ಎರಡು ಕನಸು ಮರುಕಳಿಸಿತು

  • IndiaGlitz, [Monday,December 22 2014]

ಎರಡು ಕನಸು...ಹಿಸ್ಟರಿ ರಿಪೀಟ್ಸ್ ಅಂದು 1974 ರಲ್ಲಿ ವಾಣಿ ಅವರ ಕಾದಂಬರಿ ಆಧಾರಿತ ಚಿತ್ರ ಬಿಡುಗಡೆ ಆಗಿ ಯಶಸ್ಸನ್ನು ಪಡೆದ ಚಿತ್ರ. ಡಾಕ್ಟರ್ ರಾಜಕುಮಾರ್,ಕಲ್ಪನ,ಮಂಜುಳ ಅಭಿನಯದ,ದೊರೈ-ಭಾಗ್ವನ್ ನಿರ್ದೇಶನದ,ರಾಜನ್=ನಾಗೇಂದ್ರ ಅವರ ಸುಮಧುರವಾದ ಸಂಗೀತದ ಎರಡು ಕನಸು ಬಾಕ್ಸ್ ಅಫ್ಫೀಸಿನಲ್ಲಿ ಚರಿತ್ರೆ ಬರೆದಿತು.

ಇಂದು 2014 ರಲ್ಲಿ ಎರಡು ಕನಸು ಹಿಸ್ಟರಿ ರಿಪೀಟ್ಸ್ ಎಂದು ತಯಾರಾಗಲು ಸಿದ್ದತೆ ಮಾಡಿಕೊಳ್ಳುತಿದೆ. 2015 ಜನವರಿ ಎರಡನೇ ವಾರದಿಂದ ಎರಡು ಕನಸು ಚಿತ್ರೀಕರಣ ಪ್ರಾರಂಭ ಎಂದು ಸ್ಟೆರ್ಲಿಂಗ್ ಮೂವಿ ಮಕೇರ್ಸ್ ನಿರ್ಮಾಪಕ ಅಶೋಕ್ ಕೆ ಬಿ ಹೇಳುತ್ತಾರೆ. ಮದನ್ ಈ ಚಿತ್ರದ ಮುಖಾಂತರ ಸ್ವತಂತ್ರ ನಿರ್ದೇಶಕ ಆಗುತ್ತಿದ್ದಾರೆ. ಇವರು ನಿರ್ದೇಶಕ ಓಂ ಪ್ರಕಾಷ್ ಬಳಿ ಸಹಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಂದಿನ ಎರಡು ಕನಸು ಚಿತ್ರಕ್ಕೆ ಸ್ವಲ್ಪವೂ ಕುಂದು ಬಾರದ ಹಾಗೆ ಮದನ್ ನಿರ್ದೇಶನ ಮಾಡಲಿದ್ದಾರೆ.

ಇಂದಿನ ನಾಯಕ ವಿಜಯ ರಾಘವೇಂದ್ರ. ಡಾಕ್ಟರ್ ರಾಜಕುಮಾರ್ ಅವರ ಸಂಬಂದಿ. ಸ್ಟೀವ್=ಕೌಶಿಕ್ ಜೋಡಿ ಇಂದು ವಿಜಯ ರಾಘವೇಂದ್ರ ಅಭಿನಯದ ಸಿನಿಮಾಕ್ಕೆ ಆಕಾಶ್ ಸ್ಟುಡಿಯೋ ಅಲ್ಲಿ ಹಾಡುಗಳ ಧ್ವನಿ ಮುದ್ರಣ ಕೆಲಸ ಪ್ರಾರಂಭ ಮಾಡಿದೆ. ಅಂದು ರಾಜನ್=ನಾಗೇಂದ್ರ ಜೋಡಿ ಇಂದು ಸ್ಟೀವ್-ಕೌಶಿಕ್ ಜೋಡಿ.

ಚಿತ್ರದ ತಾರಾಗಣ ಆಯ್ಕೆಗೆ ನಿರ್ದೇಶಕ ಹಾಗೂ ನಿರ್ಮಾಪಕರು ಹುಡುಕಾಟ ನಡೆಸುತ್ತಾ ಇದ್ದಾರೆ.