾದ ತಾರಾಗಣದಲ್ಲಿ ಸುನಿಲ್ ಶೆಟ್ಟಿ,ನಿಕೀಶ ಪಟೇಲ್,ಇನಿಯ,ವಸಿಷ್ಠ,ಗಣೇಶ್,ಸಾಧು ಕೋಕಿಲ,ತಬ್ಲ ನಾಣಿ,ದಿಲೀಪ್,ಅವಿನಾಷ್,ಮಂಗಳೂರು ಸುರೇಶ್,ಶಾಂತಮ್ಮ ಹಾಗೂ ಇತರರು ಇದ್ದಾರೆ.

ನಿರ್ದೇಶಕ ಜೆ ಕೆ ಎಸ್ ಅವರು ಕನ್ನಡ,ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಏಕ ಕಾಲದಲ್ಲಿ ಚಿತ್ರೀಕರಣ ಮಾಡುತ್ತಿರುವ ಈ ಚಿತ್ರದ ನಿರ್ಮಾಪಕರು ಅನಂತ್ ಹಾಗೂ ಪಿ ಕೆ ಫುಡ್ಸ್ ಒಡೆಯ ರಾಮಲಿಂಗಯ್ಯ. ಸುಜಿತ್ ಶೆಟ್ಟಿ ಅವರ ಸಂಗೀತ ಹಾಗೂ ಜೈ ಆನಂದ್ ಅವರ ಛಾಯಾಗ್ರಹಣ ಒದಗಿಸಿದ್ದಾರೆ.