ಒಂದ್ ಛಾನ್ಸ್ ಕೊಡಿ ಮುಕ್ತಾಯ

  • IndiaGlitz, [Saturday,June 21 2014]

ಸಾಮಾನ್ಯವಾಗಿ ಸಿನೆಮಾ ರಂಗಕ್ಕೆ ಬಂದಮೇಲೆ ಬಹುತೇಕ ಕೇಳುವುದು ‘ಒಂದ್ ಛಾನ್ಸ್ ಕೊಡಿ’. ಕೆಲವರಿಗೆ ಸಿಕ್ಕುತೆ ಕೆಲವರಿಗೆ ಸೈಕಲ್ ಹೊಡಿತಾನೇ ಇರ್ಬೇಕು ಛಾನ್ಸ್ ಸಿಕ್ಕಿದ್ರು!

ಮೌಲ್ಯ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಎಂ. ಸುನೀಲ್ ಕುಮಾರ್ ನಿರ್ಮಾಣದ ಸತ್ಯಮಿತ್ರ ನಿರ್ದೇಶನದ ಒಂದ್ ಚಾನ್ಸ್ ಕೊಡಿ ಚಿತ್ರಕ್ಕೆ ಬಾಲಾಜಿ ಸ್ಟುಡಿಯೋವಿನಲ್ಲಿ ಹಿನ್ನೆಲೆ ಸಂಗೀತ ಕಾರ್ಯ ಸಾಗುತ್ತಿದೆ. ಚಿತ್ರದ ಛಾಯಾಗ್ರಹಣ - ಮ್ಯಾಥ್ಯೂರಾಜನ್, ಸಂಗೀತ - ಮೈಸೂರು ಮೋಹನ್, ನೃತ್ಯ - ನಾಗೇಶ್, ರಾಮು, ಸಾಹಸ - ಸುಪ್ರೀಂ ಸುಬ್ಬು, ಸಂಭಾಷಣೆ - ಬಿ.ಎಂ. ಮಧು, ಕಲೆ-ರೇವಣ್ಣ, ಸಹನಿರ್ದೇಶನ - ಪಿ.ಆರ್. ಲಕ್ಷ್ಮೀಪತಿ, ಸಾಲೋಮನ್ ಜಾರ್ಜ್, ನಿರ್ಮಾಣ ಮೇಲ್ವಿಚಾರಣೆ - ಗಂಗು, ಎಂಸಿ ಹೇಮಂತಗೌಡ - ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರವಿಶಂಕರ್ ಗೌಡ, ಪಟ್ರೆ ಅಜಿತ್, ಡಾ ನಂದಿನಿ, ಶೃತಿ, ಲಿಂಟೋ, ಬಿ.ಸಿ. ಪಾಟೀಲ್, ಶಂಕರ್ ರಾವ್, ಸಾಧುಕೋಕಿಲ, ಟೆನ್ನಿಸ್ ಕೃಷ್ಣ, ಮೂಗು ಸುರೇಶ, ಬ್ಯಾಂಕ್ ಜನಾಧನ್, ಬಿರಾದ್, ಹೊನ್ನವಳ್ಳಿ ಕೃಷ್ಣ, ಎಂ.ಎಸ್. ಉಮೇಶ್, ಮೋಹನ್ ಜುನೇಜ, ಮನ್ ದೀಪ್ ರಾಯ್, ತಬಲಾ ನಾಣಿ, ತೇಜ್ ವಿನಯ್ ಮುಂತಾದವರಿದ್ದಾರೆ.