ಈ ವಾರ ಫೇರ್ ಅಂಡ್ ಲವ್ಲಿ

  • IndiaGlitz, [Monday,October 20 2014]

ಚಿತ್ರದ ಶೀರ್ಷಿಕೆ ಇಂದಲೇ ಒಂದು ಆಪ್ಯಾಯಮಾನ ಸಂತೋಷವನ್ನು ನೀಡಿರುವ ನಿರ್ಮಾಪಕಿ ಡಾಕ್ಟರ್ ಶಿಲ್ಪಾ ರಮೇಶ್ ರಮಣಿ ಅವರ ಜೇಡ್ ಪ್ಲಾಂಟ್ ಅಡಿಯಿಂದ ತಯಾರಾಗಿರುವ ಫೈರ್ ಅಂಡ್ ಲವ್ಲಿ 7.1 ಸೌಂಡ್ ಸಿದ್ದತೆ ಅಳವಡಿಸಿರುವ ಚಿತ್ರ ದೀಪಾವಳಿ ಹಬ್ಬ ಅಕ್ಟೋಬರ್ 24 ರಂದು ಶುಕ್ರವಾರ ಬಿಡುಗಡೆ ಆಗುತ್ತಿದೆ.

ನಿರ್ದೇಶಕ ರಘುರಾಮ್ ಅವರು ಫೇರ್ ಅಂಡ್ ಲವ್ಲಿ ಸಿನಿಮಾವನ್ನು ಸುಂದರ ಹಾಗೂ ಸುಮಧುರ ಆಗಿ ಮಾಡಿರುವುದು ಎಲ್ಲರಿಗೆ ತಿಳಿದಿದೆ.

ಚಿತ್ರಕ್ಕೆ ಕಥೆಯನ್ನು ಒದಗಿಸಿರುವವರು ನಟ ಹಾಗೂ ಪತ್ರಕರ್ತ ಯೆತಿರಾಜ್. ಜಗದೀಶ್ ವಾಲಿ ಅವರ ಛಾಯಾಗ್ರಹಣ ಇದೆ.

ಫೇರ್ ಆಗಿ ಶ್ವೇತ ಶ್ರೀವತ್ಸ ಇದ್ದರೆ,ಲವ್ಲಿ ಆಗಿ ಲವ್ಲಿ ಸ್ಟಾರ್ ಪ್ರೇಂಕುಮಾರ್ ಇದ್ದಾರೆ. ಹಿರಿಯ ನಿರ್ದೇಶಕ ಡಿ ರಾಜೇಂದ್ರ ಬಾಬು ಅವರ ಪುತ್ರಿ ನಕ್ಷತ್ರ ಒಂದು ಹಾಡಿನಲ್ಲಿ ಬರುವರು. ಆನಂದಪ್ರಿಯ ಅವರು ಸಂಭಾಷಣೆ ಹಾಗೂ ಚಿತ್ರಕತೆಯಲ್ಲಿ ತೊಡಗಿರುವುವರು.

ಫೇರ್ ಅಂಡ್ ಲವ್ಲಿ ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಈಗಾಗಲೇ ಭರ್ಜರಿ ಯಶನ್ನು ಕಂಡಿದೆ. ರಿಂಗಾಗಿದೆ ನನ್ನೆದೆ ಫೋನು....ಅನಿರೀಕ್ಷಿತ ಲೈಫ್ ಅಲ್ಲಿ....ಹಾಗೆ ಒಂದು ಮಾತು ಹೇಳುವೆ....ಈ ಕಾಣದ ಕಣ್ಣಿಗೆ... ಹಾಡುಗಳು ಸಕ್ಕತ್ ಮೇಲೋಡಿ ತುಂಬಿವೆ ಎಂದು ತಿಳಿದು ಬಂದಿದೆ.ಚಿತ್ರದ ನಾಯಕ,ನಾಯಕಿ ಅನೇಕ ಪ್ರದೇಶಗಳಲ್ಲಿ ಸಾವಿರಾರು ಸಿ ಡಿ ಗಳನ್ನು ಉಚಿತವಾಗಿ ನೀಡಿದ್ದಾರೆ.

ಥ್ರಿಲ್ಲರ್ ಮಂಜು ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ,ಜೋನಿ ಹರ್ಷ ಅವರ ಸಂಕಲನ,ಮದನ್ ಹರಿಣಿ ಹಾಗೂ ಕಲೈ ಅವರ ನೃತ್ಯ ನಿರ್ದೇಶನ,